Asianet Suvarna News Asianet Suvarna News

ಅಫ್ಘನ್‌ನಲ್ಲಿ ಆತ್ಮಾಹುತಿ ದಾಳಿ,  ಆರಗ ಜ್ಞಾನೇಂದ್ರ ಹೇಳಿಕೆ ನೀವೇ ಕೇಳಿ!

* ಕಾಬೂಲ್ ಏರ್ ಪೋರ್ಟ್ ಬಳಿ ಆತ್ಮಾಹುತಿ ದಾಳಿ
* ಅಫ್ಘಾನಿಸ್ತಾನದಲ್ಲಿ ಮುಗಿಯದ ಉಗ್ರರ ಅಟ್ಟಹಾಸ
* ರೇಪ್ ಝೋನ್ ಏರಿಯಾ ಅಂತ ಬೋರ್ಡ್ ಹಾಕಬೇಕಾ ಗೃಹ ಸಚಿವರೆ? 
* ಮೈಸೂರು ಪ್ರಕರಣದ ಬಗ್ಗೆ ಗೃಹ ಸಚಿವ ವಿವಾದಿತ ಹೇಳಿಕೆ

ಬೆಂಗಳೂರು(ಆ. 26) ಅಮೆರಿಕ ತನ್ನ ಸೇನೆಯನ್ನು ಕರೆದುಕೊಂಡು ಅಫ್ಘಾನಿಸ್ತಾನದಿಂದ ಹೊರಟು ನಿಂತಿದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದ ಬಳಿ ಆತ್ಮಾಹುತಿ ಬಾಂಬ್ ದಾಳಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಉಗ್ರರನ್ನು ಹೊರತು ಪಡಿಸಿದರೆ ಇನ್ಯಾರೂ ನೆಮ್ಮದಿಯ ನಿಟ್ಟುಸಿರುಬಿಡಲು ಸಾಧ್ಯವಾಗುತ್ತಿಲ್ಲ. ತಾಲಿಬಾನ್ ಆಟ್ಟಾಹಾಸ, ಕ್ರೌರ್ಯಕ್ಕೆ ನಲುಗಿರುವ ಅಮಾಯಕ ಆಫ್ಘಾನಿಸ್ತಾನ ಜನತೆ ಮೇಲೆ ಇದೀಗ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಜನರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಸದ್ಯದ ವರದಿ ಪ್ರಕಾರ ಈ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.

ರೇಪ್ ಝೋನ್ ಏರಿಯಾ ಅಂತ ಬೋರ್ಡ್ ಹಾಕಬೇಕಾ ಗೃಹ ಸಚಿವರೆ? 

ಸಂಜೆ ವೇಳೆ ಯುವತಿ ಅಲ್ಲಿಗೆ ಹೋಗಬಾರದಿತ್ತು..  ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡುತ್ತಿದ್ದಾರೆ.. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.   ಜವಾಬ್ದಾರಿ ಹುದ್ದೆಯಲ್ಲಿ ಇರುವ ವ್ಯಕ್ತಿ ಇಂಥ  ಹೇಳಿಕೆ ನೀಡಬಹುದೆ?  ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಗೃಹ ಸಚಿವರು ಹೇಳಿಕೆ  ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ