Asianet Suvarna News Asianet Suvarna News

ದೇಶದಲ್ಲಿ ಸೋಂಕು ಇಳಿಮುಖ, ಬೆಂಗಳೂರಿನಲ್ಲಿ ಮುಂದುವರೆದ ಏರಿಕೆ

- ದೇಶದಲ್ಲಿ 2ನೇ ಅಲೆ ಇಳಿಕೆಯ ಸುಳಿವು?

- 18 ರಾಜ್ಯಗಳಲ್ಲಿ ಇಳಿಕೆ, 16 ಕಡೆ ಏರಿಕೆ

- ಸೋಂಕು ಏರಿಕೆ: ಇಡೀ ದೇಶದಲ್ಲೇ ಬೆಂಗಳೂರು ನಂ.1

ಬೆಂಗಳೂರು (ಮೇ. 12):  ದೇಶದಲ್ಲಿ ನಿತ್ಯದ ಸೋಂಕಿನ ಪ್ರಮಾಣ 4 ಲಕ್ಷ ದಾಟಿ, ಸಾವಿನ ಪ್ರಮಾಣ 4000 ಮೀರಿ ಭಾರೀ ಆತಂಕ ಸೃಷ್ಟಿಯಾಗಿರುವಾಗಲೇ ಕೊರೋನಾ 2ನೇ ಅಲೆ ಇಳಿಕೆಯಾಗುವ ಆರಂಭಿಕ ಸುಳಿವು ಸಿಗಲಾರಂಭಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.  ರಾಜ್ಯದ ವಿಚಾರಕ್ಕೆ ಬಂದರೆ ಕಳೆದ 2 ವಾರದಿಂದ ಸೋಂಕು ಏರಿಕೆಯಾಗುತ್ತಿರುವ ದೇಶದ ಟಾಪ್‌ 15 ಜಿಲ್ಲೆಗಳಲ್ಲಿ ಬೆಂಗಳೂರು ನಂ.1 ಸ್ಥಾನದಲ್ಲಿದೆ. ಮೈಸೂರು 9ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಪತ್ರಕರ್ತರಿಗೆ ಉಚಿತ ವ್ಯಾಕ್ಸಿನ್ ಅಭಿಯಾನ; ಬೀದರ್‌ನಲ್ಲಿ ಪ್ರಭು ಚೌಹಾಣ್ ಚಾಲನೆ