ಕೊನೆಗೂ ಬಯಲಾಯ್ತು 'ಡ್ರಗ್ಸ್' ತಾರೆಯರ ಹೆಸರು; ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ನೋಡಿ..!

ಇಂದ್ರಜಿತ್ ಲಂಕೇಶ್ ಬಾಯ್ಬಿಟ್ಟ 15 ನಟ ನಟಿಯರು ಯಾರಿರಬಹುದು ಎಂಬ ಚರ್ಚೆ ಶುರುವಾಗಿದೆ. ಇವರಿರಬಹುದಾ? ಅವರಿರಬಹುದಾ? ಎಂಬ ಗುಸುಗುಸು ಶುರುವಾಗಿದೆ. ಅವರ ಬಗ್ಗೆ ಒಂದಷ್ಟು ಎಕ್ಸ್‌ಕ್ಲೂಸಿವ್ ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 
 

First Published Sep 1, 2020, 4:11 PM IST | Last Updated Sep 1, 2020, 4:11 PM IST

ಬೆಂಗಳೂರು (ಸೆ. 01): ಇಂದ್ರಜಿತ್ ಲಂಕೇಶ್ ಬಾಯ್ಬಿಟ್ಟ 15 ನಟ ನಟಿಯರು ಯಾರಿರಬಹುದು ಎಂಬ ಚರ್ಚೆ ಶುರುವಾಗಿದೆ. ಇವರಿರಬಹುದಾ? ಅವರಿರಬಹುದಾ? ಎಂಬ ಗುಸುಗುಸು ಶುರುವಾಗಿದೆ. ಅವರ ಬಗ್ಗೆ ಒಂದಷ್ಟು ಎಕ್ಸ್‌ಕ್ಲೂಸಿವ್ ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

ಲಿಸ್ಟ್‌ನಲ್ಲಿ 9 ಮಂದಿ ನಟಿಯರು, 6 ನಟರಿದ್ದಾರೆ. ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಈ ಲಿಸ್ಟ್‌ನಲ್ಲಿದ್ದಾರೆ. ಪಬ್, ಕ್ಲಬ್‌ನಲ್ಲಿ, ಡ್ರಗ್ಸ್‌ ನಶೆಯಲ್ಲಿರುವ ಅ ನಟಿಯ ವಿಡಿಯೋ ಲಭ್ಯವಾಗಿದೆ.  ಡ್ರಗ್ಸ್‌ ಪೆಡ್ಲರ್‌ಗಳ ಜೊತೆ ಅ ನಟಿಯ ಸಂಪರ್ಕವಿದೆ ಎಂಬುದು ಗೊತ್ತಾಗಿದೆ. ಹಿರಿಯ ನಟನ ಮಗನ ಹೆಸರು ಬಯಲಾಗಿದೆ. ಅವರ ಫಾರ್ಮ್ ಹೌಸ್ ಕೂಡಾ ಬಹಿರಂಗಪಡಿಸಿದ್ದಾರೆ. ಇನ್ನೊಬ್ಬ ಸ್ಟಾರ್ ದಂಪತಿಯಿಬ್ಬರೂ ಡ್ರಗ್ಸ್‌ ವ್ಯಸನಿಗಳು. ಇವೆಲ್ಲವೂ ಕೋಡ್‌ವರ್ಡ್‌ನಲ್ಲಿದ್ದೂ ಡಿಕೋಡ್‌ ಮಾಡಿಕೊಳ್ಳಬೇಕಾಗಿದೆ. 

ಸಿಸಿಬಿ ಡ್ರಿಲ್‌ಗೆ ರೆಡಿ; ಇಂದ್ರಜಿತ್ ಬಾಯ್ಬಿಟ್ಟ ನಟ- ನಟಿಯರಿಗೆ ಢವಢವ..!

Video Top Stories