ಕನ್ನಡ ನಟರಲ್ಲಿ ಯಾರಿಗೆ ಹೆಚ್ಚು ಮಹಿಳಾ ಫ್ಯಾನ್ಸ್ ಇದ್ದಾರೆ: ಫ್ಯಾಮಿಲಿ ಆಡಿಯೆನ್ಸ್‌ಗೆ ಕನ್ನಡದ ಯಾವ ಸ್ಟಾರ್ ಫೇವರಿಟ್?
ಕಿಚ್ಚನ ಸ್ಟೈಲ್ಗೆ ಖದರ್ಗೆ ಹೆಚ್ಚು ಬೋಲ್ಡ್ ಆಗೋದೇ ಮಹಿಳಾ ಫ್ಯಾನ್ಸ್. ಸುದೀಪ್ ಸಿನಿಮಾಗಳಲ್ಲಿ ಮಹಿಳೆಯರನ್ನ ಗೌರವಿಸೋ ದೃಶ್ಯಗಳು ಹೆಚ್ಚಿರುತ್ತೆ. ನೀವು, ಹೋಗಿ, ಬನ್ನಿ ಅಂತ ಕಿಚ್ಚ ಫಿಮೇಲ್ ಕ್ಯಾರೆಕ್ಟರ್ಗಳನ್ನ ಗೌರವದಿಂದ ಕರಿತಾರೆ.
ಸ್ಯಾಂಡಲ್‌ವುಡ್‌ನಲ್ಲಿ ಮಾಸ್ ಮತ್ತು ಕ್ಲಾಸ್ ಹೀರೋಗಳಿಗೇನು ಕೊರತೆ ಇಲ್ಲ. ಮಾಸ್ ಹೀರೋಗಳು ಮಾಡಿದ ಸಿನಿಮಾಗಳು ಮೂರೇ ದಿನಕ್ಕೆ ಥಿಯೇಟರ್ ಕಾಲಿ ಮಾಡ್ಕೊಂಡು ಹೋದ ಉದಾಹರಣೆಯನ್ನ ಮೊನ್ನೆ ಮೊನ್ನೆವರೆಗೂ ನೀವೆಲ್ಲಾ ನೋಡಿದ್ದೀರಾ. ಆದ್ರೆ ಕ್ಲಾಸ್ ಹೀರೋಗಳು ಹಾಗಲ್ಲ. ಅವರ ಮೂವಿಗಳು ಚಿತ್ರಮಂದಿರಗಳಲ್ಲಿ ಮಿನಿಮಮ್ ಅಂದ್ರು 25 ದಿನ ರನ್ನಿಂಗ್ ಸಕ್ಸಸ್ಫುಲ್ ಕಾಣುತ್ತವೆ. ಅದಕ್ಕೆ ಕಾರಣ ಅವರಿಗಿರೋ ಮಹಿಳಾ ಫ್ಯಾನ್ ಬೇಸ್, ಅಷ್ಟೆ ಅಲ್ಲ ಫ್ಯಾಮಿಲಿ ಆಡಿಯೆನ್ಸ್.. ಅಂತಹ ಫೀಮೇಲ್ ಫ್ಯಾನ್ಸ್ ಹಾಗು ಫ್ಯಾಮಿಲಿ ಆಡಿಯೆನ್ಸ್ ಹೆಚ್ಚಿರೋ ಟಾಪ್ ಫೈವ್ ಕನ್ನಡ ನಟರ ಪಟ್ಟಿಯೊಂದು ಈಗ ಬಿಡುಗಡೆ ಆಗಿದೆ. ಆಲ್ ಇಂಡಿಯಾ ಕಟೌಟ್ ಬಾದ್ ಷಾ ಕಿಚ್ಚ ಸುದೀಪ್ ಕನ್ನಡದ ಸ್ಟಾರ್ ಸ್ಟೈಲ್ ಐಕಾನ್.
ಕಿಚ್ಚನ ಸ್ಟೈಲ್ಗೆ ಖದರ್ಗೆ ಹೆಚ್ಚು ಬೋಲ್ಡ್ ಆಗೋದೇ ಮಹಿಳಾ ಫ್ಯಾನ್ಸ್. ಸುದೀಪ್ ಸಿನಿಮಾಗಳಲ್ಲಿ ಮಹಿಳೆಯರನ್ನ ಗೌರವಿಸೋ ದೃಶ್ಯಗಳು ಹೆಚ್ಚಿರುತ್ತೆ. ನೀವು, ಹೋಗಿ, ಬನ್ನಿ ಅಂತ ಕಿಚ್ಚ ಫಿಮೇಲ್ ಕ್ಯಾರೆಕ್ಟರ್ಗಳನ್ನ ಗೌರವದಿಂದ ಕರಿತಾರೆ. ಅಷ್ಟೆ ಅಲ್ಲ ಫ್ಯಾಮಿಲಿ ಪ್ಯಾಕ್ಡ್ ಸಿನಿಮಾಗಳನ್ನ ಸುದೀಪ್ ಹೆಚ್ಚು ಮಾಡ್ತಾರೆ. ಹೀಗಾಗಿ ಅಭಿನಯ ಚಕ್ರವರ್ತಿಗೆ ಕನ್ನಡದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಈಗ ಕನ್ನಡದಲ್ಲಿ ಅತಿ ಹೆಚ್ಚು ಫೀಮೇಲ್ ಫ್ಯಾನ್ಸ್ ಇರೋ ಕನ್ನಡದ ಮೊದಲ ನಟ ಅನ್ನೋ ಹೆಗ್ಗಳಿಕೆ ಕಿಚ್ಚ ಪಾಲಾಗಿದೆ. ಮಹಿಳಾ ಅಭಿಮಾನಿಗಳ ಮನ ಗೆದ್ರೆ ಆ ಹೀರೋಗೆ ಲಾಂಗ್ ಲೈಫ್ ಪಕ್ಕಾ. ಯಾಕಂದ್ರೆ ಎಂತದ್ದೇ ಸಿನಿಮಾ ಬಂದ್ರು ಮೊದಲ ವಾರ ಪ್ರದರ್ಶನ ಆಗೋದಕ್ಕಿಂತ ಎರಡನೇ ವಾರ ಹೌಸ್ ಫುಲ್ ಆದ್ರೆ ಆ ಸಿನಿಮಾ ಬಾಕ್ಸಾಫಿಸ್ ಗೆಲ್ಲೋದು ಪಕ್ಕಾ.
ಹಾಗೆ ಎರಡನೇ ವಾರ ಚಿತ್ರಮಂದಿರ ತುಂಬಿಸೋದು ಮಹಿಳಾ ಅಭಿಮಾನಿಗಳೇ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಕೂಡ ಹೆಚ್ಚು ಮಹಿಳಾ ಅಭಿಮಾನಿಗಳನ್ನ ಹೊಂದಿರೋ ಕನ್ನಡದ ಎರಡನೇ ಸ್ಟಾರ್ ಅನ್ನೊ ಪಟ್ಟ ಪಡೆದಿದ್ದಾರೆ. ರಾಕಿ ಕೆಜಿಎಫ್ನಿಂದ ಮಾಸ್ ಸಿನಿಮಾ ಮಾಡಿದ್ದಾರೆ. ಆದ್ರೆ ಅದಕ್ಕು ಮೊದಲು ರಾಕಿಯ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ಫೀಮೇಲ್ಸ್ ಗೆ ಇಷ್ಟ ಆಗುವಂತಹ ಸಿನಿಮಾಗಳನ್ನೇ ಕೊಟ್ಟಿದ್ದಾರೆ. ಹೀಗಾಗಿ ಯಶ್ಗೆ ಎರಡನೇ ಸ್ಥಾನ ದಕ್ಕಿದೆ. ಇನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವಿಷಯದಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಫ್ಯಾಮಿಲಿ ಸಮೇತ ಬಂದು ನೋಡೋ ಸಿನಿಮಾಗಳನ್ನ ರಕ್ಷಿತ್ ಕೊಡ್ತಾ ಇದ್ದಾರೆ.
ಅಷ್ಟೆ ಅಲ್ಲ ರಕ್ಷಿತ್ ಇನ್ನೂ ಬ್ಯಾಚ್ಯೂಲರ್. ಹೀಗಾಗಿ ಸಿಂಪಲ್ ಸ್ಟಾರ್ಗೆ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಯಾರಿಗೇನು ಕಮ್ಮಿ ಇಲ್ಲ. ಶೆಟ್ರು ಸಿನಿಮಾ ಮಾಡಿದ್ರೆ ಟಾರ್ಗೆಟ್ ಇಡೋದೇ ಫ್ಯಾಮಿಲಿ ಆಡಿಯೆನ್ಸ್ ಮೇಲೆ. ಅದರಲ್ಲೂ ಕಾಂತಾರ ಸಿನಿಮಾ ಬಂದ ಮೇಲೆ ರಿಷಬ್ ಶೆಟ್ಟಿಗೆ ಅತಿ ಹೆಚ್ಚು ಫೀಮೇಲ್ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಹೀಗಾಗಿ ರಿಷಬ್ ಈ ವಿಷಯದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಈ ಹೆಸರನ್ನ ಯಾರಾದ್ರು ಮರೆಯೋಕೆ ಆಗುತ್ತಾ.? ಇವರ ಮೇಲಿನ ಅಭಿಮಾನ ಎಂದಾದ್ರು ಕಡಿಮೆ ಆಗುತ್ತಾ.? ಕಂಡಿತ ಇಲ್ಲ.
ಫ್ಯಾಮಿಲಿ ಪ್ರೇಕ್ಷಕರಿಗೆ ಇವರೇ ಬಾಸ್. ಮಹಿಳೆಯರಿಗೆ ಇವರೇ ಬ್ರದರ್, ಲವರ್, ಫ್ರೆಂಡ್, ಮನೆಮಗ.. ಆ ಮಟ್ಟಕ್ಕೆ ಅಪ್ಪುರನ್ನ ಇಷ್ಟ ಪಡ್ತಾರೆ ಫೇಮೇಲ್ಸ್. ಕನ್ನಡದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಯಾರಿಗಿದ್ದಾರೆ ಅಂತ ಕೇಳಿದ್ರೆ ಮೊದಲ ತಟ್ ಅಂತ ನಾಲಿಗೆ ತುದಿಯಲ್ಲಿ ಬರೋ ಹೆಸರೇ ಅಪ್ಪು ಅಂತ. ಹೀಗಾಗಿ ಅತಿ ಹೆಚ್ಚು ಮಹಿಳಾ ಫ್ಯಾನ್ಸ್ ಇರೋ ಏಕೈಕ ಮೊದಲ ನಟ ಅಪ್ಪು ಅವರೇ. ಆದ್ರೆ ಅಪ್ಪು ಈಗ ನಮ್ಮ ಮಧ್ಯೆ ಇಲ್ಲ. ಹೀಗಾಗಿ ಈಗ ಸಧ್ಯ ರನ್ನಿಂಗ್ನಲ್ಲಿರೋ ಹೀರೋಗಳ ಪಟ್ಟಿ ಮಾತ್ರ ಹೊರ ಬಂದಿದೆ. ಆ ಪಟ್ಟಿಯಲ್ಲಿ ಕಿಚ್ಚ ಮೊದಲ ಸ್ಥಾನ ಪಡೆದ್ರೆ, ಎರಡನೇ ಸ್ಥಾದನಲ್ಲಿ ಯಶ್, ಮೂರನೇ ಸ್ಥಾನದಲ್ಲಿ ರಕ್ಷಿತ್, ನಾಲ್ಕನೇ ಸ್ಥಾನದಲ್ಲಿ ರಿಷಬ್ ಶೆಟ್ಟಿ ಬಂದು ಕೂತಿದ್ದಾರೆ.