Asianet Suvarna News Asianet Suvarna News

ಸಿನಿಮಾದಲ್ಲಿ ಅವಕಾಶ ಸಿಗಬೇಕಂದ್ರೆ ಪಾರ್ಟಿ, ಪಬ್‌ಗೆ ಹೋಗಲೇಬೇಕಾ? ನಟಿ ಹೇಳೋದೇನು?

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಗ್ಗೆ ಅನೇಕರು ಧ್ವನಿ ಎತ್ತುತ್ತಿದ್ದಾರೆ. ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟ, ನಟಿಯರು ಮಾತನಾಡುತ್ತಿದ್ದಾರೆ. ನಟಿ ಲಾಸ್ಯ ನಾಗರಾಜ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 
 

ಬೆಂಗಳೂರು (ಆ. 31): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಗ್ಗೆ ಅನೇಕರು ಧ್ವನಿ ಎತ್ತುತ್ತಿದ್ದಾರೆ. ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟ, ನಟಿಯರು ಮಾತನಾಡುತ್ತಿದ್ದಾರೆ. ನಟಿ ಲಾಸ್ಯ ನಾಗರಾಜ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 

'ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ. ಎಲ್ಲಾ ಕಡೆ ಈ ಸಮಸ್ಯೆ ಇದೆ. ಬರೀ ಕನ್ನಡ ಚಿತ್ರರಂಗ ಮಾತ್ರವಲ್ಲ. ಅದರಲ್ಲೂ ಚಿತ್ರರಂಗಕ್ಕೆ ಇನ್ನೂ ಕಾಲಿಡುತ್ತಿರುವವರ, ಕಾಲಿಡಬೇಕು ಅಂದುಕೊಂಡವರ ಮೇಲೆ ಇದು ಪರಿಣಾಮ ಬೀರುತ್ತದೆ. ಅವರ ಮನೆಯವರು ಭಯಪಡುತ್ತಾರೆ' ಎಂದು ಲಾಸ್ಯ ಹೇಳಿದ್ದಾರೆ. 

ಚಿರು ಸಾವಿನ ಬಗ್ಗೆ ಆರೋಪ: ದರ್ಶನ್ ಪ್ರತಿಕ್ರಿಯೆ ಮುಖಕ್ಕೆ ಹೊಡೆದಂಗಿತ್ತು..!

Video Top Stories