Hijab Row ಕ್ಲಾಸ್‌ಗೆ ಬಾರದೇ 60ಕ್ಕೂ ಹೆಚ್ಚು ವಿದ್ಯಾರ್ಥನಿಯರು ವಾಪಸ್

 ಹಿಜಾಬ್ ಬಿಡಲ್ಲ ಅಂತ ಪ್ರತಿಭಟನೆ ನಡೆಯುತ್ತಿವೆ.  ಕಾಲೇಜು ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದ್ದರಿಂದ 60ಕ್ಕೂ ಹೆಚ್ಚು ವಿದ್ಯಾರ್ಥನಿಯರು ವಾಪಸ್ ಮನೆಗೆ ಹೋಗಿದ್ದಾರೆ.

First Published Feb 17, 2022, 6:54 PM IST | Last Updated Feb 17, 2022, 6:54 PM IST

ಬೆಂಗಳೂರು, (ಫೆ.17):  ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ( High Court ) ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು  ಹಿಜಾಬ್ ಧರಿಸಿಯೇ ( Hijab Row ) ಕಾಲೇಜುಗಳಿಗೆ ಆಗಮಿಸಿದ್ದಾರೆ.  ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ.

Hijab Row ಬೇಡ..ಬೇಡ ಇಂಥ ಫ್ರೆಂಡ್ಸ್ ಬೇಡ, ತರಗತಿಯಿಂದ ಹೊರಬಂದ ಸಹಪಾಠಿಗಳಿಗೆ ಲೇವಡಿ

ಅಲ್ಲದೇ, ಹಿಜಾಬ್ ಬಿಡಲ್ಲ ಅಂತ ಪ್ರತಿಭಟನೆ ನಡೆಯುತ್ತಿವೆ.  ಕಾಲೇಜು ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದ್ದರಿಂದ 60ಕ್ಕೂ ಹೆಚ್ಚು ವಿದ್ಯಾರ್ಥನಿಯರು ವಾಪಸ್ ಮನೆಗೆ ಹೋಗಿದ್ದಾರೆ.

ಕೋರ್ಟ್‌ನಲ್ಲಿ ಈ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಒಂದು ಅರ್ಜಿಯ ಪರ ಒಬ್ಬೊಬ್ಬ ವಕೀಲ ವಾದ ಮಂಡಿಸುತ್ತಿದ್ದಾರೆ. ದೇವದತ್ ಕಾಮತ್ ವಾದ ಮಂಡನೆ ಮುಗಿದೆ. ಇದೀಗ ಅರ್ಜಿದಾರರ ಪರವಾಗಿ ಮತ್ತೋರ್ವ ವಕೀಲ ರೆಹಮತ್ ಉಲ್ಲಾ ಕೊತ್ವಾಲ್‌ ಅವರು ಹೈಕೋರ್ಟ್ ತ್ರಿದಸ್ಯ ಪೀಠದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದಾರೆ. ಆದ್ರೆ, ನ್ಯಾಯಪೀಠ ಗರಂ ಆಗಿದ್ದು, ಯಾವ ಆಧಾರದ ಮೇಲೆ ವಾದ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೇ ರೆಹಮತ್ ಉಲ್ಲಾ ಅವರ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.

Video Top Stories