'ಯೋಗಿ ಡಿಪ್ರೆಶನ್‌ಗೆ ಹೋಗಲು ನಾನೇ ಕಾರಣ': ವಿಚಾರಣೆ ಬಳಿಕ ಭಾವುಕರಾದ ತಂದೆ
ನಟ ಲೂಸ್ ಮಾದ ಯೋಗಿಗೆ ಡ್ರಗ್ ತನಿಖೆಯ ಬಿಸಿ ತಟ್ಟಿದೆ. ಬೆಂಗಳೂರು ಮಾತ್ರವಲ್ಲ, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಕಡೆ ಮಾಡುತ್ತಿದ್ದ ಮೋಜು, ಮಸ್ತಿ ಪಾರ್ಟಿಗಳೇ ಯೋಗಿಗೆ ಕಂಟಕವನ್ನು ತಂದಿಟ್ಟಿದೆ. ಇಂದು ISD ಯೋಗಿಯವರನ್ನು ವಿಚಾರಣೆ ನಡೆಸಿದೆ.
ಬೆಂಗಳೂರು (ಸೆ. 22): ನಟ ಲೂಸ್ ಮಾದ ಯೋಗಿಗೆ ಡ್ರಗ್ ತನಿಖೆಯ ಬಿಸಿ ತಟ್ಟಿದೆ. ಬೆಂಗಳೂರು ಮಾತ್ರವಲ್ಲ, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಕಡೆ ಮಾಡುತ್ತಿದ್ದ ಮೋಜು, ಮಸ್ತಿ ಪಾರ್ಟಿಗಳೇ ಯೋಗಿಗೆ ಕಂಟಕವನ್ನು ತಂದಿಟ್ಟಿದೆ. ಇಂದು ISD ಯೋಗಿಯವರನ್ನು ವಿಚಾರಣೆ ನಡೆಸಿದೆ.
'ಗಟ್ಟಿಮೇಳ' ನಟಿಯನ್ನು ISD ವಿಚಾರಣೆಗೆ ಕರೆದಿದ್ದು ಈ ಕಾರಣಕ್ಕೆ..!
ವಿಚಾರಣೆ ಬಗ್ಗೆ ಯೋಗಿ ತಂದೆ ಸಿದ್ಧರಾಜು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ವಿಚಾರಣೆಗೆ ನಾನು ಹೋಗಿದ್ದೆ. ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅವನ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಆತನ ಬಗ್ಗೆ ನನಗೆ ವಿಶ್ವಾಸವಿದೆ. ಆತ ತಪ್ಪು ಮಾಡಿಲ್ಲ. ತಪ್ಪು ಮಾಡುವುದಿಲ್ಲ' ಎಂದು ಹೇಳಿದ್ದಾರೆ.