ಕಾಪಿ ಚೀಟಿ ನೀಡಲು ಹೋಗಿದ್ದ ಯುವಕ ಸಾವು, ಪ್ರಕರಣದ ಸುತ್ತ ಅನುಮಾನದ ಹುತ್ತ
ಎಸ್ಎಸ್ಎಲ್ಸಿ ವಿದ್ಯಾರ್ಥಿಯೋರ್ವನಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರ ಹೋಗಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ(ಜೂ.27): ಎಸ್ಎಸ್ಎಲ್ಸಿ ವಿದ್ಯಾರ್ಥಿಯೋರ್ವನಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರ ಹೋಗಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.
SSLC ಪರೀಕ್ಷೆ: ಕಾಪಿ ಚೀಟಿ ನೀಡಲು ಯುವಕರ ಓಡಾಟ
ಕಾಪಿ ಚೀಟಿ ನೀಡಲು ಹೋಗಿದ್ದ ಈ ಯವಕ ಅನುಮಾನಾಸ್ಪದ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೃದಯಘಾತದಿಂದ ಯುವಕ ಸಾವನ್ನಪ್ಪಿದ್ದಾನೆ ಎಮದು ಪೊಲೀಸರು ವಾದಿಸುತ್ತಿದ್ದಾರೆ. ಆದ್ರೆ, ಪೊಲೀಸರ ಏಟಿನಿಂದ ಮಗ ಸತ್ತಿದ್ದಾನೆ ಎನ್ನುವುದು ಪೋಷಕರ ವಾದ. ಒಟ್ಟಿನಲ್ಲಿ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ.