SSLC ಪರೀಕ್ಷೆ: ಕಾಪಿ ಚೀಟಿ ನೀಡಲು ಯುವಕರ ಓಡಾಟ

ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಡಲು ಹರಸಾಹಸ ಪಟ್ಟ ಯುವಕರು| ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಕಾಪಿ, ಚೀಟಿ ಹಾವಳಿ| ಕೇಂದ್ರದ ಗೋಡೆ ಹಾರಿ ಕಾಪಿ ಚೀಟಿ ನೀಡಿದ ಯುವಕರು|

First Published Jun 27, 2020, 2:08 PM IST | Last Updated Jun 27, 2020, 2:08 PM IST

ವಿಜಯಪುರ/ಬೆಳಗಾವಿ(ಜೂ.27): ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂದು ಗಣಿತ ಪರೀಕ್ಷೆ ನಡೆದಿದೆ. ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಡಲು ಯುವಕರು ಹರಸಾಹಸ ಪಟ್ಟಿದ್ದಾರೆ. ಹೌದು, ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಅಂಜುಮನ್‌ ಕಾಲೇಜಿನ ಕಾಂಪೌಂಡ್‌ ಹಾರಿದ ಯುವಕರು ಕಾಪಿ ಚೀಟಿ ಕೊಡಲು ಮುಂದಾಗಿದ್ದಾರೆ. 

ಅನ್‌ಲಾಕ್‌- 2.O: ದೇಶದಲ್ಲಿ ಏನಿರತ್ತೆ? ಏನಿರಲ್ಲ?

ಇನ್ನು ಬೆಳಗಾವಿ ಜಿಲ್ಲೆಯಲ್ಲೂ ಕೂಡ ಕಾಪಿ ಚೀಟಿ ಹಾವಳಿ ಹೆಚ್ಚಾಗಿದೆ. ಪರೀಕ್ಷಾ ಕೇಂದ್ರದ ಗೋಡೆ ಹಾರಿ ಕಾಪಿ ಚೀಟಿ ನೀಡಿದ್ದಾರೆ. ಯುವಕರು ಯಾರೂ ಮಾಸ್ಕ್‌ ಧರಿಸಿಲ್ಲ, ಇವರಿಗೆಲ್ಲಾ ಕೊರೋನಾ ಭಯಾನೇ ಇಲ್ವೇನೋ ಎಂಬಂತೆ ವರ್ತಿಸುತ್ತಿದ್ದಾರೆ.