Asianet Suvarna News Asianet Suvarna News

ಬೆಂಗಳೂರು ಗಲಭೆ: ನಾಪತ್ತೆಯಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್ ಆಗಿದ್ಹೇಗೆ?

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ನಡೆದು 3 ತಿಂಗಳ ಬಳಿಕ ಅಂತೂ ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್ ಆಗಿದ್ದಾರೆ. ಇವರ ಬಂಧನದ ಬೆನ್ನಲ್ಲೇ ಸಾಕಷ್ಟು ಹೈಡ್ರಾಮಾ ನಡೆದಿದೆ. 

ಬೆಂಗಳೂರು (ನ. 17): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ನಡೆದು 3 ತಿಂಗಳ ಬಳಿಕ ಅಂತೂ ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್ ಆಗಿದ್ದಾರೆ. ಇವರ ಬಂಧನದ ಬೆನ್ನಲ್ಲೇ ಸಾಕಷ್ಟು ಹೈಡ್ರಾಮಾ ನಡೆದಿದೆ. 

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನನಗೆ ನ್ಯಾಯ ಕೊಡಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಕಾಂಗ್ರೆಸ್ ನಾಯಕರ ಮುಂದೆ ಕಣ್ಣೀರಿಟ್ಟಿದ್ದರು. 

ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು; ಸಂಪತ್‌ ರಾಜ್ ಬಂಧನಕ್ಕೆ ಅಖಂಡ ಪ್ರತಿಕ್ರಿಯೆ

ಗಲಭೆ ನಡೆದಾಗ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಬಲವಾಗಿ ಕೇಳಿ ಬಂದಿತ್ತು. ವಿಚಾರಣೆಗೂ ಸರಿಯಾಗಿ ಹಾಜರಾಗದೇ ನಾಪತ್ತೆಯಾಗಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿ, ಸಂಪತ್ ರಾಜ್‌ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಏನದು ಮಾಸ್ಟರ್ ಪ್ಲಾನ್? ನೋಡೋಣ ಬನ್ನಿ!