Asianet Suvarna News Asianet Suvarna News

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್: ವಾಟ್ಸಾಪ್ ಚಾಟ್ ವೈರಲ್

ಬಿಜೆಪಿ ಮುಖಂಡ ಅನಂತ ರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ರೇಖಾ ಮತ್ತು ಅನಾಮಿಕ ವ್ಯಕ್ತಿಯ ವಾಟ್ಸಾಪ್ ಚಾಟ್ ವೈರಲ್ ಆಗಿದೆ.

ಬೆಂಗಳೂರು (ಮೇ. 26): ಬಿಜೆಪಿ ಮುಖಂಡ ಅನಂತ ರಾಜು ಆತ್ಮಹತ್ಯೆಗೆ (Anantha raju Suicide Case) ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ರೇಖಾ ಮತ್ತು ಅನಾಮಿಕ ವ್ಯಕ್ತಿಯ ವಾಟ್ಸಾಪ್ ಚಾಟ್  (Whatsapp Chat) ವೈರಲ್ ಆಗಿದೆ. ಆ ಚಾಟ್‌ನಲ್ಲಿ ಸೆಟಲ್‌ಮೆಂಟ್ ಪ್ರಸ್ತಾಪವಿದೆ. ಅನಂತ ರಾಜು ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಅದನ್ನ ಹೆಂಡ್ತಿಗೆ ಕಳಿಸಿದ್ರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ವಿಡಿಯೋ ಕಳಿಸಬಾರದು ಅಂದ್ರೆ ಮೇ 15 ರೊಳಗೆ ನನ್ನ ಭೇಟಿಯಾಗಬೇಕು' ಎಂದು ರೇಖಾ- ಅನಾಮಿಕ ವ್ಯಕ್ತಿಯ ಚಾಟಿಂಗ್‌ನಲ್ಲಿ ಪ್ರಸ್ತಾಪವಾಗಿದೆ. 

Bengaluru: ಬಿಜೆಪಿ ಮುಖಂಡ ಅನಮತರಾಜು ಆತ್ಮಹತ್ಯೆ: ಪೊಲೀಸರ ಮುಂದೆ ಪತ್ನಿ ಸುಮಾ ಹೇಳಿದ್ದೇನು?

ಇತ್ತೀಚಿಗೆ ವೈಯಕ್ತಿಕ ಕಾರಣಕ್ಕೆ ಅನಂತರಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ತಮ್ಮ ಪತಿಗೆ ಸಾವಿಗೆ ಹನಿಟ್ರ್ಯಾಪ್‌ ಕಾರಣ ಎಂದೂ ಆರೋಪಿಸಿ ಸುಮಾ ನೀಡಿದ ದೂರಿನ ಮೇರೆಗೆ ಅನಂತರಾಜು ಅವರ ಗೆಳತಿ ರೇಖಾಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ಬಂಧನ ಬಳಿಕ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಅನಂತರಾಜು ಕೌಟುಂಬಿಕ ಕಲಹದ ಆಡಿಯೋಗಳು ಬಯಲಾಗಿ ವೈರಲ್‌ ಆಗಿದ್ದವು.