Bengaluru: ನಡುರಸ್ತೆಯಲ್ಲೇ ಟೆನ್ನಿಸ್ ಕೋಚ್‌ ಮೇಲೆ ಪುಂಡರಿಂದ ಹಲ್ಲೆ!

ಸಿಲಿಕಾನ್‌ ಸಿಟಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ನಡುರಸ್ತೆಯಲ್ಲೇ ಟೆನ್ನಿಸ್ ಕೋಚ್‌ ಮೇಲೆ ಪುಂಡರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಕೋಚ್ ಜೀವನ್ ಜೋಯೆಲ್, ಸೋದರ ಜೋಸೆಫ್‌ ಮೇಲೆ ಅಟ್ಯಾಕ್ ಮಾಡಿ ಥಳಿಸಿದ್ದಾರೆ. 

First Published Aug 13, 2023, 5:37 PM IST | Last Updated Aug 13, 2023, 5:37 PM IST

ಬೆಂಗಳೂರು (ಆ.13): ಸಿಲಿಕಾನ್‌ ಸಿಟಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ನಡುರಸ್ತೆಯಲ್ಲೇ ಟೆನ್ನಿಸ್ ಕೋಚ್‌ ಮೇಲೆ ಪುಂಡರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಕೋಚ್ ಜೀವನ್ ಜೋಯೆಲ್, ಸೋದರ ಜೋಸೆಫ್‌ ಮೇಲೆ ಅಟ್ಯಾಕ್ ಮಾಡಿ ಥಳಿಸಿದ್ದಾರೆ. ಈ ಹಲ್ಲೆ ಮಾಡುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳ್ಳಂದೂರು ಸಮೀಪದ ಹರಳೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಹೋಟೆಲ್‌ನಲ್ಲಿದ್ದ ವಸ್ತುವನ್ನು ಎಸೆದು ಪುಂಡರು ಅಟ್ಟಹಾಸವನ್ನು ಮೆರೆದಿದ್ದಾರೆ. ರಮೇಶ್, ಯಶವಂತ್, ಪವನ್ ಈ ಮೂವರು ಹಲ್ಲೆ ಮಾಡಿ ಪುಂಡಾಟ ಮೆರೆದಿದ್ದಾರೆ. ಕ್ರಿಕೆಟ್ ಆಟುವಾಗ ನಡೆದಿದ್ದ ಕಿರಿಕ್ ಸ್ನೇಹಿತರ ಮಧ್ಯೆಯೇ ಗಲಾಟೆಗೆ ಕಾರಣವಾಗಿದೆ.