ಕಾರು ಗುದ್ದಿ ಇಂಟಲಿಜನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವು: ಹತ್ಯೆ ಶಂಕೆ
ಕಾರು ಗುದ್ದಿ ಇಂಟಲಿಜನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಮೃತ ಪಟ್ಟಿದ್ದು, ಪಕ್ಕದ ಮನೆಯವರೇ ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿ ಘಟನೆ ನಡೆದಿದ್ದು, ಇಂಟಲಿಜನ್ಸ್ ಬ್ಯೂರೋದ ನಿವೃತ್ತ ಅಧಿಕಾರಿ ಆರ್.ಎಸ್ ಕುಲಕರ್ಣಿ ಮೃತ ಪಟ್ಟಿದ್ದಾರೆ. ವಾಕಿಂಗ್ ಮಾಡುತ್ತಿದ್ದ ವೇಳೆ ಕುಲಕರ್ಣಿ ಮೇಲೆ ಕಾರು ಹರಿದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅವರು ಉಳಿಯಲಿಲ್ಲ. ಕಾರು ಗುದ್ದುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಕ್ಕದ ಮನೆಯವರೇ ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಆಸ್ತಿ ವಿಚಾರಕ್ಕೆ ಪಕ್ಕದ ಮನೆಯವರೊಂದಿಗೆ ಗಲಾಟೆ ನಡೆದಿದ್ದು, ಅವರ ವಿರುದ್ಧ ಕುಲಕರ್ಣಿ ದೂರು ನೀಡಿದ್ದರು.
ಅತೀ ಬುದ್ಧಿವಂತ... ಕಾರಿಗೆ ಗುದ್ದಿ 100 ಡಾಲರ್ ಪರಿಹಾರ ಇಟ್ಟು ಹೋದ..!