ಮಣ್ಣಲ್ಲಿ ಸಿಕ್ಕಿತ್ತು ಮಹಿಳೆಯ ಶವ..! ಹೆಣ ಹೂತಿಟ್ಟಿದ್ದು ತಾಳಿ ಕಟ್ಟಿದ ಗಂಡನೇ..!

ಹೆಂತಿಯ ಹೆಣ ಪಕ್ಕದ ಜಮೀನಿನಲ್ಲಿ..!
3 ತಿಂಗಳ ನಂತರ ಹೊರ ಬಂದ ಹೆಣ..!
ಹೆಂಡತಿಯ ಹೆಣ ಹಾಕಿ ನಾಟಕವಾಡಿದ್ದ..!

First Published Nov 5, 2023, 3:44 PM IST | Last Updated Nov 5, 2023, 3:44 PM IST

ಅವ್ರಿಬ್ಬರೂ ಪರಸ್ಪರ ಪ್ರೀತಿಸಿ ಮಧುವೆಯಾಗಿದ್ದ ಜೋಡಿ ಕೂಲಿ ಮಾಡಿದ್ರು ಖುಷಿಯಾಗಿದ್ದ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳೂ ಆಗಿದ್ರು. ಗಂಡ ಪೇಂಟಿಂಗ್ ವೃತ್ತಿ ಮಾಡುತ್ತಿದ್ರೆ, ಪತ್ನಿಯೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಚೆನ್ನಾಗಿಯೇ ಜೀವನ ನಡೆಸುತ್ತಿರುವಾಗಲೇ ಮೂರು ತಿಂಗಳ ಹಿಂದೆ ಹೆಂಡತಿ(Wife) ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಟ್ಟಿದ್ದಳು. ಎಲ್ಲಿ ಹುಡುಕಿದ್ರು ಆಕೆ ಪತ್ತೆಯಾಗದಿದ್ದಾಗ ಬೇರೆ ದಾರಿ ಕಾಣದೆ ಗಂಡ ಪೊಲೀಸ್(Police) ಠಾಣೆ ಮೆಟ್ಟಿಲೇರಿದ್ದ, ಆದ್ರೆ ಈಗ ಹೆಂಡತಿ ಪತ್ತೆಯಾಗಿದ್ದಾಳೆ ಅದೂ ಕೂಡ ಹೆಣವಾಗಿ. ಗಂಡನೇ ಹೆಂಡತಿಯ ಕಥೆ ಮುಗಿಸಿ ನಂತರ ಮೃತದೇಹವನ್ನ (Deadbody) ಖಾಲಿ ಜಮೀನಿನಲ್ಲಿ ಹೂತುಬಿಟ್ಟಿದ್ದ. ವಾಸು ಶಾಂತಿಯನ್ನ ಪ್ರೀತಿಸಿ(Love) ಮದುವೆಯಾಗಿದ್ದ. ಇಬ್ಬರಿಗೂ ಎರಡು ಮಕ್ಕಳು ಕೂಡ ಆಗಿದ್ವು.. ಆದ್ರೆ ಈ ವಾಸುಗೆ ಶಾಂತಿ ಸಾಕೆನ್ನಿಸಲು ಶುರುವಾಗಿಬಿಟ್ಟಿತ್ತು. ಅವನು ಮತ್ತೊಬ್ಬಳ ಸಹವಾಸ ಶುರು ಮಾಡಿದ್ದ. ಅನುಮಾನ ಬಂದ ಹೆಂಡತಿ ವಾಸುನನ್ನ ವಾರ್ನ್ ಮಾಡಿದ್ದಾಳೆ.. ಆದ್ರೆ ವಾಸು ಮಾತ್ರ ಅವಳ ಮಾತಿಗೆ ಸೊಪ್ಪು ಹಾಕಲಿಲ್ಲ, ಬದಲಿಗೆ ತನ್ನ ಅಕ್ರಮ ಸಂಬಂಧವನ್ನ ಮುಂದುವರೆಸಿದ್ದ. ಆದ್ರೆ ಅವತ್ತು ಗಂಡ ಹೆಂಡಿರ ನಡುವಿನ ಜಗಳ ತಾರಕ್ಕೇರಿತ್ತು. ಮಾತಿಗೆ ಮಾತು ಬೆಳೆಯಿತು.. ಕೋಪಕ್ಕೆ ಬುದ್ಧಿ ಕೊಟ್ಟ ವಾಸು ಹೆಂಡತಿಯ ಹೆಣ ಹಾಕೇ ಬಿಟ್ಟ. ನಂತರ ಆ ಕೊಲೆಯಿಂದ(Murder) ತಪ್ಪಿಸಿಕೊಳ್ಳಲು ಹೆಂಡತಿಯ ಹೆಣವನ್ನ ಪಕ್ಕದ ಖಾಲಿ ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಿಬಿಟ್ಟ.. ನಂತರ ಕಾಣೆಯಾದ ನಾಟಕವಾಡಿ ಎಸ್ಕೇಪ್ ಆಗಿದ್ದ.

ಇದನ್ನೂ ವೀಕ್ಷಿಸಿ:  ಇಸ್ಲಾಂನ ಸ್ಥಾಪನೆ ಹಮಾಸ್‌ನ ಉದ್ದೇಶಿತ ಗುರಿನಾ ? ಇದು ಉಗ್ರ ಸಂಘಟನೆಯೋ, ರಾಜಕೀಯ ಪಕ್ಷವೋ ?