ಬೀದರ್, ಮಂಗಳೂರಿನ ದರೋಡೆ ಪ್ರಕರಣ, ಇದುವರೆಗೂ ಆರೋಪಿಗಳ ಸುಳಿವಿಲ್ಲ
ಮಂಗಳೂರಿನ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿರರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಮೂಲಕ ಕರ್ನಾಟಕ ದರೋಡೆಕೋರರು, ಕಳ್ಳರು ಖದೀಮರಿಗೆ ಸುರಕ್ಷಿತ ತಾಣವಾಗುತ್ತಿದೆಯಾ ಅನ್ನೋ ಆತಂಕ ಹೆಚ್ಚಾಗುತ್ತಿದೆ.
ಬೆಂಗಳೂರು(ಜ.18) ಬೀದರ್‌ನಲ್ಲಿ ಭೀಕರ ದರೋಡೆ ಬೆನ್ನಲ್ಲೇ ಮಂಗಳೂರಿನಲ್ಲೂ ಸಹಕಾರಿ ಬ್ಯಾಂಕ್ ಲೂಟಿ ಮಾಡಿದ ಘಟನೆ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯಕ್ಕೆ ಸುಲಭವಾಗಿ ಖದೀಮರು, ಕಳ್ಳರು, ದರೋಡೆಕೋರರು ಎಂಟ್ರಿಕೊಟ್ಟು ದರೋಡೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಬೀದರ್ ಹಾಗೂ ಮಂಗಳೂರಿನ ಎರಡೂ ಪ್ರಕರಣದಲ್ಲಿ ಇದುವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಇದು ಜನರ ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ.