Asianet Suvarna News Asianet Suvarna News

ಮೈಸೂರು ಪ್ರಕರಣ ಮತ್ತು ನಾಯಕರ ಬೇಜವಾಬ್ದಾರಿ ಹೇಳಿಕೆಗಳು

* ಮೈಸೂರು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡ?
* ಮೈಸೂರು ಪೊಲೀಸರಿಗೆ ಬಿಸಿ ಮುಟ್ಟಿಸಲು ಸರ್ಕಾರದ ನಿರ್ಧಾರ
*ಮೈಸೂರು ಪ್ರಕರಣದಲ್ಲಿ ನಾಯಕರಿಂದ ಎಂತೆಂಥ ಹೇಳಿಕೆ
*   ರಾಜಕಾರಣಿಗಳ ಹೇಳಿಕೆಗೆ ವ್ಯಾಪಕ ವಿರೋಧ

ಬೆಂಗಳೂರು(ಆ. 27) ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ಅಪರಾಧ ಕೃತ್ಯಗಳು ಹೆಚ್ಚಿವೆ. ಅಂಗಡಿಗೆ ನುಗ್ಗಿ ದರೋಡೆ, ಗ್ಯಾಂಗ್ ರೇಪ್ ಪ್ರಕರಣಗಳು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಇನ್ನೊಂದು ಕಡೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಾಯಕರು ತಮಗೆ ತೋಚಿದ  ಹೇಳಿಕೆ ನೀಡುತ್ತಿದ್ದಾರೆ.

'ರೇಪ್ ಮಾಡುವಂತವರಿಗೆ ಏನ್ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು'

ಅತ್ಯಾಚಾರ ಎಸಗುವ ಮನಸ್ಥಿತಿಯವರನ್ನು ಕಟ್ ಮಾಡಬೇಕು...ನಾವೇನು ಮಧ್ಯರಾತ್ರಿ ಓಡಾಡುವುದಿಲ್ಲವೇ? ಕಾಂಗ್ರೆಸ್ ನವರಿಂದಲೇ ನಮ್ಮ ಮೇಲೆ ರೇಪ್ ಆಗುತ್ತಿದೆ.. ಸಮಾಜದಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ... ಈ ರೀತಿ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ.

Video Top Stories