Asianet Suvarna News Asianet Suvarna News

ಗಂಡನ ಜೊತೆ ಸಂಸಾರ, ಇನ್ನೊಬ್ಬನ ಜೊತೆ ಚಕ್ಕಂದ; ಪತ್ನಿಯ ನೌಟಂಕಿ ಆಟಕ್ಕೆ ಪತಿ ಬಲಿಯಾದ

ಹಾವೇರಿ ಹಾನಗಲ್ ನ ಜಗದೀಶ್ ಹಾಗೂ ಹುಬ್ಬಳ್ಳಿಯ ಅಕ್ಷತಾ ಎನ್ನುವವರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅಕ್ಷತಾಗೆ 4 ತಿಂಗಳ ಹಿಂದೆ ಹೆರಿಗೆಯಾಗಿದ್ದು, ಬಾಣಂತನಕ್ಕೆಂದು ತವರಿಗೆ ಹೋಗಿರುತ್ತಾಳೆ. ಪತ್ನಿ ಹಾಗೂ ಮಗು ನೋಡಲು ಪತ್ನಿಯ ಮನೆಗೆ ಹೋಗಿದ್ದ ಜಗದೀಶ್ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ. 

Nov 27, 2020, 5:14 PM IST

ಬೆಂಗಳೂರು (ನ. 27): ಹಾವೇರಿ ಹಾನಗಲ್ ನ ಜಗದೀಶ್ ಹಾಗೂ ಹುಬ್ಬಳ್ಳಿಯ ಅಕ್ಷತಾ ಎನ್ನುವವರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅಕ್ಷತಾಗೆ 4 ತಿಂಗಳ ಹಿಂದೆ ಹೆರಿಗೆಯಾಗಿದ್ದು, ಬಾಣಂತನಕ್ಕೆಂದು ತವರಿಗೆ ಹೋಗಿರುತ್ತಾಳೆ. ಪತ್ನಿ ಹಾಗೂ ಮಗು ನೋಡಲು ಪತ್ನಿಯ ಮನೆಗೆ ಹೋಗಿದ್ದ ಜಗದೀಶ್ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ.

ಚಿಕ್ಕಮಗಳೂರಿನ ನೌಟಂಕಿ ರಾಗಿಣಿ... ಗಂಡ ಬಂದಾಗ ಪ್ರಿಯಕರನ ತೆಕ್ಕೆಯಲ್ಲಿದ್ದಳು!

ಅಂದು ಮನೆಯಲ್ಲಿದ್ದದ್ದು ಅಕ್ಷತಾ ಹಾಗೂ ಆಕೆಯ ತಾಯಿ ಮಾತ್ರ.  ಇಲ್ಲೆ ಹೊರಗೆ ಹೋಗಿ ಬರುತ್ತೇನೆ ಎಂದು ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೊರ ಹೋಗಿದ್ದ. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ ಹೆಣವಾಗಿ ಸಿಕ್ಕಿದ್ದ. ಅರೇ, ಏನಾಯ್ತು ಜಗದೀಶ್‌ಗೆ? ಇಲ್ಲೇ ಇದೆ ಟ್ವಿಸ್ಟ್...!