Asianet Suvarna News Asianet Suvarna News

ಅವನೊಬ್ಬನಿಗಾಗಿ ಇಬ್ಬರು ಪೇದೆಗಳ ಫೈಟ್: ಸ್ನೇಹಿತೆಯನ್ನೇ ಮುಗಿಸಲು ಆಕೆ ತಮ್ಮನಿಗೆ ಕೊಟ್ಟಿದ್ಲು ಸುಪಾರಿ..!

ಪೇದೆ ಕೊಲೆಗೆ ಸ್ಕೆಚ್ ಹಾಕಿದವನು  ತಮ್ಮ ಅಲ್ಲ ಗೆಳತಿ..! ಅವನೊಬ್ಬನಿಗಾಗಿ ಇಬ್ಬರು ಮಹಿಳಾ ಪೇದೆಗಳ ನಡುವೆ ಫೈಟ್..! ಇನಿಯನಿಗಾಗಿ ಸ್ನೇಹಿತೆಗೇ ಹಾಕಿದ್ಲು ಸ್ಕೆಚ್..! ಸ್ನೇಹಿತೆಯನ್ನ ಮುಗಿಸಲು ಆಕೆ ತಮ್ಮನಿಗೇ ಕೊಟ್ಟಿದ್ಲು ಸುಪಾರಿ..!

ತುಮಕೂರು, (ಸೆಪ್ಟೆಂಬರ್.20): ವೀಕ್ಷಕರೆ... ಕಳೆದ ಶನಿವಾರ ನಾವು ಪೊಲೀಸ್ ಪೇದೆಯೊಬ್ಬಳ ಮರ್ಡರ್ ಕಥೆಯನ್ನ ಹೇಳಿದ್ವಿ. ಕೆಲಸಕ್ಕೆ ಅಂತ ಹೋಗಿದ್ದ ಪೇದೆ ವಾಪಸ್ ಬಂದೇ ಇರಲಿಲ್ಲ. ಇನ್ನೂ ಪ್ರಕರಣ ದಾಕಲಿಸಿಕೊಂಡುಇ ತನಿಖೆಗೆ ಇಳಿದಿದ್ದ ಪೊಲೀಸರರಿಗೆ ಆಕೆಯ ತಮ್ಮನ ಡೆಡ್ ಬಾಡಿ ಸಿಕ್ಕಿತ್ತು. ಆತ ಬರೆದಿಟ್ಟಿದ್ದ ಡೆತ್ ನೋಟ್ ಸಿಕ್ಕಿತ್ತು. ಅದೇ ಡೆತ್ ನೋಟ್‌ನಿಂದ ಆ ಪೇದೆಯ ಮರ್ಡರ್ ಕಹನಿ ಬಯಲಾಗಿತ್ತು. ಅವತ್ತು ಎಲ್ರೂ ಆಕೆಯ ತಮ್ಮನೇ ಮಹಿಳೆ ಪೇದೆಯನ್ನ  ಮರ್ಡರ್ ಮಾಡಿದ್ದ. 

ಮಹಿಳಾ ಪೇದೆ ಹತ್ಯೆಯಿಂದೆ ಮತ್ತೋರ್ವ ಲೇಡಿ ಪೊಲೀಸ್: ಎಲ್ಲಾ ನಡೆದಿದ್ದು ಪ್ರಿಯಕರನಿಗಾಗಿ!

ನಂತರ ಪೊಲೀಸರಿಗೆ ಹೆದರಿ ಸುಸೈಡ್ ಮಾಡಿಕೊಂಡ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಈಗ ಇದೇ ಮಹಿಳಾ ಪೇದೆ ಕೊಲೆ ಕೇಸ್ಗೆ ಮೇಜರ್ ಟ್ವಿಸ್ಟ್ಗ ಸಿಕ್ಕಿದೆ. ಪೇದೆಯ ಕೊಲೆ ಅಸಲಿ ಸೂತ್ರಧಾರ ಆಕೆಯ ತಮ್ಮ ಅಲ್ಲ ಬದಲಿಗೆ ಮತ್ತೊಬ್ಬರು ಅನ್ನೋದು ತನಿಖೆಯಿಂದ ರಿವೀಲ್ ಆಗಿದೆ. ತನ್ನ ಜೊತೆ ಕೆಲಸ ಮಾಡ್ತಿದ್ದ ಮತ್ತೊಬ್ಬ ಮಹಿಳಾ ಪೇದೆಯೇ ಆಕೆಯ ಕಥೆ ಮುಗಿಸಿರೋ ಸ್ಫೋಟಕ ಸುದ್ದಿ ಈಗ ಬಯಲಾಗಿದೆ. ಹಾಗದ್ರೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬಳ ಮರ್ಡರ್ ಕೇಸ್‌ಗೆ ಸಿಕ್ಕಿರುವ ಆ ಮೇಜರ್ ಟ್ವಿಸ್ಟ್ ಏನು..? ಯಾರು ಆ ಕೊಲೆಯ ನಿಜವಾದ ಮಾಸ್ಟರ್‌ ಮೈಂಡ್ ಎಂದು ತಿಳಿಯುವುದೇ ಇವತ್ತಿನ ಎಫ್.ಐ.ಆರ್...

Video Top Stories