ಮಧ್ಯರಾತ್ರಿಯಲ್ಲಿ ಮಗಳು ಫೋನ್‌ನಲ್ಲಿ ಬ್ಯುಸಿ: ಬೆಳಗಾಗುವುದರೊಳಗೆ ಕೊಲೆ ಮಾಡಿ ತಂದೆಯ ನಾಟಕ !

ರಾಜ್ಯದ ಗಡಿಭಾಗ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ಕೋಲಾರದ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ನಡೆದಿದೆ.
 

First Published Sep 2, 2023, 2:14 PM IST | Last Updated Sep 2, 2023, 2:14 PM IST

ಕೋಲಾರ: ಕೋಲಾರದಲ್ಲಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆಗೈದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅನ್ಯಜಾತಿಯ ಅಪ್ರಾಪ್ತ ವಯಸ್ಕ ಬಾಲಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕೊಲೆ(Murder) ಮಾಡಿದ್ದಾನೆ. ಈ ಘಟನೆ ಕೋಲಾರ (Kolar)ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಆಗಸ್ಟ್‌ 25 ರಂದು ನಡೆದಿದೆ. ರಮ್ಯಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಮೃತ ದುರ್ದೈವಿ ರಮ್ಯಾ ಒಕ್ಕಲಿಗ ಸಮುದಾಯದವಳಾಗಿದ್ದರೆ(Vokkaliga), ತಾನು ಪ್ರೀತಿ ಮಾಡುತ್ತಿದ್ದ ಯುವಕ ನಾಯಕ ಸಮುದಾಯದವನಾಗಿದ್ದನು. ಇನ್ನು ಯುವಕ ಕೂಡ ತನ್ನೇ ವಯಸ್ಸಿನವಾಗಿದ್ದನು. ಇನ್ನು ಈ ಯುವಕ ಪಕ್ಕದ ಗ್ರಾಮದವನಾಗಿದ್ದು, ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಬಳಿಕ ತಂದೆ ವೆಂಕಟೇಶ ಗೌಡ ಬೈದು ಬುದ್ಧಿ ಹೇಳಿ, ಬೇರೆ ಮದುವೆ(Marriage) ಮಾಡುವುದಾಗಿ ಹೇಳಿದ್ದಾನೆ. ಆಗ ನನಗೆ ಮದುವೆ ಬೇಡ ಎಂದು ರಮ್ಯಾ ತನ್ನ ಮನೆಯವರ ಜೊತೆ ಗಲಾಟೆ ಮಾಡಿದ್ದಾಳೆ. ಈ ವೇಳೆ ತಂದೆಯ ಕೋಪ ವಿಕೋಪಕ್ಕೆ ಹೋಗಿ ರಮ್ಯಾಳ ಕುತ್ತಿಗೆ ಮೇಲೆ ಕಾಲು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಇದನ್ನೂ ವೀಕ್ಷಿಸಿ:  ಈಡೇರಲೇ ಇಲ್ಲ ದೈವ ನರ್ತಕರಿಗೆ ಕೊಟ್ಟ ಮಾಸಾಶನ ಭರವಸೆ: ಇತ್ತ ವೃದ್ಧಾಪ್ಯ ವೇತನವೂ ಇಲ್ಲ