Asianet Suvarna News Asianet Suvarna News

ಈಡೇರಲೇ ಇಲ್ಲ ದೈವ ನರ್ತಕರಿಗೆ ಕೊಟ್ಟ ಮಾಸಾಶನ ಭರವಸೆ: ಇತ್ತ ವೃದ್ಧಾಪ್ಯ ವೇತನವೂ ಇಲ್ಲ

ಮೈಮೇಲೆ ದೈವದ ಆವಾಹನೆಯಾದಾಗ ಲೋಕಕ್ಕೆ ಅಭಯ ನೀಡುವ ದೈವ ನರ್ತಕರು ವೃದ್ಧಾಪ್ಯದಲ್ಲಿ ಮೂಲೆ ಗುಂಪಾಗುತ್ತಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೈವ ನರ್ತಕರಿಗೆ ಮಾಸಾಶನ ಘೋಷಿಸಲಾಗಿತ್ತು. ಘೋಷಣೆ ಕೇವಲ ಆಶ್ವಾಸನೆಗೆ ಸೀಮಿತವಾಗಿದ್ದು, ದೈವಾಂಶ ಸಂಭೂತರಿಗೆ ದೇವರೇ ದಿಕ್ಕು ಎಂಬಂತಾಗಿದೆ. 
 

ಕಾಂತಾರದ ಸಿನಿಮಾ ಅಬ್ಬರದಲ್ಲಿ ದೈವ ನರ್ತಕರು(Old Divine Dancers) ಬೆಳಕಿಗೆ ಬಂದರು. ಅತ್ತ ಕಲಾವಿದರೂ ಅಲ್ಲದೆ ಇತ್ತ ಕಡೆ ಜೀವನದಲ್ಲಿ ಸಂಪಾದನೆಯನ್ನು ಮಾಡಿಕೊಳ್ಳದ ಈ ದೈವ ನರ್ತಕರಿಗೆ ವೃದ್ಧಾಪ್ಯದಲ್ಲಿ ಮಾಸಾಶನದ(Pension) ಅಗತ್ಯವಿತ್ತು. ಹಿಂದಿನ ಬಿಜೆಪಿ(BJP) ಸರ್ಕಾರ 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಶನ ನೀಡುವುದಾಗಿ ಘೋಷಣೆ ಮಾಡಿತ್ತು. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಅರ್ಜಿ ಆಹ್ವಾನ ಮಾಡಲಾಗಿತ್ತು. ಎಲ್ಲಾ ಸರಿಯಾಗಿದ್ದರೆ ಈಗಾಗಲೇ ಮಾಸಾಶನಕ್ಕೆ ಒಂದು ವರ್ಷ ಪೂರ್ಣಗೊಳ್ಳಬೇಕಿತ್ತು. ಆದರೆ,ಮಾಸಾಶನ ಹೋಗ್ಲಿ ವೃದ್ಧಾಪ್ಯ ವೇತನವೂ ಬಂದ್ ಆಗಿದೆ. ಕೆಲ ದೈವ ನರ್ತಕರು ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಸರ್ಕಾರದ ಎರಡು ಸೌಲಭ್ಯಗಳನ್ನು ಏಕಕಾಲದಲ್ಲಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಮಾಸಾಶನದ ಅರ್ಜಿ ಹಾಕುತ್ತಿದ್ದಂತೆ ವೃದ್ದಾಪ್ಯ ವೇತನ ಕೊನೆಗೊಂಡಿತು. ದೈವ ನರ್ತಕರಿಗೆ ಬರಬೇಕಾದ ಮಾಸಾಶನ ಕೊನೆಗೂ ಬರಲಿಲ್ಲ. ಇತ್ತ ಸಿಗುತ್ತಿದ್ದ ವೃದ್ಧಾಪ್ಯ ವೇತನವೂ ಕೈ ಸೇರಲಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದುವರೆ ಸಾವಿರ ಮಂದಿ ದೈವ ನರ್ತಕರು ವೃದ್ಧಾಪ್ಯದ ಹೊಸ್ತಿಲಲ್ಲಿದ್ದಾರೆ. ದೈವ ನರ್ತಕರು ಮತ್ತು ಅವರ ಚಾಕರಿಗೆ ಬರುವ ಸಿಬ್ಬಂದಿಗಳಲ್ಲಿ ನೂರಾರು ಮಂದಿ ಒಪ್ಪತ್ತಿನ ಊಟಕ್ಕೂ ಕಷ್ಟಪಡುವವರಿದ್ದಾರೆ. ಹಿಂದಿನ ಸರ್ಕಾರ ಘೋಷಿಸಿದ ಮಾಸಾಶನ ಜಾರಿಯಾದರೆ ವೃದ್ಧಾಪ್ಯದಲ್ಲೂ ಹೊಟ್ಟೆ ತುಂಬಾ ಊಟ ಮಾಡಬಹುದು, ತಮ್ಮ ಅಭಯದಿಂದ ಸಾವಿರಾರು ಜನರ ಬದುಕು ಬೆಳಗಿದ ದೈವ ನರ್ತಕ ರಿಗೆ ಸರ್ಕಾರ ಸ್ಪಂದಿಸಬೇಕು.

ಇದನ್ನೂ ವೀಕ್ಷಿಸಿ:  ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ

Video Top Stories