Asianet Suvarna News Asianet Suvarna News

ಅವಳನ್ನ ನಂಬಿ ಹೋದವನು ಟ್ರ್ಯಾಪ್ ಆಗಿದ್ದ..! ಫೋನ್ ಮಾಡದವಳು ಆಧಾರ್ ಕಾರ್ಡ್ ತರಲು ಹೇಳಿದ್ದಳು..!

ಚಪಲ ಸ್ನೇಹಿತನಿಗೆ ಬಲೆ ಬೀಸಲು ಹೆಂಡತಿಯನ್ನೇ ಛೂ ಬಿಟ್ಟ..!
ವಿಧವೆ ಅಂತ ಗಂಡನೇ ಸ್ನೇಹಿತನಿಗೆ ಪರಿಚಯ ಮಾಡಿಕೊಟ್ಟಿದ್ದ..!
ಚೌಕಾಸಿ ಮಾಡುವಾಗಲೇ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟರು.!

ಸಾಮಾನ್ಯವಾಗಿ ಹನಿಟ್ರ್ಯಾಪ್ ಅಂದರೆ ಅಲ್ಲಿ ರಾಜಕಾರಣಿನೋ. ಸೆಲಬ್ರಿಟಿಯೋ ತಗ್ಲಾಕಿಕೊಂಡ್ರು ಅಂತಾನೇ ಅರ್ಥ. ಆದ್ರೆ ಈ ಹನಿಟ್ರ್ಯಾಪ್ ದಂಧೆ(Honeytrap) ಈಗ ಲೋಕಲ್ ಅಡ್ಡಾಗೂ ಕಾಲಿಟ್ಟಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ತಮ್ಮಪಾಡಿಗೆ ತಾವು ಇರುವವರನ್ನೇ ಇಲ್ಲೊಂದು ಟೀಂ ಟಾರ್ಗೆಟ್ ಮಾಡ್ತಿದೆ. ಇದನ್ನ ಟೀಂ ಅನ್ನೋದಕ್ಕಿಂತ ಒಂದು ಫ್ಯಾಮಿಲಿ ಅಂತ ಹೇಳಬಹುದು. ನಾವು ಇವತ್ತು ಹೇಳ್ತಿರೋದು ಚೋರ್ ಗಂಡ ಮತ್ತು ಚಾಂಡಾಲ್ ಹೆಂಡತಿಯ ಕಥೆಯನ್ನ ಇವರಿಬ್ಬರು ಯಾರನ್ನಾದ್ರೂ ಟಾರ್ಗೆಟ್(Target) ಮಾಡಿದ್ರೆ ಮುಗಿದೇ ಹೊಯ್ತು. ಮಿಕಾ ತಗ್ಲಾಕಿಕೊಂಡ ಅಂತಾನೇ ಅರ್ಥ. ಅಮಾಯಕರನ್ನ ಖೆಡ್ಡಾಗೆ ಕೆಡವಿಕೊಳ್ಳೋದು ನಂತರ ಲಕ್ಷಾಂತರ ರೂಪಾಯಿ ಕಿಳೋದೇ ಇವರ ಕಾಯಾಕ. ಅಂದಹಾಗೆ ಈ ಕಿಲಾಡಿ ದಂಪತಿ ಹೇಗೆ ಹನಿಟ್ರ್ಯಾಪ್ ದಂಧೆ ನಡೆಸುತ್ತಿತ್ತು. ಇತ್ತ ಅತಾವುಲ್ಲಾ ಸಭಾಳನ್ನ ಗೆದ್ದ ಖುಷಿಯಲ್ಲಿದ್ರೆ ಅತ್ತ ಸಭಾ ಮತ್ತು ಖಲೀಂ ಕುರಿ ಹಳ್ಳಕ್ಕೆ ಬಿತ್ತು ಅನ್ನೋ ಖುಷಿಯಲ್ಲಿದ್ರು. ಅದಾದ ಮೇಲೆ ಎರಡ್ಮೂರು ಬಾರಿ ಸಭಾ ಅತಾವುಲ್ಲಾ ಮನೆಗೆ ಹೋಗಿ ಬರ್ತಾಳೆ. ಅತಾವುಲ್ಲಾ ಸಭಾಳನ್ನ(Sabha) ಸಂಪೂರ್ಣವಾಗಿ ನಂಬಿಬಿಡ್ತಾನೆ. ಆದ್ರೆ ಯಾವಾಗ ಅತಾವುಲ್ಲಾಗೆ ತನ್ನ ಮೇಲೆ ನಂಬಿಕೆ ಬಂದಿದೆ ಅಂತೆನ್ನಿಸಿತೋ ಆವತ್ತೊಂದು ದಿನ ತಮ್ಮ ಆಟವಾಡಲು ಗಂಡ ಹೆಂಡತಿ ರೆಡಿಯಾಗಿಬಿಡ್ತಾರೆ. ಸೀದಾ ಅತಾವುಲ್ಲಾಗೆ ಫೋನ್ ಮಾಡಿ ಆರ್.ಆರ್ ನಗರದ ಲಾಡ್ಜ್ಗೆ ಬರಲು ಹೇಳಿಬಿಡ್ತಾರೆ.ಅತಾವುಲ್ಲಾ ಸಭಾಳನ್ನ ನಂಬಿ ಆಕೆಯೊಂದಿಗೆ ಎರಡ್ಮೂರು ಬಾರಿ ಮಂಚ ಹಂಚಿಕೊಂಡಿದ್ದ. ಆದ್ರೆ ಇದಾದ ಮೇಲೆ ಒಂದು ದಿನ ಸಭಾ ಅತಾವುಲ್ಲಾನನ್ನ ರಾಜರಾಜೇಶ್ವರಿ ನಗರದ ಲಾಡ್ಜ್ವೊಂದಕ್ಕೆ ಬರಹೇಳಿದ್ಲು.. ಪ್ರೇಯಸಿ ಕರೆದಳು ಅಂತ ಅತಾವುಲ್ಲಾ ಹಿಂದೆ ಮುಂದೆ ನೋಡದೇ ಆಕೆ ಹೇಳಿದ ಜಾಗಕ್ಕೆ ಹೋಗಿಬಿಟ್ಟ.. ಆದ್ರೆ ಆತನಿಗಾಗಿ ಸಭಾ ಅಲ್ಲದೇ ಖಲೀಂ ಮತ್ತು ಆತನ ಟೀಂ ಕಾದುಕುಳಿತಿತ್ತು.. ಯಾವಾಗ ಸಭಾ ಮತ್ತು ಅತಾವುಲ್ಲಾ ಏಕಾಂಗಿಯಾಗಿ ಲಾಡ್ಜ್ನಲ್ಲಿ ಸಿಕ್ಕಿದ್ರೋ ಅವನನ್ನ ಬ್ಲ್ಯಾಕ್ಮೇಲ್ ಮಾಡೋದಕ್ಕೆ ಶುರುಮಾಡಿದ್ರು. ಆದ್ರೆ ಆ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ಕರಾಳ ದಂಧೆ ಅದೇಗೋ ಸಿಸಿಬಿ ಪೊಲೀಸರ ಕಿವಿಗೆ ಬಿತ್ತು. ರೆಡ್ಹ್ಯಾಂಡ್ ಆಗಿ ಗಂಡ ಹೆಂಡತಿ ತಗ್ಲಾಕಿಕೊಂಡ್ರು.

ಇದನ್ನೂ ವೀಕ್ಷಿಸಿ:  ಮೊದಲ ಬಾರಿಯ ಶಾಸಕನಿಗೆ ಒಲಿದ್ದು ಹೇಗೆ ಸಿಎಂ ಪಟ್ಟ..? ಯಾರು ಈ ಭಜನ್ ಲಾಲ್..? ಏನದು “ಕುರ್ಚಿ” ಕಮಾಲ್..

Video Top Stories