ಈತ ಹೂವಿನ ವ್ಯಾಪಾರಿಯಲ್ಲ ಭಲೇ ಕಿಲಾಡಿ, ಯಾರದ್ದೋ ಕಾರು OLX ನಲ್ಲಿ ಹರಾಜು..!

ಓಎಲ್‌ಎಕ್ಸ್‌ನಲ್ಲಿ ತಾನು ವಂಚನೆಗೊಳಗಾಗಿದ್ದನ್ನೇ ಬಂಡವಾಳವನ್ನಾಗಿಸಿಕೊಂಡ ಯುವಕನೋರ್ವ, ಹಣ ಮಾಡುವ ಆಸೆಯಿಂದ ಇದೇ ಮಾರ್ಗ ಹಿಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಕನಕಪುರ ಕಡಿವೇಕೆರೆ ನಿವಾಸಿ ಮಂಜುನಾಥ್‌ ಅಲಿಯಾಸ್‌ ನಂದೀಶ್‌ ರೆಡ್ಡಿ (28) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ .9 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ಹಾಗೂ ನಗದು ಹಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

First Published Sep 2, 2020, 12:03 PM IST | Last Updated Sep 2, 2020, 12:27 PM IST

ಬೆಂಗಳೂರು (ಸೆ. 02): ಓಎಲ್‌ಎಕ್ಸ್‌ನಲ್ಲಿ ತಾನು ವಂಚನೆಗೊಳಗಾಗಿದ್ದನ್ನೇ ಬಂಡವಾಳವನ್ನಾಗಿಸಿಕೊಂಡ ಯುವಕನೋರ್ವ, ಹಣ ಮಾಡುವ ಆಸೆಯಿಂದ ಇದೇ ಮಾರ್ಗ ಹಿಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಕನಕಪುರ ಕಡಿವೇಕೆರೆ ನಿವಾಸಿ ಮಂಜುನಾಥ್‌ ಅಲಿಯಾಸ್‌ ನಂದೀಶ್‌ ರೆಡ್ಡಿ (28) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ .9 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ಹಾಗೂ ನಗದು ಹಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೂವಿನ ಅಲಂಕಾರ ಕೆಲಸ ಮಾಡಿಕೊಂಡಿದ್ದ ಆರೋಪಿ, ಲಾಕ್‌ಡೌನ್‌ನಿಂದ ವ್ಯಾಪಾರ ಸ್ಥಗಿತಗೊಂಡು ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ. ಈ ಹಿಂದೆ ಓಎಲ್‌ಎಕ್ಸ್‌ನಲ್ಲಿ ಮೊಬೈಲ್‌ ಖರೀದಿಸಲು ಹೋಗಿ, ಜಾಹೀರಾತು ನೀಡಿದ್ದ ವ್ಯಕ್ತಿಗೆ 5 ಸಾವಿರ ರು. ಕೊಟ್ಟು ವಂಚನೆಗೆ ಒಳಗಾಗಿದ್ದ. ಇದೇ ರೀತಿ ತಾನು ವಂಚನೆ ಮಾಡಲು ನಿರ್ಧರಿಸಿದ್ದ ಆರೋಪಿ, ಕಾರಿನ ಫೋಟೋವನ್ನು ಓಎಲ್‌ಎಕ್ಸ್‌ನಲ್ಲಿ ಪ್ರಕಟಿಸುತ್ತಿದ್ದ. ಕಾರು ಖರೀದಿಸಲು ಸಂಪರ್ಕಿಸುವರಿಗೆ, ಕಾರಿನ ದಾಖಲೆಗಳನ್ನು ವ್ಯಾಟ್ಸಾಪ್‌ನಲ್ಲಿ ಕಳುಹಿಸಿ ವ್ಯವಹಾರ ಕುದುರಿಸುತ್ತಿದ್ದ. ಈತನ ವ್ಯವಹಾರದ ರೀತಿ ನೋಡಿದ್ರೆ ಭಲೇ ಕಿಲಾಡಿ ಅನ್ನೋದು ಸುಳ್ಳಲ್ಲ. ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ನೋಡಿ..!

ಕಲಬುರಗಿ: ಕುಖ್ಯಾತ ರೌಡಿಶೀಟರ್ ಫಯೀಮ್ ಮೇಲೆ ಪೊಲೀಸ್ ಫೈರಿಂಗ್