Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಹಳಿತಪ್ಪಿದ್ಯಾ ಕಾನೂನು ಸುವ್ಯವಸ್ಥೆ..? ರಾಜಕೀಯ ನಾಯಕರ ಮೇಲೆ ನಡೆಯುತ್ತಿದೆ ಅಟ್ಯಾಕ್ !

ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗಲೇ ಗುಂಡೇಟು
ಅಭಿಷೇಕ್ ಘೋಸಲ್ಕರ್ ಮೇಲೆ ಗುಂಡಿನ ದಾಳಿ
ಅಭಿಷೇಕ್ ಮೇಲೆ ಗುಂಡಿನ ದಾಳಿ ನಡೆಸಿದ ಮೋರಿಸ್

ಶಿವಸೇನೆ ಉದ್ಧವ್ ಬಣದ ನಾಯಕನ ಮೇಲೆ ಫೈರಿಂಗ್(Firing) ಮಾಡಲಾಗಿದೆ. ಫೇಸ್‌ಬುಕ್‌ ಲೈವ್‌(Facebook Live) ಮಾಡುತ್ತಿದ್ದಾಗಲೇ ಗುಂಡು ಹಾರಿಸಲಾಗಿದೆ. ಅಭಿಷೇಕ್‌ ಘೋಸಲ್ಕರ್‌ (Abhishek Ghosalkar) ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಗುಂಡೇಟಿಗೆ ಅಭಿಷೇಕ್‌ ಘೋಸಲ್ಕರ್‌ ಬಲಿಯಾಗಿದ್ದು, ಮೋರಿಸ್‌(Morris) ಎಂಬಾತ ಫೈರಿಂಗ್‌ ಮಾಡಿದ್ದಾನೆ. ಮೋರಿಸ್‌ ಕಚೇರಿಗೆ ಅಭಿಷೇಕ್ ಬಂದಿದ್ದು, ಬಳಿಕ ಮೋರಿಸ್‌ ಕೂಡ ಶೂಟ್‌ ಮಾಡಿಕೊಂಡಿದ್ದಾನೆ. ಇದಲ್ಲದೇ ಕೆಲ ದಿನಗಳ ಹಿಂದೆ ಬಿಜೆಪಿ(BJP) ಶಾಸಕನಿಂದ ಗುಂಡಿನ ದಾಳಿ ನಡೆದಿತ್ತು. ಪೊಲೀಸ್‌ ಠಾಣೆಯಲ್ಲಿ ಆತ ಅಟ್ಟಹಾಸವನ್ನು ಮೆರೆದಿದ್ದ. ಬಿಜೆಪಿ ಶಾಸಕ ಗಣಪತ್ ಗಾಯಕ್ವಡ್‌ನಿಂದ ಸಿಎಂ ಶಿಂಧೆ ಆಪ್ತ ಮಹೇಶ್ ಗಾಯಕ್ವವಾಡ್ ಮೇಲೆ ಫೈರಿಂಗ್ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಫೈರಿಂಗ್‌ ನಡೆದಿದೆ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹಳಿತಪಿದ್ಯಾ ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಶತ್ರುಗಳ ಕಾಟವಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

Video Top Stories