Asianet Suvarna News Asianet Suvarna News

Bengaluru: ಹಗಲು ಹೊತ್ತಲ್ಲಿ ಹೋಟೆಲ್, ರಾತ್ರಿ ರೆಡ್‌ ಲೈಟ್‌ ಏರಿಯಾ! ಹೋಟೆಲ್‌ ಸೀಕ್ರೆಟ್‌ ರೂಂ ನೋಡಿ ಪೊಲೀಸರು ದಂಗು!

ಬೆಂಗಳೂರಿನ ಸಾಮಾನ್ಯ ಹೋಟೆಲ್‌ಗಳಲ್ಲೇ ಈ ದಂಧೆ ನಡೆಯುತ್ತಿದ್ದು, ಹೋಟೆಲ್‌ ರೂಮ್‌ಗಳಲ್ಲಿ ಸೀಕ್ರೆಟ್‌ ರೂಮ್‌ ರಹಸ್ಯ ಬಯಲಾಗಿದೆ. ಈ ರೂಮ್‌ಗಳ ರಹಸ್ಯ ಕಂಡು ಪೊಲೀಸರೇ ದಂಗಾಗಿದ್ದಾರೆ. ಸಿಸಿಬಿ ದಾಳಿ ವೇಳೆ ಈ ಸೀಕ್ರೆಟ್‌ ರೂಮ್‌ಗಳ ರಹಸ್ಯ ಬಯಲಾಗಿದೆ. 
 

 

 

Nov 17, 2022, 11:48 AM IST

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮುಂಬೈ ರೆಡ್‌ಲೈಟ್‌ ಏರಿಯಾ ಸೃಷ್ಟಿಯಾಯ್ತಾ ಅನ್ನೋ ಅನುಮಾನ ಮೂಡ್ತಿದೆ. ಏಕೆಂದರೆ ಸಿಲಿಕಾನ್‌ ಸಿಟಿಯಲ್ಲಿ ಎಗ್ಗಿಲ್ಲದೆ ಮಾಂಸ ದಂಧೆ ನಡೆಯುತ್ತಿದ್ದು, ಬೆಳಗ್ಗೆ ಮಾಮೂಲಿ ಹೋಟೆಲ್ಲು ಇರೋದು, ರಾತ್ರಿ ರೆಡ್‌ ಲೈಟ್‌ ಏರಿಯಾ ರೀತಿ ಆಗುತ್ತಿದೆ. ಇಂತಹ ಬೆಂಗಳೂರಿನ ಭಯಾನಕ ಮುಖವನ್ನು ಸುವರ್ಣ ನ್ಯೂಸ್‌ ಬಯಲಿಗೆಳೆದಿದ್ದು, ಬೆಂಗಳೂರಿನ ವೇಶ್ಯಾವಾಟಿಕೆ ದಂಧೆಯ ಕರಾಳ ಮುಖ ಬಯಲು ಮಾಡಿದೆ. ಬೆಂಗಳೂರಿನ ಸಾಮಾನ್ಯ ಹೋಟೆಲ್‌ಗಳಲ್ಲೇ ಈ ದಂಧೆ ನಡೆಯುತ್ತಿದ್ದು, ಹೋಟೆಲ್‌ ರೂಮ್‌ಗಳಲ್ಲಿ ಸೀಕ್ರೆಟ್‌ ರೂಮ್‌ ರಹಸ್ಯ ಬಯಲಾಗಿದೆ. ಈ ರೂಮ್‌ಗಳ ರಹಸ್ಯ ಕಂಡು ಪೊಲೀಸರೇ ದಂಗಾಗಿದ್ದಾರೆ. ಸಿಸಿಬಿ ದಾಳಿ ವೇಳೆ ಈ ಸೀಕ್ರೆಟ್‌ ರೂಮ್‌ಗಳ ರಹಸ್ಯ ಬಯಲಾಗಿದೆ.