Asianet Suvarna News Asianet Suvarna News

ಮಂಡ್ಯ: ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರುಪಾಲು

ಕಾಲುವೆಯಲ್ಲಿ ಈಜಲು ಹೋದ ಐವರ ದುರ್ಮರಣ
ಮಂಡ್ಯದ ದೊಡ್ಡಕೊತ್ತಗೆರೆಯ ಕಾಲುವೆಯಲ್ಲಿ ಘಟನೆ
ಬೆಂಗಳೂರಿನ ನೀಲಸಂದ್ರ ಮೂಲಕ ಐವರು ಸಾವು

ಮಂಡ್ಯ: ಕಾಲುವೆಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಐವರು ಸಾವಿಗೀಡಾಗಿರುವ ಘಟನೆ ಮಂಡ್ಯದ ಬಸರಾಳು ಹೋಬಳಿಯ ದೊಡ್ಡಕೊತ್ತಗೆರೆಯಲ್ಲಿ ನಡೆದಿದೆ. ಬೆಂಗಳೂರಿನ ನೀಲಸಂದ್ರ ಮೂಲದ ಐವರು ನೀರು ಪಾಲಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿದ್ದ ನೆಂಟರ ಮನೆಗೆ ಐವರು ಬಂದಿದ್ದು, ಅಗ್ನಿಶಾಮಕ ದಳ‌ ಸಿಬ್ಬಂದಿ ಮೂವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹನಿಸಾ ಬೇಗಂ (34), ಮಹತಾಬ್ (10), ತಸ್ಸ್ಮೀಯಾ (22) ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಉಳಿದಂತೆ ಹತೀಕಾ, ಅರ್ಷಕ್‌ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಟುಕಾಟ ನಡೆಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಬೆಂಗಳೂರು: ಅಕ್ರಮವಾಗಿ ಅಪಾರ್ಟ್​ಮೆಂಟ್​ನ ಗೋಡೆ ಒಡೆದ ಕಿಡಿಗೇಡಿಗಳು

Video Top Stories