Asianet Suvarna News Asianet Suvarna News

ಬೆಂಗಳೂರು: ಅಕ್ರಮವಾಗಿ ಅಪಾರ್ಟ್​ಮೆಂಟ್​ನ ಗೋಡೆ ಒಡೆದ ಕಿಡಿಗೇಡಿಗಳು

ಬೆಂಗಳೂರಿನಲ್ಲಿ ಕಿಡಿಗೇಡಿಗಳು ಚಾಟರ್ಡ್‌ ಬೇವರ್ಲಿ ಹಿಲ್ಸ್‌ ಅಪಾರ್ಟ್‌ಮೆಂಟ್‌ನ ಗೋಡೆಯನ್ನು ಅಕ್ರಮವಾಗಿ ಒಡೆದಿದ್ದಾರೆ. ಅಲ್ಲದೇ ಪ್ರಶ್ನಿಸಲು ಹೋದ ನಿವಾಸಿಗಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು: ಇಲ್ಲಿನ ತಲಘಟ್ಟಪುರದಲ್ಲಿ ಕಿಡಿಗೇಡಿಗಳು ಅಪಾರ್ಟ್‌ಮೆಂಟ್‌ನ ಗೋಡೆ ಒಡೆದಿದ್ದಾರೆ. ಬೆಂಗಳೂರಿನ ತಲಘಟ್ಟಪುರದ ಚಾಟರ್ಡ್‌ ಬೇವರ್ಲಿ ಹಿಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಸರಿ ಸುಮಾರು 10 ಗಂಟೆಗೆ ಕಿಡಿಗೇಡಿಗಳು ಗೋಡೆಯನ್ನು ಒಡೆದಿದ್ದಾರೆ. ಇಲ್ಲಿ 323 ಫ್ಲಾಟ್‌ಗಳು ಇದ್ದು, ಸಾವಿರಾರು ಜನ ವಾಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಪಾರ್ಟ್‌ಮೆಂಟ್‌ ನಿವಾಸಿಗಳ ಮೇಲೂ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೆಸಿಬಿ ಮೂಲಕ ಗೋಡೆಯನ್ನು ದ್ವಂಸ ಮಾಡಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸದಂತೆ ತಲಘಟ್ಟಪುರ ಪೊಲೀಸರಿಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಮಾಹಿತಿ ಕೊಟ್ಟಿದ್ದಾರೆ. ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ವೀಕ್ಷಿಸಿ: ಕೋಲಾರದ ಇಒ ವೆಂಕಟೇಶಪ್ಪ ಮನೆ ಮೇಲೆ ಲೋಕಾಯಕ್ತ ದಾಳಿ: ಬಿದ್ದು ಒದ್ದಾಡಿ ಅಧಿಕಾರಿಯಿಂದ ಹೈ ಡ್ರಾಮಾ !

Video Top Stories