Asianet Suvarna News Asianet Suvarna News

ಬೆಂಗಳೂರು; ರಾಂಗ್ ರೂಟ್ ನಲ್ಲಿ  ಬಂದ ಕಾರು ಡಿಕ್ಕಿ, ಇಬ್ಬರ ದುರ್ಮರಣ

* ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ
* ಕಾರುಗಳ ಮುಖಾಮುಖಿ ಡಿಕ್ಕಿ
* ಸ್ಥಳದಲ್ಲೇ ಇಬ್ಬರ ದುರ್ಮರಣ
* ಬೆಂಗಳೂರು ಕಾಡುತ್ತಿರುವ ಸಾವಿನ ಸೆಪ್ಟೆಂಬರ್

Sep 26, 2021, 4:30 PM IST

ಬೆಂಗಳೂರು(ಸೆ. 26)  ಬೆಂಗಳೂರಿನಲ್ಲಿ(Bengaluru) ಅಪಘಾತ(Accident) ಸರಣಿಗೆ ಕೊನೆ ಇಲ್ಲದಂತೆ ಆಗಿದೆ.  ಹೊಸೂರಿನಲ್ಲಿ(Hosur) ಕಾರು ಮುಖಾ ಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಂಡಿಕಾ ಕಾರ್ ಗೆ ರಾಂಗ್  ರೂಟ್ ನಲ್ಲಿ  ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಕೋರಮಂಗಲ ಆಡಿ ಅಪಘಾತಕ್ಕೆ ಏನು ಕಾರಣ?

ಬೆಂಗಳೂರಿಗೆ ಇದು ಸಾವಿನ ಸೆಪ್ಟೆಂಬರ್ ಎಂಬಂತೆ ಆಗಿದೆ. ಕೋರಮಂಗಲದ ಕಾರು ಅಪಘಾತ, ಅಗ್ನಿ ಅವಘಡ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲಿನ ಅಪಘಾತ ಹೀಗೆ ಸರಣಿ ಸರಣಿ ಸರಣಿ ಅಪಘಾತಗಳು ಬೆಂಗಳೂರನ್ನು ಕಾಡುತ್ತಿದೆ.