Bangalore: ಬಾಂಬ್ ಬ್ಲಾಸ್ಟ್ ಪಾತಕಿಗಳ ಕಿರಿಕ್: ಜೈಲಿನಲ್ಲಿ ಕೃತ್ಯಕ್ಕೆ ಸಾತ್ ನೀಡಿದವನ ಮೇಲೆ ಹಲ್ಲೆ
ಜೈಲಿನಲ್ಲಿ ಇದ್ರೂ ಪಾತಕಿಗಳ ಅಟ್ಟಹಾಸ ಮುಂದುವರೆದಿದ್ದು, ಸೆಂಟ್ರಲ್ ಜೈಲ್ನಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ಉಪಟಳ ನಡೆದಿದೆ.
ಜೈಲಿನಲ್ಲಿ ಆರೋಪಿಗಳು ಇನ್ನೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. 2013ರ ಏಪ್ರಿಲ್'ನಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಸ್ಫೋಟ ಸಂಭವಿಸಿತ್ತು. ಅಲ್ ಉಮ್ಮಾ ಸಂಘಟನೆ ಜೊತೆ ಕೈಜೋಡಿಸಿ ಕೃತ್ಯವೆಸಗಿದ್ದ ಆರೋಪಿಗಳು, ಕೃತ್ಯದಲ್ಲಿ ಸಾತ್ ಕೊಟ್ಟವನ ಮೇಲೆ ಜೈಲಿನಲ್ಲೇ ಹಲ್ಲೆ ಮಾಡಿದ್ದಾರೆ. ಕೃತ್ಯದ ತಪ್ಪೊಪ್ಪಿಕೊಳ್ಳಲು ಒಬ್ಬ ಆರೋಪಿ ನ್ಯಾಯಾಲಯಕ್ಕೆ ಪತ್ರ ಬರೆದಿದ್ದ. ಆರೋಪಿಗಳನ್ನು ಪ್ರತ್ಯೇಕ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ ನಡೆದಿದ್ದು, ತಪ್ಪೊಪ್ಪಿಗೆ ಪತ್ರ ಬರೆದ ಆರೋಪಿ ಮೂಲಕ ಸೈಯದ್ ಅಲಿ ಮೇಲೆ ಹಲ್ಲೆ ನಡೆಸಲಾಗಿದೆ. ಶಿಫ್ಟ್ ಬಗ್ಗೆ ಕೋರ್ಟ್ಗೆ ಜೈಲ್ ಸೂಪರಿಡೆಂಟ್ ಪತ್ರ ಬರೆದಿದ್ದಾರೆ.
Karnataka Election: ಹಾಸನದಲ್ಲಿ ಜೆಡಿಎಸ್ ಗೆಲುವಿನ ಮಂತ್ರ: ಪ್ರೀತಂ ...