Asianet Suvarna News Asianet Suvarna News

ಡ್ರಗ್ ಜಾಲದಲ್ಲಿ ಅನುಶ್ರೀ? ಇಂದು ವಿಚಾರಣೆಗೆ ಹಾಜರ್; ಸಿಗುತ್ತಾ ಮೇಜರ್ ಟ್ವಿಸ್ಟ್?

ಡ್ರಗ್ ವಿಚಾರಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ನಿರೂಪಕಿ, ನಟಿ ಅನುಶ್ರಿ ಹೆಸರು ಡ್ರಗ್ ಜಾಲದಲ್ಲಿ ತಳಕು ಹಾಕಿಕೊಂಡಿದೆ. ಸೆ. 26 ರಂದು ಅಂದರೆ ಇಂದು ವಿಚಾರಣೆಗೆ ಹಾಜರಾಗಬೇಕೆಂದು ಮಂಗಳೂರು ಸಿಸಿಬಿ ನೊಟೀಸ್ ನೀಡಿದೆ. 

ಬೆಂಗಳೂರು (ಸೆ. 25): ಡ್ರಗ್ ವಿಚಾರಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ನಿರೂಪಕಿ, ನಟಿ ಅನುಶ್ರಿ ಹೆಸರು ಡ್ರಗ್ ಜಾಲದಲ್ಲಿ ತಳಕು ಹಾಕಿಕೊಂಡಿದೆ. ಸೆ. 26 ರಂದು ಅಂದರೆ ಇಂದು ವಿಚಾರಣೆಗೆ ಹಾಜರಾಗಬೇಕೆಂದು ಮಂಗಳೂರು ಸಿಸಿಬಿ ನೊಟೀಸ್ ನೀಡಿದೆ. 

ಡ್ರಗ್ಸ್ ತಂದ ಸಂಕಟ; ನಟಿ ಅನುಶ್ರೀಗೆ ಸಿಸಿಬಿ ನೋಟಿಸ್!

'ನನಗೆ ತಿಳಿದಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಕರಿಸುತ್ತೇನೆ. ನಾನು ಯಾವ ಡ್ರಗ್ಸ್ ತೆಗೆದುಕೊಂಡಿಲ್ಲ. ಡ್ರಗ್ಸ್ ಪಾರ್ಟಿಗೂ ಹೋಗಿಲ್ಲ. ಎಲ್ಲವೂ ಸುಳ್ಳು. ತರುಣ್ ಹಾಗೂ ಕಿಶೋರ್ ಶೆಟ್ಟಿ ನನಗೆ ಪರಿಚಯ ಅಷ್ಟೇ. ಉಳಿದಂತೆ ನನಗೂ ಅವರಿಗೂ ಯಾವ ಸಂಬಂಧವೂ ಇಲ್ಲ. ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ. 

Video Top Stories