Asianet Suvarna News Asianet Suvarna News

ವರ್ಷದ ಆರಂಭದಲ್ಲೇ ಕೊಹ್ಲಿಗೆ ಟಕ್ಕರ್ ಕೊಟ್ಟ ಬುಮ್ರಾ..!

ಬರೋಬ್ಬರಿ 4 ತಿಂಗಳುಗಳ ಬಳಿಕ ತಂಡ ಕೂಡಿಕೊಂಡಿರುವ ಜಸ್ಪ್ರೀತ್ ಬುಮ್ರಾ, ಪ್ರತಿಷ್ಠಿತ ಪಾಲಿ ಉಮ್ರಿಗಾರ್ ಪ್ರಶಸ್ತಿಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ(ಜ.13): ಟೀಂ ಇಂಡಿಯಾ ಮಾರಕ ವೇಗಿ ವರ್ಷಾರಂಭದಲ್ಲೇ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಭರ್ಜರಿಯಾಗಿಯೇ 2020ನ್ನು ಸ್ವಾಗತಿಸಿದ್ದಾರೆ. ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸಿರುವ ಜಸ್ಪ್ರೀತ್ ಬುಮ್ರಾ, ಹೊಸ ವರ್ಷವನ್ನು ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಸ್ವಾಗತಿಸಿದ್ದಾರೆ. 

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ; ಬುಮ್ರಾ, ಶ್ರೀಕಾಂತ್‌ಗೆ ಪ್ರತಿಷ್ಠಿತ ಪ್ರಶಸ್ತಿ!

ಹೌದು, ಬರೋಬ್ಬರಿ 4 ತಿಂಗಳುಗಳ ಬಳಿಕ ತಂಡ ಕೂಡಿಕೊಂಡಿರುವ ಜಸ್ಪ್ರೀತ್ ಬುಮ್ರಾ, ಪ್ರತಿಷ್ಠಿತ ಪಾಲಿ ಉಮ್ರಿಗಾರ್ ಹಾಗೂ ದಿಲೀಪ್ ಸರ್‌ದೇಸಾಯಿ ಪ್ರಶಸ್ತಿಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಿವೃತ್ತಿ ವಾಪಸ್ ಪಡೆದು ಕ್ರಿಕೆಟ್ ಆಡಲು ರೆಡಿಯಾದ ಆಸೀಸ್ ದಿಗ್ಗಜರು..!

ಸತತ 5 ವರ್ಷಗಳಿಂದ ಪಾಲಿ ಉಮ್ರಿಗಾರ್ ಪ್ರಶಸ್ತಿ ಜಯಿಸುತ್ತಿದ್ದ ನಾಯಕ ಕೊಹ್ಲಿಯನ್ನು ಹಿಂದಿಕ್ಕಿ ಬುಮ್ರಾ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿದ್ದಾರೆ. ಈ ಮೂಲಕ ನಾಯಕನಿಗೆ ಟಕ್ಕರ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 
 

Video Top Stories