Asianet Suvarna News Asianet Suvarna News

ಶ್ರೀಲೀಲಾ ಧಮಾಕಾ, ಗುಂಟೂರ್ ಖಾರಂ ಹಿಟ್ ಅಲ್ವಾ?: ಕಿಸ್ ಬೆಡಗಿನ ಟಾರ್ಗೆಟ್ ಮಾಡಿದ ಪ್ರಭಾಸ್ ಫ್ಯಾನ್ಸ್!

'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಕೆಲವರಂತೂ ಆಕೆಯನ್ನು ತೆಲುಗು ನಟಿ ಎಂದುಕೊಂಡುಬಿಟ್ಟಿದ್ದಾರೆ. ಬಾಲಕೃಷ್ಣ, ರವಿತೇಜ, ಮಹೇಶ್ ಬಾಬು ರೀತಿಯ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಶ್ರೀಗೆ ಸಿಕ್ಕಿತ್ತು. 
 

'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಕಿಸ್ ಬೆಡಗಿ ಶ್ರೀಲೀಲಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಕೆಲವರಂತೂ ಆಕೆಯನ್ನು ತೆಲುಗು ನಟಿ ಎಂದುಕೊಂಡುಬಿಟ್ಟಿದ್ದಾರೆ. ಬಾಲಕೃಷ್ಣ, ರವಿತೇಜ, ಮಹೇಶ್ ಬಾಬು ರೀತಿಯ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಶ್ರೀಗೆ ಸಿಕ್ಕಿತ್ತು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಸಂಕ್ರಾಂತಿಗೆ ಬಂದ 'ಗುಂಟೂರು ಖಾರಂ' ಸಹ ನಿರಾಸೆ ಮೂಡಿಸಿತ್ತು. ಇನ್ನು 'ಗುಂಟೂರು ಖಾರಂ' ಬಳಿಕ ಕಿಸ್ ಬೆಡಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಹನು ರಾಘವಪುಡಿ ಮುಂದಿನ ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರೀಲೀಲಾ ನಟಿಸುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಇಲ್ಲಿ ವಿಷಯ ಅದಲ್ಲ. ಶ್ರೀಲೀಲಾ ಆಯ್ಕೆ ಆಗುವ ಮುನ್ನವೇ ಆಕೆ ಬೇಡ ಎಂದು ಪ್ರಭಾಸ್ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.