Asianet Suvarna News Asianet Suvarna News

Priyamani: ನೀವು ತುಂಬಾ ಸ್ಲಿಮ್ ಹಾಗೂ ಹಾಟ್ ಎಂದ ಅಲ್ಲು ಅರ್ಜುನ್

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಬಹುಭಾಷಾ ನಟಿ ಪ್ರಿಯಾಮಣಿ ಬಗ್ಗೆ ಹಾಡಿ ಹೊಗಳಿದ್ದಾರೆ. ತೆಲುಗಿನ ಖಾಸಗಿ ವಾಹಿನಿಯಲ್ಲಿ 'ಡಿ' ಹೆಸರಿನ ಡ್ಯಾನ್ಸ್​ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಶೋಗೆ ಅಲ್ಲು ಅರ್ಜುನ್ ಹಾಗೂ ಪ್ರಿಯಾಮಣಿ​ ಅತಿಥಿಗಳಾಗಿ ಆಗಮಿಸಿದ್ದರು.

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಬಹುಭಾಷಾ ನಟಿ ಪ್ರಿಯಾಮಣಿ (Priyamani) ಬಗ್ಗೆ ಹಾಡಿ ಹೊಗಳಿದ್ದಾರೆ. ತೆಲುಗಿನ ಖಾಸಗಿ ವಾಹಿನಿಯಲ್ಲಿ 'ಡಿ' ಹೆಸರಿನ ಡ್ಯಾನ್ಸ್​ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಶೋಗೆ ಅಲ್ಲು ಅರ್ಜುನ್ ಹಾಗೂ ಪ್ರಿಯಾಮಣಿ​ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಮಣಿ, ನಾವಿಬ್ಬರೂ ಒಟ್ಟಾಗಿ ನಟಿಸಲು ಸಾಧ್ಯವಾಗಿಲ್ಲ ಎಂದು ಹೇಳಿದಾಗ, ಅಲ್ಲು ಅರ್ಜುನ್, ಹಾಗೆ ಹೇಳಬೇಡಿ. 

Priyamani: ಪತಿ ಮುಸ್ತಫಾ ಜೊತೆ ಫೋಟೋ ಶೇರ್ ಮಾಡಿ ಟ್ರೋಲ್ ಬಾಯಿ ಮುಚ್ಚಿಸಿದ ನಟಿ

ನಾವು ಜೊತೆಯಾಗಿ ನಟಿಸಲು ಇನ್ನೂ ಅವಕಾಶವಿದೆ. ನೀವೀಗ ಹೆಚ್ಚು ಸ್ಲಿಮ್ ಮತ್ತು ಹಾಟ್ ಆಗಿ ಕಾಣಿಸುತ್ತಿದ್ದೀರಿ. ಹೀಗಾಗಿ, ಇಬ್ಬರೂ ಒಟ್ಟಾಗಿ ನಟಿಸೋಕೆ ಇನ್ನೂ ಕಾಲಾವಕಾಶ ಇದೆ ಎಂದಿದ್ದಾರೆ. ಅಲ್ಲು ಅರ್ಜುನ್ ಕಾಮೆಂಟ್ ಕೇಳಿ ಪ್ರಿಯಾಮಣಿ ನಾಚಿ ನೀರಾಗಿದ್ದಾರೆ. ಇನ್ನು ಸುಕುಮಾರ್ (Sukumar) ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ  'ಪುಷ್ಪ' (Pushpa) ಚಿತ್ರ ವಿಶ್ವದಾದ್ಯಂತ ಡಿಸೆಂಬರ್ 17ರಂದು ಬಿಡುಗಡೆಯಾಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories