Asianet Suvarna News Asianet Suvarna News

ಬೆಂಗಳೂರಿಗರಿಗೆ ವಿಜಯ್ ಲಿಯೋ ಶಾಕ್: ಲಿಯೋ ಒಂದು ಟಿಕೆಟ್‌ಗೆ 2000 ರೂಪಾಯಿ?

ಲಿಯೋ 2ಡಿ ಟಿಕೆಟ್ ಬೆಂಗಳೂರಿನಲ್ಲಿ  2000 ರೂಪಾಯಿ! ತಮಿಳುನಾಡಿನಲ್ಲಿ ಲಿಯೋ 1 ಟಿಕೆಟ್ 199 ರೂಪಾಯಿ ಮಾತ್ರ! ತಮಿಳಿನ ಖ್ಯಾತ ನಟ ದಳಪತಿ ವಿಜಯ್  ನಟನೆಯ ‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. 

ಲಿಯೋ 2ಡಿ ಟಿಕೆಟ್ ಬೆಂಗಳೂರಿನಲ್ಲಿ  2000 ರೂಪಾಯಿ! ತಮಿಳುನಾಡಿನಲ್ಲಿ ಲಿಯೋ 1 ಟಿಕೆಟ್ 199 ರೂಪಾಯಿ ಮಾತ್ರ! ತಮಿಳಿನ ಖ್ಯಾತ ನಟ ದಳಪತಿ ವಿಜಯ್  ನಟನೆಯ ‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಕ್ಲಾಸ್ಗೆ ಕ್ಲಾಸ್ ಮಾಸ್ಗೆ ಮಾಸ್ ಎಂದು ವಿಜಯ್ ಶಿವಣ್ಣನ ಘೋಸ್ಟ್ ರಿಲೀಸ್ ದಿನವೇ ತೆರೆಕಾಣುತ್ತಿದೆ. ‘ಲಿಯೋ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಸೇರಿದಂತೆ, ತಮಿಳು ತೆಲುಗು ಮಲಯಾಳಂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.  ಬಹಳ ವರ್ಷಗಳ ನಂತರ ತ್ರಿಷಾ ವಿಜಯ್ ಜೋಡಿಯಾಗಿ ನಟಿಸಿದ್ದಾರೆ ಬಾಲಿವುಡ್ ನಟ ಸಂಜಯ್‌ ದತ್ ವಿಲನ್ನಾಗಿ ನಟಿಸಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಲಿಯೋ ಸಿನಿಮಾ ಬೆಂಗಳೂರಿನಲ್ಲಿ 2ಡಿ ಟಿಕೆಟ್ಸ್ ಅದರಲ್ಲೂ ಐಮ್ಯಾಕ್ಸ್ನಲ್ಲಿ 2000 ರೂಪಾಯಿಯಂತೆ. ಇನ್ನಿತರೆ ಟಿಕೆಟ್ಸ್ 900 1000 ರೂಪಾಯಿ. 

ಅದೇ ಚೆನ್ನೈನಲ್ಲಿ ಕೇವಲ 199 ರುಪಾಯಿ. ಇದು ಎಂಥಾ ಅನ್ಯಾಯವೆಂದು ಸಿನಿ ಪ್ರೇಕ್ಷಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿದ್ರೆ ಬೆಂಗಳೂರಿನಲ್ಲಿ ಭಾರಿ ಹಣವನ್ನು ‘ಲಿಯೋ’ ಸಿನಿಮಾ ಬಾಚಿಕೊಳ್ಳುವುದು ಖಾತ್ರಿಯಾಗಿದೆ. ಬೆಂಗಳೂರಿನ 8 ಚಿತ್ರಮಂದಿರಗಳಲ್ಲಿ ಕೇವಲ 10 ಶೋಗಳನ್ನು ‘ಲಿಯೋ’ ಸಿನಿಮಾದ ಕನ್ನಡ ಆವೃತ್ತಿಗೆ ನೀಡಲಾಗಿದೆ.  ಬೆಂಗಳೂರಿನಲ್ಲಿ ತಮಿಳಿನ ಲಿಯೋಗೆ ಬಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ತಮಿಳು 2ಡಿ ಹಾಗೂ ತಮಿಳು ಐಮ್ಯಾಕ್ಸ್ ಆವೃತ್ತಿ ಒಟ್ಟು ಸೇರಿ ಬೆಂಗಳೂರು ಒಂದರಲ್ಲಿಯೇ ಬರೋಬ್ಬರಿ 960 ಶೋಗಳು ‘ಲಿಯೋ’ ಸಿನಿಮಾಕ್ಕೆ ದೊರಕಿವೆ. ಅದೇ ದಿನ ಬಿಡುಗಡೆ ಆಗುತ್ತಿರುವ ಹಲವು ಕನ್ನಡ ಸಿನಿಮಾಗಳಿಗೆ ಇದರ ಅರ್ಧದಷ್ಟು ಶೋಗಳು ಸಹ ದೊರಕಿಲ್ಲ.ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ವಿವಾದ ಪ್ರಸ್ತುತ ಭುಗಿಲೆದ್ದಿದೆ. 

ಈ ನಡುವೆ ‘ಲಿಯೋ’ ಸಿನಿಮಾ ಭಾರಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಇದು ಕನ್ನಡಪರ ಹೋರಾಟಗಾರರನ್ನು ಕೆರಳಿಸಿದೆ. ‘ಲಿಯೋ’ ಸಿನಿಮಾದ ಬಿಡುಗಡೆ ದಿನ ಬೆಂಗಳೂರಿನ ಅಲ್ಲಲ್ಲಿ ಗಲಾಟೆಗಳಾಗುವ ಸಾಧ್ಯತೆಯೂ ಇದೆ. ಇನ್ನು ಲಿಯೋ’ ಸಿನಿಮಾದಲ್ಲಿ ವಿಜಯ್ ಎರಡು ಭಿನ್ನ ಷೇಡ್ಗಳ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟ ಅರ್ಜುನ್ ಸರ್ಜಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿಜಯ್  ಸಿನಿಮಾ ಇದೀಗ ಅಂದೇ ರಿಲೀಸ್ ಆಗುತ್ತಿರೋ ಕನ್ನಡದ ಶಿವಣ್ಣನ ಘೋಸ್ಟ್ ಸಿನಿಮಾದ ಮೇಲೆ ಬಾರೀ ಎಫೆಕ್ಟ್ ಆಗೊ ಸಾಧ್ಯತೆಗಳಿವೆ. ಇದು ವಿಜಯ್ ಶಿವಣ್ಣನ ಫ್ಯಾನ್ಸ್ ನಡುವಿನ ವಾರ್ಗೂ ಕಾರಣವಾಗೋ ಸಾಧ್ಯತೆಗಳಿವೆ.

Video Top Stories