Asianet Suvarna News Asianet Suvarna News

ಬಾಲಿವುಡ್ ಅಂಗಳದಿಂದ ಹೊರ ಬಂತು ಬೊಂಬಾಟ್ ಸುದ್ದಿ: ತೆರೆ ಮೇಲೆ ಒಂದಾಗುತ್ತಾರಂತೆ ನಟ ಯಶ್-ಶಾರುಖ್ ಖಾನ್?

ಒಬ್ರು ಬಾಲಿವುಡ್ಗೆ ಬಾದ್ ಷಾ.. ಮತ್ತೊಬ್ರು ಬಣ್ಣದ ಜಗತ್ತಿನ ಮಾಸ್ಟರ್ ಪೀಸ್. ಇವರಿಬ್ರು ಒಂದಾಗಿ ತೆರೆ ಮೇಲೆ ಬಂದ್ರೆ ಹೇಗಿರುತ್ತೆ.? ಯಾವ್ ಹಬ್ಬಕ್ಕೇನು ಕಡಿಮೆ ಇಲ್ಲದಂತಿರುತ್ತೆ. ಆ ಟೈಂ ಹತ್ತಿರದಲ್ಲೇ ಇದೆ ಅನ್ನುತ್ತಿದೆ ಬಾಲಿವುಡ್ ಜಗತ್ತು. 

ಒಬ್ರು ಬಾಲಿವುಡ್ಗೆ ಬಾದ್ ಷಾ.. ಮತ್ತೊಬ್ರು ಬಣ್ಣದ ಜಗತ್ತಿನ ಮಾಸ್ಟರ್ ಪೀಸ್. ಇವರಿಬ್ರು ಒಂದಾಗಿ ತೆರೆ ಮೇಲೆ ಬಂದ್ರೆ ಹೇಗಿರುತ್ತೆ.? ಯಾವ್ ಹಬ್ಬಕ್ಕೇನು ಕಡಿಮೆ ಇಲ್ಲದಂತಿರುತ್ತೆ. ಆ ಟೈಂ ಹತ್ತಿರದಲ್ಲೇ ಇದೆ ಅನ್ನುತ್ತಿದೆ ಬಾಲಿವುಡ್ ಜಗತ್ತು. ಯಾಕಂದ್ರೆ ಬಿಟೌನ್ ಬಾದ್ ಷಾ ಶಾರುಖ್ ಖಾನ್ ಹಾಗು ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ನಟ ಯಶ್ ಇಬ್ಬರು ಈಗ ತೆರೆ ಮೇಲೆ ಒಂದಾಗುತ್ತಿದ್ದಾರಂತೆ. ರಾಕಿಂಗ್ ಸ್ಟಾರ್ ಯಶ್ ನೆಚ್ಚಿನ ನಟ ಶಾರುಖ್ ಖಾನ್. ಈ ಬಗ್ಗೆ ಯಶ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಇದೀಗ ಕಿಂಗ್ ಖಾನ್ ಜೊತೆ ಸಿನಿಮಾ ಮಾಡಲು ಖುದ್ದು ಯಶ್ ಉತ್ಸುಕರಾಗಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ಗಲ್ಲಿಗಳಲ್ಲಿ ಹಬ್ಬಿದೆ. 

ಶಾರುಖ್ ಸಹ ಒಳ್ಳೆ ಕಥೆ ಸಿಕ್ಕರೆ ಮಾಡೋಣ ಎಂದಿದ್ದಾರಂತೆ. ಯಶ್ ಶಾರುಖ್ ಇಬ್ಬರೂ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋ ತಾಖತ್ತಿರೋ ಹೀರೋಗಳು. ಶಾರುಖ್ ಖಾನ್ ನಟನೆಯ ಜವಾನ್, ಪಠಾಣ್ ಸಿನಿಮಾಗಳು ಸಾವಿರ ಕೋಟಿ ಕಲೆಕ್ಷನ್ ಮಾಡಿವೆ. ಅದೇ ರೀತಿ ಯಶ್ರ ಕೆಜಿಎಫ್ ಸಿನಿಮಾ ಸಾವಿರ ಕೋಟಿ ದಾಟಿ ಹಣ ಗಳಿಸಿದೆ. ಈ ಇಬ್ಬರು ಗಲ್ಲಾಪೆಟ್ಟಿಗೆ ದೋಚೋದ್ರಲ್ಲಿ ಸೂರರು. ಹಾಗೇನಾದ್ರು ಶಾರುಖ್ ಹಾಗು ಯಶ್ ಸಿನಿಮಾ ಮಾಡಿದ್ರೆ ಆ ಸಿನಿಮಾವನ್ನ ಇಬ್ಬರು ಜಂಟಿಯಾಗಿ ನಿರ್ಮಾಣ ಮಾಡುತ್ತಾರೆ ಅಂತ ಹೇಳಲಾಗ್ತಿದೆ. ಶಾರುಖ್ ಖಾನ್ರ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆ ಹಾಗು ಯಶ್ರ ಮಾನ್ಸ್ಟಾರ್ ಮೈಂಡ್ ಪ್ರೊಡಕ್ಷನ್ ಹೌಸ್ ಜೊತೆಯಾಗಿ ಸಿನಿಮಾ ಮಾಡೋ ಸಾಧ್ಯತೆ ಇದೆ. 

ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನ್ ಗೊತ್ತಾ..? ಆರು ವರ್ಷಗಳ ಹಿಂದೆ ಯಶ್ ನಟನೆಯ 'ಕೆಜಿಎಫ್' ಸಿನಿಮಾದ ಎದುರು ಶಾರುಖ್ ಖಾನ್ ನಟನೆಯ 'ಜೀರೋ' ಸಿನಿಮಾ ರಿಲೀಸ್ ಆಗಿತ್ತು. ಆದ್ರೆ ಕೆಜಿಎಫ್ ಮುಂದೆ ಜೀರೋ ಆಟ ನಡೆಯಲಿಲ್ಲ. ಈ ಸಿನಿಮಾ ಸೋತು ಸುಣ್ಣವಾಗಿತ್ತು. ಯಶ್ರ ಕೆಜಿಎಫ್ ಸಿನಿಮಾದ ಗೆಲುವಿನ ಎಫೆಕ್ಟ್ ಬಾಲಿವುಡ್ನ ಬಿಗ್ ಸ್ಟಾರ್ಗಳ ನಿದ್ದೆ ಕೆಡಿಸಿತ್ತು. ಹಾಗೆ ನಿದ್ದೆ ಕೆಡಿಸಿಕೊಂಡವರಲ್ಲಿ ಶಾರುಖ್ ಖಾನ್ ಕೂಡ ಒಬ್ರು. ಝೀರೋ ಸೋಲಿನ ಎಫೆಕ್ಟ್‌ನಿಂದ ಹೊರಬರೋದಕ್ಕೆ ಶಾರುಖ್‌ಗೆ ಸಿಕ್ಕಪಟ್ಟೆ ಕಷ್ಟ ಪಟ್ಟಿದ್ರು. 

ಸೀರೆಯಲ್ಲಿ ಅಪ್ಸರೆಯಂತೆ ಕಂಡ ಕಾಂತಾರ ಲೀಲಾ: ಸಂಸ್ಕೃತಿ ಅಂದ್ರೇ ನಮ್ ಸಪ್ತಮಿ ಗೌಡ ಏನಂತೀರಾ ಎಂದ ಫ್ಯಾನ್ಸ್‌!

ಹಠಕ್ಕೆ ಬಿದ್ದಂತೆ ಪಠಾಣ್ ಹಾಗು ಜವಾನ್ ಸಿನಿಮಾದಲ್ಲಿ ಕೆಲಸ ಮಾಡಿ ಶಾರುಖ್ ಮತ್ತೆ ಸಕ್ಸಸ್ ಕಂಡುಕೊಂಡಿದ್ರು. ಈಗ ಇದೇ ಯಶ್ ಶಾರುಖ್ ಜೊತೆಯಾಗುತ್ತಾರೆ ಅನ್ನೋ ಸುದ್ದಿ ಸಿನಿ ಜಗತ್ತಿನಲ್ಲಿ ಹೊಸ ನಿರೀಕ್ಷೆಯ ಅಲೆ ಎಬ್ಬಿಸಿದೆ. ಯಶ್ ಸಧ್ಯ ಟಾಕ್ಸಿಕ್ ಶೂಟಿಂಗ್ ಸಿನಿಮಾ ಶೂಟಿಂಗ್ ಮೂಡ್ನಲ್ಲಿದ್ದಾರೆ. ಇದರ ಜೊತೆಗೆ ಯಶ್ ಹಿಂದಿ ಚಿತ್ರರಂಗದಲ್ಲಿ ಸಿದ್ಧವಾಗುತ್ತಿರೋ ಪ್ಯಾನ್ ವರ್ಲ್ಡ್ ಸಿನಿಮಾ ರಾಮಾಯಣದಲ್ಲಿ ರಾವಣನ ರೋಲ್ ಮಾಡುತ್ತಾರೆ ಅಂತ ಟಾಕ್ ಇದೆ. ಈ ಮಧ್ಯೆ ಈಗ ಶಾರುಖ್ ಖಾನ್ ಜೊತೆಗೂ ಯಶ್ ನಟಿಸುತ್ತಾರೆ ಅನ್ನೋ ಹೊಸ ಬಾಂಬ್ ಬ್ಲಾಸ್ಟ್ ಆಗಿದೆ. 

Video Top Stories