Asianet Suvarna News Asianet Suvarna News

ಬಾಲಿವುಡ್‌ನಲ್ಲಿದ್ದಾರೆ ಶ್ರೀಮಂತ ಹಾಟ್ ಹೀರೋಯಿನ್ಸ್ ! ಯಾವ ನಟಿ ಎಷ್ಟು ನೆಟ್ ವರ್ತ್ ಹೊಂದಿದ್ದಾರೆ ಗೊತ್ತಾ ?

ಸಿನಿಮಾ ಜಗತ್ತಲ್ಲಿ ಒಂದು ಸಕ್ಸಸ್ ಬೇಕಷ್ಟೆ. ಆ ಸಕ್ಸಸ್ ಸಿಕ್ಕ ಮೇಲೆ ಕೋಟಿ ಕೋಟಿ ದುಡ್ಡು ಸಿಗುತ್ತೆ. ಇಮೇಜ್ ಮೌಂಟೇನ್ ಎತ್ತರಕ್ಕೆ ಬೆಳೆದು ನಿಲ್ಲುತ್ತೆ. ಈಗ ನಮ್ ರಶ್ಮಿಕಾ ಮಂದಣ್ಣನೆ ತಗಳಿಪಾ. ರಶ್ಮಿಕಾ ಸ್ಯಾಂಡಲ್‌ವುಡ್ ನಟಿಯಾಗಿದ್ದಾಗ ಬರೀ ಕನ್ನಡದಲ್ಲಿ ಮಾತ್ರ ಫೇಮಸ್ ಆಗಿದ್ರು. ಆಗ ರಶ್ಮಿಕಾಗೆ 10 ರಿಂದ 15 ಲಕ್ಷ ಸಂಭಾವನೆ ಇತ್ತು. ಅದೇ ಸೌತ್ ನಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ ಮೇಲೆ ರಶ್ಮಿಕಾ ಬ್ರ್ಯಾಂಡ್ ವ್ಯಾಲ್ಯೂ 25 ರಿಂದ 30 ಕೋಟಿ ದಾಟಿದೆ. ಬಾಲಿವುಡ್‌ನಲ್ಲಿ ಈ ವರ್ಷದ ಶ್ರೀಮಂತ ನಟಿಯರ ಪಟ್ಟಿಯೊಂದು ಬಂದಿದೆ. 

ಹೀರೋಗಳಿಗೆ ಹೋಲಿಸಿದ್ರೆ ಹೀರೋಯಿನ್ಸ್‌ಗಳಿಗೆ ರೇಮಂಡ್ರೇಷನ್ ಕಡಿಮೆ. ಇದು ಮೊದಲಿನಿಂದಲೂ ಇರೋ ಪದ್ಧತಿ. ಹಾಗಂತ ಇದು ಎಲ್ಲಾ ನಟಿಯರಿಗೂ ಅನ್ವಯಿಸಲ್ಲ. ಕೆಲ ಹೀರೋಯಿನ್‌ಗಳು ಹೀರೋಗಿಂತ ಹೆಚ್ಚು ದುಡಿದು, ದೊಡ್ಡ ಶ್ರೀಮಂತೆಯರಾದ ತಾರೆಯರು ಬಾಲಿವುಡ್‌ನಲ್ಲಿದ್ದಾರೆ(Bollywood). ಅವರ ಬಳಿ ನೂರಾರು ಕೋಟಿಯ ಆಸ್ತಿ ಇದೆ. ಆ ಲೀಸ್ಟ್‌ನಲ್ಲಿ ಈಗ ಮೊದಲಿಗರು ವಿಶ್ವಸುಂದರಿ ಐಶ್ವರ್ಯ ರೈ. ಐಶ್ವರ್ಯಾ ರೈ(Aishwarya Rai) ಬಚ್ಚನ್ ಬಾಲಿವುಡ್‌ನ ಮೊದಲ ಶ್ರೀಮಂತ ಹೀರೋಯಿನ್(Rich actresses). ಐಶ್ವರ್ಯ ಪ್ರತಿ ಸಿನಿಮಾಗೆ 10 ಕೋಟಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತು(Advertisement) ಲೋಕದಲ್ಲಿ ಐಶ್ವರ್ಯಗೆ ದೊಡ್ಡ ಬೇಡಿಕೆ ಇದ್ದು ಬ್ರ್ಯಾಂಡ್ ಪ್ರಚಾರಕ್ಕೆ 7-8 ಕೋಟಿ ರೂಪಾಯಿ ಪಡೆಯುತ್ತಾರೆ. ಐಶ್ವರ್ಯ ಒಟ್ಟು ಆಸ್ತಿ 800 ಕೋಟಿಗೂ ಅಧಿಕ. ಬಿಟೌನ್ ಹಾಟಿ ಪ್ರಿಯಾಂಕಾ ಚೋಪ್ರಾ ಸಧ್ಯ ಬಾಲಿವುಡ್‌ನಿಂದ ದೂರಾಗಿದ್ದಾರೆ. ಆದ್ರೆ ಪ್ರಿಯಾಂಕ ದುಡ್ಡಿನ ಗಿಡ ನೆಟ್ಟಿದ್ದು ಬಿಟೌನ್ನಲ್ಲೇ ಅಲ್ವಾ. ಹೀಗಾಗಿ ಪ್ರಿಯಾಂಕ 600 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ದೀಪಿಕಾ ಪಡುಕೋಣೆ ಏನ್ ಕಮ್ಮಿ ಇಲ್ಲ. ಸಿನಿಮಾ ಒಂದಕ್ಕೆ 25 ರಿಂದ 30 ಕೋಟಿ ಚಾರ್ಜ್ ಮಾಡೋ ದೀಪಿಕಾ ನೆಟ್ ವರ್ತ್ 500 ಕೋಟಿಯಂತೆ.ನಟಿ ಆಲಿಯಾ ಭಟ್ ಕೂಡ ರಿಚ್ ಹೀರೋಯಿನ್. 10 ರಿಂದ 15 ಕೋಟಿ ಸಂಭಾವನೆ ಪಡೆಯೋ ಆಲಿಯಾ ಜಾಹೀರಾತುಗಳಲ್ಲೂ ನಟಿಸುತ್ತಾರೆ. ಆಲಿಯಾ ಒಟ್ಟು 550 ಕೋಟಿಗೆ ಬೆಲೆ ಬಾಳುತ್ತಾರಂತೆ. ಆಲಿಯಾರಂತೆ ಕರೀನಾ ಕಪೂರ್ 450 ಕೋಟಿ, ಕತ್ರಿನಾ ಕೈಫ್ 264 ಕೋಟಿ, ಅನುಷ್ಕಾ ಶರ್ಮಾ 255 ಕೋಟಿ ಮಾಧುರಿ ದೀಕ್ಷಿತ್ 250 ಕೋಟಿ, ಕಾಜಲ್ 235 ಕೋಟಿ, ರಾಣಿ ಮುಖರ್ಜಿ, 205 ಕೋಟಿ ಆಸ್ತಿ ಮಾಡಿದ್ದಾರೆ ಅಂತ ವರಧಿ ಬಂದಿದೆ. ಈ ಮೂಲಕ ಶ್ರೀಮಂತ ನಟಿಯರು ಯಾರು ಅಂದ್ರೆ ಅದು ಬಾಲಿವುಡ್ ಹೀರೋಯಿನ್ಸ್ ಅನ್ನೋ ಹೆಗ್ಗಳಿಕೆ ಪಡೆದಿದ್ದಾರೆ.

ಇದನ್ನೂ ವೀಕ್ಷಿಸಿ:  ರೋರಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಗಿಫ್ಟ್..! ಶ್ರೀಮುರಳಿ ಜನ್ಮದಿನಕ್ಕೆ ಸಿದ್ಧವಾಗಿದೆ 'ಬಘೀರ' ಟೀಸರ್..!

Video Top Stories