Asianet Suvarna News Asianet Suvarna News

ವಿದೇಶದಲ್ಲಿ ಸಾಯಿ ಪಲ್ಲವಿ-ಅಮೀರ್ ಪುತ್ರ: ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್!

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಜಪಾನ್‌ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಒಟ್ಟಾಗಿರುವ ಜುನೈದ್- ಸಾಯಿ ಪಲ್ಲವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಜಪಾನ್‌ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಒಟ್ಟಾಗಿರುವ ಜುನೈದ್- ಸಾಯಿ ಪಲ್ಲವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸೌತ್‌ನ ಕೆಂಪು ಗಲ್ಲದ ಸುಂದರಿ ಸಾಯಿ ಪಲ್ಲವಿ ಅವರು ದೂರದ ಜಪಾನ್‌ನಲ್ಲಿ ಜುನೈದ್ ಜೊತೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಜಪಾನ್‌ನಲ್ಲಿ ಸಾಯಿ ಪಲ್ಲವಿ ಟೀಮ್ ಬೀಡು ಬಿಟ್ಟಿದೆ. ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರಲ್ಲಿ ಸೂಪರ್ ಮ್ಯಾನ್ ಚಾಯೆ ಕೂಡ ಕಂಡು ಬರುತ್ತಿದೆ. ಸಾಯಿ ಪಲ್ಲವಿ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಅಧಿಕೃತವಾಗಿ ಕಾಲಿಡ್ತಿದ್ದಾರೆ. ಕೆಲವು ತಿಂಗಳುಗಳಿಂದ ಆಮೀರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಭಾರೀ ಸುದ್ದಿಯಾಗಿತ್ತು. ಆದರೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಈ ಹಿಂದೆಯೇ ಆಮೀರ್ ಪುತ್ರನಿಗೆ ಸಾಯಿ ಪಲ್ಲವಿ ನಾಯಕಿ ಎಂದು ಕೂಡ ಸಖತ್ ಸುದ್ದಿಯಾಗಿತ್ತು. ಇದೀಗ ವೈರಲ್ ಆಗಿರುವ ಫೋಟೋ ಮೂಲಕ ಗಾಸಿಪ್‌ಗೆ ತೆರೆಬಿದ್ದಿದೆ.
 

Video Top Stories