Asianet Suvarna News Asianet Suvarna News

ತೆರೆ ಮತ್ತೆ ಶುರುವಾಯ್ತು ತಲೈವಾ ರಜಿನಿಕಾಂತ್ ವೈಭವ: ಅಪ್ಪ ಮಗಳ 'ಲಾಲ್ ಸಲಾಂ' ಟ್ರೇಲರ್ ರಿಲೀಸ್!

ಸೂಪರ್ ಸ್ಟಾರ್ ರಜಿನಿಕಾಂತ್ ಜೈಲರ್ ಸಿನಿಮಾ ಮೂಲಕ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದಾರೆ. ಜೈಲರ್ ಬಳಿಕ ತೆರೆ ಮೇಲೆ ಮತ್ತೆ ರಜಿನಿಯನ್ನ ಕಣ್ತುಂಬಿಕೊಳ್ಳೋ ಚಾನ್ಸ್ ಬರುತ್ತಿದೆ. ರಜಿನಿಕಾಂತ್ ಪುತ್ರಿ ಐಶ್ವರ್ಯಾ ರಜಿನಿಕಾಂತ್ ನಿರ್ದೇಶಿಸಿದ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಸೂಪರ್ ಸ್ಟಾರ್ ರಜಿನಿಕಾಂತ್ ಜೈಲರ್ ಸಿನಿಮಾ ಮೂಲಕ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದಾರೆ. ಜೈಲರ್ ಬಳಿಕ ತೆರೆ ಮೇಲೆ ಮತ್ತೆ ರಜಿನಿಯನ್ನ ಕಣ್ತುಂಬಿಕೊಳ್ಳೋ ಚಾನ್ಸ್ ಬರುತ್ತಿದೆ. ರಜಿನಿಕಾಂತ್ ಪುತ್ರಿ ಐಶ್ವರ್ಯಾ ರಜಿನಿಕಾಂತ್ ನಿರ್ದೇಶಿಸಿದ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಐಶ್ವರ್ಯ ಲಾಲ್ ಸಲಾಂ ಸಿನಿಮಾ ಮೂಲಕ ತನ್ನ ತಂದೆ ರಜಿನಿಕಾಂತ್ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಪ್ಪನನ್ನ ವಿಭಿನ್ನವಾಗಿ ತೆರೆ ಮೇಲೆ ತರುತ್ತಿರೋ ಐಶ್ವರ್ಯ, ತಲೈವಾಗೆ ಮುಸ್ಲಿ ಕ್ಯಾರೆಕ್ಟರ್ಅನ್ನ ಡಿಸೈನ್ ಮಾಡಿದ್ದಾರೆ. ತಲೈವಾ ಇಲ್ಲಿ ಮೋಯ್ದಿನ್ ಭಾಯಿ ರೋಲ್ ಮಾಡಿದ್ದಾರೆ. ಲಾಲ್ ಸಲಾಂ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಎಲ್ಲರ ಕಣ್ಣು ರಜನಿಕಾಂತ್ ಮೇಲೆ ಹೋದರೂ, ಸಿನಿಮಾದ ಕಥೆ ಗಟ್ಟಿಯಾಗಿದೆ ಅನ್ನೋ ನಿರೀಕ್ಷೆ ಮೂಡಿಸುತ್ತಿದೆ ಟ್ರೇಲರ್. ಲಾಲ್ ಸಲಾಂ ಸ್ಪೋಟ್ಸ್ ಡ್ರಾಮ. ಎರಡು ಪಂಗಡಗಳ ನಡುವಿನ ಕಿತ್ತಾಟದ ಕಥೆ ಸಿನಿಮಾದಲ್ಲಿದೆ. ವಿಷ್ಣು ವಿಶಾಲ್ ಹಾಗು ವಿಕ್ರಾಂತ್ ಸಿನಿಮಾದಲ್ಲಿ ಹೈಲೆಟ್ ಆಗಿದ್ದಾರೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಈ ಸಿನಿಮಾದಲ್ಲ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾ ಫೆಬ್ರವರಿ 9ಕ್ಕೆ ತೆರೆ ಮೇಲೆ ಬರಲಿದೆ.