Asianet Suvarna News Asianet Suvarna News

ಜ್ಯೂ. ಎನ್‌ಟಿಆರ್ ಜತೆ ಸೇರಿ ಮತ್ತೊಂದು ಕಮಾಲ್ ಮಾಡಲು ಪ್ರಶಾಂತ್ ನೀಲ್ ರೆಡಿ.!

ಪ್ರಶಾಂತ್ ನೀಲ್.. ರಾಕಿಂಗ್ ಸ್ಟಾರ್ ಯಶ್ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಟ್ಟ ನಿರ್ದೇಶಕ. ನೀಲ್ ಈಗ ಸತತ ಸೋಲುಗಳನ್ನ ಅನುಭವಿಸುತ್ತಿರೋ ಡಾರ್ಲಿಂಗ್ ಪ್ರಭಾಸ್‌ಗೆ ದೊಡ್ಡ ಸಕ್ಸಸ್ಸನ್ನ ಹೆಗಲ ಮೇಲೇರಿಸೋಕೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. 

 ಪ್ರಶಾಂತ್ ನೀಲ್ (Prashant Neel) ರಾಕಿಂಗ್ ಸ್ಟಾರ್ ಯಶ್‌ಗೆ (Yash)ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಟ್ಟ ನಿರ್ದೇಶಕ. ನೀಲ್ ಈಗ ಸತತ ಸೋಲುಗಳನ್ನ ಅನುಭವಿಸುತ್ತಿರೋ ಡಾರ್ಲಿಂಗ್ ಪ್ರಭಾಸ್‌ಗೆ (Prabhas) ದೊಡ್ಡ ಸಕ್ಸಸ್ಸನ್ನ ಹೆಗಲ ಮೇಲೇರಿಸೋಕೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. 

ಟಾಲಿವುಡ್ನ ತಾರಕ್ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಜನ್ಮದಿನವನ್ನ ಚಂದಗಾಣಿಸಲು ಕೆಜಿಎಫ್ ಕಿಂಗ್ ಪ್ರಶಾಂತ್ ನೀಲ್ ಜ್ಯೂ.ಎನ್ಟಿ.ಆರ್ ಜೊತೆ ಮಾಡ್ತಿರೋ ಸಿನಿಮಾದ ಫಸ್ಟ್ ಲುಕ್‌ನ ಅನಾವರಣ ಮಾಡಿದ್ದಾರೆ. ಯಂಗ್ ಟೈಗರ್ 31ನೇ ಸಿನಿಮಾವನ್ನ ನಿರ್ದೇಶನ ಮಾಡ್ತಿರೋ ನೀಲ್ ರಗಡ್ ಲುಕ್ನಲ್ಲಿ ಜ್ಯೂ.ಎನ್ಟಿಆರ್‌ನ ತೋರಿಸುತ್ತಿದ್ದಾರೆ. 

ಯಶ್ ಮಾಡಿದ ಈ ದಾಖಲೆಯನ್ನು ಸ್ಯಾಂಡಲ್‌ವುಡ್‌ನಲ್ಲೇ ಯಾರು ಮಾಡಿಲ್ಲ...!

ನಿರ್ದೇಶಕ ಪ್ರಶಾಂತ್ ನೀಲ್‌ಗೆ ಚಿಕ್ಕ ವಯಸ್ಸಿನಿಂದಲೂ ಫೇವರಿಟ್ ಹೀರೋ ಅಂದ್ರೆ ಜ್ಯೂ.ಎನ್ಟಿಆರ್. ಈಗ ನೀಲ್ ಡ್ರೀಮ್ ಕಮ್ಸ್ ಟ್ರೂ ಅನ್ನೋ ಹಾಗಾಗಿದೆ. ತನ್ನ ಡ್ರೀಮ್ ಆಕ್ಟರ್‌ಗೆ ಭರ್ಜರಿ ಕತೆ ರೆಡಿ ಮಾಡಿದ್ದಾರೆ. ಈಗ ಹೊರ ಬಂದಿರೋ ಪೋಸ್ಟರ್ ನೋಡ್ತಿದ್ರೆ ಇದು ಔಟ್ ಆ್ಯಂಡ್ ಔಟ್ ಆಕ್ಷನ್ ಸಿನಿಮಾ ಅಂತ ಗೊತ್ತಾಗುತ್ತೆ. ಕೆಜಿಎಫ್, ಸಲಾರ್ ಸಿನಿಮಾದ ಹಾಗೆ ಇದು ಕೂಡ ಬಿಗ್ ಸ್ಕೇಲ್ ಸಿನಿಮಾ ಆಗಿದ್ದು, ಮೇಕಿಂಗ್ ಕೂಡ ತುಂಬಾ ರಿಚ್ ಆಗಿ ಮೂಡಿಬರಲಿದೆ.

'ವಿಕ್ರಾಂತ್ ರೋಣ'ಗೆ ಪಿವಿಆರ್ ಸಾಥ್, ಜೋರಾಗಿದೆ ಪವರ್, ಖದರ್..! 

ನಿರ್ದೇಶಕ ನೀಲ್ ತನ್ನ ಸಿನಿಮಾದ ವರ್ಕ್ನಲ್ಲಿ ಎಷ್ಟು ಪರ್ಫೆಕ್ಷನಿಸ್ಟ್ ಅಂದ್ರೆ ಜ್ಯೂ,ಎನ್ಟಿಆರ್ 31ನೇ ಸಿನಿಮಾ ಪೋಸ್ಟರ್ ಶೂಟಿಂಗ್‌ಗೆ ನೀಲ್ 31 ಕ್ಯಾಮೆರಾ ಬಳಸಿ ಮಾಡಿದ್ದಾರಂತೆ. ಈ ಸಿನಿಮಾವನ್ನ ಮೈತ್ರಿ ಮೂವಿ ಮೇಕರ್ಸ್ ಹಾಗು ಎನ್ಟಿಆರ್ ಆರ್ಟ್ ಒಟ್ಟಾಗಿ ಬಂಡವಾಳ ಹೂಡುತ್ತಿವೆ. ಸಧ್ಯ ಚಿತ್ರದ ಟೈಟಲ್ ಘೋಷಣೆ ಆಗಿಲ್ಲ. ಎನ್ಟಿಆರ್ 31 ಹೆಸರಿನಲ್ಲಿ ಈಗ ಪೋಸ್ಟರ್ ರಿವೀಲ್ ಆಗಿದೆ. ನಿರ್ದೇಶಕ ಕೊರಟಾಲ ಶಿವ ಜೊತೆ ಸಿನಿಮಾ ವರ್ಕ್ ಮುಗಿದ ನಂತರ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದ ಕೆಸಲ ಆರಂಭ ಆಗಲಿದ್ಯಂತೆ.