Asianet Suvarna News Asianet Suvarna News

ಬೆಳ್ಳಿ ತೆರ ಮೇಲೆ ಅಪ್ಪ-ಮಗನ ಕಮಾಲ್:‌ 'ಆಚಾರ್ಯ' ನೋಡಿ ಪ್ರೇಕ್ಷಕರು ಹೇಳೋದೇನು.?

 ಇದೀಗ ಅಪ್ಪ-ಮಗನ ಆಚಾರ್ಯ (Acharya) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ನೋಡಿದ ಮೆಗಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮೆಗಾ ಫ್ಯಾನ್ಸ್‌ಗೆ ಹೇಳಿ ಮಾಡಿಸಿದ ಸಿನಿಮಾದಂತಿದೆ. 'ಆಚಾರ್ಯ' ಬಿಗ್ ಬಜೆಟ್ ಆಕ್ಷನ್ ಡ್ರಾಮಾ. ಸಾಮಾಜಿಕ ಸಂದೇಶ ಈ ಚಿತ್ರದಲ್ಲಿದೆ. 

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ (Chiranjeevi)  ಹಾಗೂ ರಾಮ್ ಚರಣ್ (Ram Charan) ಅಭಿನಯಿಸಿರೋ ಆಚಾರ್ಯ (Acharya) ಸಿನಿಮಾ ಬೆಳ್ಳಿತೆರೆ ಬಾನಂಗಳಕ್ಕೆ ಬಂದಿದೆ. ಆಚಾರ್ಯ ಸಿನಿಮಾದಲ್ಲಿ ಅಪ್ಪ-ಮಗನ ಜುಗಲ್ಬಂಧಿ ಇರಲಿದೆ ಅಂತ ಗೊತ್ತಾಗ್ತಿದ್ದ ಹಾಗೆ ಈ ಸಿನಿಮಾ ಮೇಲೆ ಸೌತ್ ಸಿನಿ ದುನಿಯಾದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿತ್ತು. ಟ್ರೇಲರ್ನಲ್ಲಿ ಮೆಗಾಸ್ಟಾರ್ ಹಾಗೂ ಚರಿಯ ಆರ್ಭಟ ನೋಡಿದ್ಮೇಲೆ ಆಚಾರ್ಯ ಸೂಪರ ಡೂಪರ್ ಸಿನಿಮಾ ಅನ್ನೋ ನಿರೀಕ್ಷೆ ಮತ್ತಷ್ಟು ಹೈ ಆಗಿತ್ತು.

'ಆಚಾರ್ಯ' ಹಿಂದಿಯಲ್ಲಿ ರಿಲೀಸ್ ಮಾಡಲ್ಲ, ಚಿತ್ರತಂಡದಿಂದ ಸ್ಪಷ್ಟನೆ

 ಇದೀಗ ಅಪ್ಪ-ಮಗನ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ನೋಡಿದ ಮೆಗಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮೆಗಾ ಫ್ಯಾನ್ಸ್‌ಗೆ ಹೇಳಿ ಮಾಡಿಸಿದ ಸಿನಿಮಾದಂತಿದೆ. 'ಆಚಾರ್ಯ' ಬಿಗ್ ಬಜೆಟ್ ಆಕ್ಷನ್ ಡ್ರಾಮಾ. ಸಾಮಾಜಿಕ ಸಂದೇಶ ಈ ಚಿತ್ರದಲ್ಲಿದೆ. ಚಿರಂಜೀವಿ, ರಾಮ್ ಚರಣ್ ಕಾಂಬಿನೇಶನ್‌ನಲ್ಲಿ ಬಂದ ನಾಲ್ಕನೇ ಸಿನಿಮಾ ಇದು. ಈ ಹಿಂದೆ ರಾಮ್ ಚರಣ್ರ ಮಗಧೀರ ಚಿತ್ರ ಹಾಗು 'ಬ್ರೂಸ್‌ ಲೀ' ಸಿನಿಮಾದಲ್ಲಿ ಮೆಗಾಸ್ಟಾರ್ ಚಿಕ್ಕ ಪಾತ್ರದಲ್ಲಿ ಮಿಂಚಿದ್ರು. ಚಿರಂಜೀವಿ 'ಕೈದಿ ನಂ. 150' ಚಿತ್ರದ ಹಾಡಿನಲ್ಲಿ ರಾಮ್ ಚರಣ್ ಡಾನ್ಸ್ ಮಾಡಿದ್ರು. ಇದೀಗ 'ಆಚಾರ್ಯ' ಸಿನಿಮಾ ಪೂರ್ತಿ ಅಪ್ಪ ಮಗ ಒಟ್ಟಿಗೆ ನಟಿಸಿ ಮೆಗಾ ಫ್ಯಾಮಿಲಿ ಅಭಿಮಾನಿಗಳಿಗೆ ಹಬ್ಬದೂಟ ಬಡಸಿದ್ದಾರೆ. ಆದ್ರೆ ಸಿನಿಮಾ ನೋಡಿದವರಲ್ಲಿ ಕೆಲವ್ರು ಆಚಾರ್ಯ ಬಗ್ಗೆ ನೆಗೆಟೀವ್ ಕಮೆಂಟ್ ಕೂಡ ಮಾಡಿದ್ದಾರೆ. 

ಅಜಯ್ ದೇವಗನ್- ಸುದೀಪ್ ಮಧ್ಯೆ ಹಿಂದಿ ವಿವಾದ ಉಂಟಾಗಿದ್ಹೇಗೆ.?

ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಮಣಿಶರ್ಮ ಸಂಗೀತ ನೀಡಿದ್ದಾರೆ. ಸುಮಾರು 140 ಕೋಟಿ ರೂಪಾಯಿ ಬಜೆಟ್‌ನಲ್ಲಿ ರಾಮ್ ಚರಣ್ ತೇಜಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆದ್ರೆ ಆಚಾರ್ಯ ಸಿನಿಮಾದಲ್ಲಿ ಒಂದಿಷ್ಟು ಮೈನೆಸ್ ಅಂಶಗಳು ಇವೆ. ಈ ಸಿನಿಮಾ ಕಥೆಯನ್ನ ಇನ್ನೂ ತೀಕ್ಷ್ಣ  ಅದ್ಧೂರಿಯಾಗಿ ಮಾಡಬಹುದಿತ್ತು ಅನ್ನಿಸುತ್ತೆ. ಆದ್ರೆ ರಾಮ್ ಚರಣ್ ಖರ್ಚು ಮಾಡಿದ್ದ ಹಣವನ್ನ ಆಚಾರ್ಯ ದುಡಿದುಕೊಡುತ್ತೆ ಅಂತ ಹೇಳಲಾಗ್ತಿದೆ. 


 

Video Top Stories