Asianet Suvarna News Asianet Suvarna News

ರಾಕಿಭಾಯ್​ ಜೊತೆ ‘ಟಾಕ್ಸಿಕ್’ನಲ್ಲಿ ಕರೀನಾ ಕಪೂರ್ ನಟಿಸೋದು ಗ್ಯಾರಂಟಿ!

ಕನ್ನಡಿಗರ ಸಿನಿಮಾಗಳು ಹಳ್ಳಿಯಿಂದ ಹಿಡಿದು, ದಿಲ್ಲಿ ತನಕ ಅಬ್ಬರಿಸುತ್ತಿವೆ. ದಿಲ್ಲಿ ಮಾತ್ರ ಅಲ್ಲ, ಲಂಡನ್‌ನಲ್ಲಿ ಕೂಡ ಕನ್ನಡಿಗರ ಸಿನಿಮಾಗಳು ಕಹಳೆ ಮೊಳಗಿಸಿವೆ. ಹೀಗಿದ್ದಾಗಲೇ ನಟ ಯಶ್ ಅವರ 19ನೇ ಸಿನಿಮಾ ಹಲ್‌ಚಲ್ ಎಬ್ಬಿಸಿತ್ತು.

ಕನ್ನಡಿಗರ ಸಿನಿಮಾಗಳು ಹಳ್ಳಿಯಿಂದ ಹಿಡಿದು, ದಿಲ್ಲಿ ತನಕ ಅಬ್ಬರಿಸುತ್ತಿವೆ. ದಿಲ್ಲಿ ಮಾತ್ರ ಅಲ್ಲ, ಲಂಡನ್‌ನಲ್ಲಿ ಕೂಡ ಕನ್ನಡಿಗರ ಸಿನಿಮಾಗಳು ಕಹಳೆ ಮೊಳಗಿಸಿವೆ. ಹೀಗಿದ್ದಾಗಲೇ ನಟ ಯಶ್ ಅವರ 19ನೇ ಸಿನಿಮಾ ಹಲ್‌ಚಲ್ ಎಬ್ಬಿಸಿತ್ತು. 'ಟಾಕ್ಸಿಕ್' ಟೈಟಲ್ ಕೊಟ್ಟು ಈ ಸಿನಿಮಾಗೆ ರಾಕಿಭಾಯ್ ಯಶ್ ಸಜ್ಜಾಗಿರುವ ಸಮಯಕ್ಕೇ, ಕನ್ನಡಕ್ಕೆ ಕರೀನಾ ಕಪೂರ್ ಬರ್ತಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಈ ನಟಿಗೆ ವಯಸ್ಸು 43 ಆಗಿದ್ದರೂ, ಈಗ ಕೂಡ ಸ್ವೀಟ್ 16 ರೀತಿ ಕಂಗೊಳಿಸುತ್ತಾಳೆ ಕರೀನಾ. ಹೀಗೆ ನಟಿ ಕರೀನಾ ಕಪೂರ್ ಅವರಿಗೆ ಭಾರಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಇದೆ. ಹಿಂದೆ ಸಲ್ಮಾನ್ ಖಾನ್, ಶಾರುಖ್ ಖಾನ್ ಸಹಿತ ದೊಡ್ಡ ದೊಡ್ಡ ನಟರ ಜೊತೆ ನಟಿಸಿದ್ದ ಕರೀನಾ ಈಗ ಕನ್ನಡಿಗ ಯಶ್ ಜೊತೆಗೆ ಸಾಥ್ ನೀಡಿದ್ದಾರಂತೆ. ಈ ಬಗ್ಗೆ ಕರೀನಾ ಕಪೂರ್ ತಂಡದ ಮಾಹಿತಿ ಕೂಡ ಹಲ್‌ಚಲ್ ಎಬ್ಬಿಸಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories