Asianet Suvarna News Asianet Suvarna News

ಐಪಿಎಲ್​ ಆ್ಯಪ್​ ಜಾಹೀರಾತು: ನಟಿ ತಮನ್ನಾ ಭಾಟಿಯಾಗೆ ED ಅಧಿಕಾರಿಗಳ ಶಾಕ್!

ಈಗ ತಮನ್ನಾ ಮತ್ತೊಂದು ವಿಚಾರಕ್ಕೆ ಟಾಕ್ ಆಫ್ ದಿ​ ಟೌನ್ ಆಗಿದ್ದಾರೆ. ಅದೇ ಇಡಿ ವಿಚಾರಣೆ ಕಾರಣಕ್ಕೆ. ನಟಿ ತಮನ್ನಾ ಭಾಟಿಯಾ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ಎದುರಿಸಿದ್ದಾರೆ. 

First Published Oct 19, 2024, 12:31 PM IST | Last Updated Oct 19, 2024, 12:31 PM IST

ಮಿಲ್ಕಿ ಬ್ಯೂಟಿ ಅಂದ್ರೆ ಪಡ್ಡೆ ಹೈದರು ಬೆಟ್​ ಮಾಡಿ ತೋರಿಸೋದು ತಮನ್ನಾ ಭಾಟಿಯಾಗೆ. ಅದು ನಿಜ ಕೂಡ. ಹಾಲಿನಂತಾ ಮೈ ಹೊಳಪು, ಗೊಂಬೆಯಂತಾ ಸೌಂಧರ್ಯ. ಈಕೆಯ ವಯ್ಯಾರಕ್ಕೆ, ಕಣ್ಣೋಟಕ್ಕೆ, ಬಳುಕೋ ಬಳ್ಳಿಯಂತಿರೋ ಆ ದೇಹ ಸಿರಿಗೆ ಮರುಳಾಗದವರಿಲ್ಲ. ದಶಕದಿಂದಲೂ ಚಿತ್ರರಂಗವನ್ನಾಳುತ್ತಿರೋ ತಮನ್ನಾ ಈಗ ಸಧ್ಯ ಐಟಂ ಡಾನ್ಸ್​ ಲೋಕದ ಮಹರಾಣಿ. ನಟಿ ತಮನ್ನಾ ಈಗ ಹೀರೋಯಿನ್​ ಅನ್ನೋದಕ್ಕು ಹೆಚ್ಚಾಗಿ ಸೌತ್​​​ನ ಹಾಟೆಸ್ಟ್ ಡಾನ್ಸರ್​ ಆಗಿದ್ದಾರೆ. ಕಳೆದ ವರ್ಷದ ಕಾವಲಯ್ಯ ಅಂತ ಸೂಪರ್ ಸ್ಟಾರ್​ ಜೊತೆ ಹಾಡಿ ಕುಣಿದಿರೋ ತಮನ್ನಾ ಸ್ತ್ರೀ-2 ಸಿನಿಮಾದಲ್ಲಿ ಆಜ್ ಕೀ ರಾತ್ ಅಂತ ಮಸ್ತ್​ ಆಗಿ ಮಿಂಚಿದ್ರು. 

ಇವರ ನರ್ತನಕ್ಕೆ ಗಂಡ್ ಹೈಕ್ಳು ಮಂತ್ರಮುಗ್ಧರಾಗಿದ್ರು. ಆದ್ರೆ ಈಗ ತಮನ್ನಾ ಮತ್ತೊಂದು ವಿಚಾರಕ್ಕೆ ಟಾಕ್ ಆಫ್ ದಿ​ ಟೌನ್ ಆಗಿದ್ದಾರೆ. ಅದೇ ಇಡಿ ವಿಚಾರಣೆ ಕಾರಣಕ್ಕೆ. ನಟಿ ತಮನ್ನಾ ಭಾಟಿಯಾ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ಎದುರಿಸಿದ್ದಾರೆ. ಫೇರ್‌ಪ್ಲೇ ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಲು ಪ್ರೋತ್ಸಾಹಿಸುವ ವಿವಾದಿತ ಜಾಹೀರಾತಿನಲ್ಲಿ ತಮನ್ನಾ ಕಾಣಿಸಿಕೊಂಡಿದ್ರು. ಹೀಗಾಗಿ ಬಹುಭಾಷಾ ನಟಿ ತಮನ್ನಾಳನ್ನ ಜಾರಿ ನಿರ್ದೇಶನಾಲಯ ಗೌಹಾಟಿಯಲ್ಲಿ ವಿಚಾರಣೆ ಮಾಡಿದೆ. ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಜಾಹೀರಾತಿಗೆ ಸಂಬಂಧಿಸಿದಂತೆ ಬಾಲಿವುಡ್​ ನಟರಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರಿಗೂ ಜಾರಿ ನಿರ್ದೇಶನಾಲಯ ಸಮನ್ಸ್​ ನೀಡಿ ವಿಚಾರಣೆ ನಡೆಸಿತ್ತು. 

ಪ್ರಕರಣದಲ್ಲಿ ನಟಿ ಸಾಹಿಲ್​ ಖಾನ್​ರನ್ನು ಮುಂಬೈ ಸೈಬರ್​​ ಕ್ರೈಂ ತಂಡ ಬಂಧಿಸಿತ್ತು. ನಟಿಯರಾದ ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಈಗ  ಟಾಲಿವುಡ್​ ಬ್ಯೂಟಿ ತಮನ್ನಾ ಇಡಿ ವಿಚಾರಣೆ ಎದುರಿಸಿದ್ದಾರೆ. ಈ ಕೇಸ್​​ನಲ್ಲಿ ತಮನ್ನಾ ಪಾತ್ರ ಏನು..? ಅವರು ಬರೀ ಜಾಹೀರಾತಿನಲ್ಲಿ ನಟಿಸಿ ಹಣ ಪಡೆದುಕೊಂಡ್ರಾ..? ಅಥವಾ ಈ ಮೋಸದ ಌಪ್ ಕಂಪನಿ ಜೊತೆಗೆ ಬೇರೆ ರೀತಿಯ ವ್ಯವಹಾರ ಹೊಂದಿದ್ರಾ ಅನ್ನೋದನ್ನ ಈ ತನಿಖೆ ಬಯಲು ಮಾಡಲಿದೆ. ಒಟ್ನಲ್ಲಿ ಮಿಲ್ಕಿ ಬ್ಯೂಟಿಗೆ ಸದ್ಯ ಇಡಿ ಡ್ರಿಲ್ ಮಾಡ್ತಾ ಇದ್ದು ಸದ್ಯದಲ್ಲೇ ಅಸಲಿಯತ್ತೇನು ಅನ್ನೋದು ಹೊರಬರಲಿದೆ.