ಜಗತ್ತನ್ನೇ ಕಾಡುತ್ತಿದೆ ಮಹಾಯುದ್ಧದ ಭೀತಿ! ಮತ್ತೊಂದು ಯುದ್ಧಕ್ಕೆ ಮುನ್ನುಡಿ ಬರೆದ ಹುಚ್ಚುದೊರೆ!
ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಯುದ್ಧಭೀತಿ ತಂದಿದ್ದಾರೆ. ದ.ಕೊರಿಯಾ ಮೇಲೆ ಯುದ್ಧಕ್ಕೆ ದಿನಗಣನೆ ಶುರುವಾಗಿದೆ. ಕಿಮ್ ಸಂವಿಧಾನದಲ್ಲಿ ಹೊಸ ತಿದ್ದುಪಡಿ ಮಾಡಿದ್ದು, ದಕ್ಷಿಣ ಕೊರಿಯಾ ತಮ್ಮ ಶತ್ರುರಾಷ್ಟ್ರ ಎಂದು ಹೇಳಿದ್ದಾರೆ.
ಬೆಂಗಳೂರು (ಅ.19): ಕಿಮ್ ಜಾಂಗ್ ಉನ್.. ಈ ಕಲಿಯುಗ ಕಂಸನ ಬಗ್ಗೆ ನಾವೆಲ್ಲಾ ಮಾತಾಡಿ ಅದೆಷ್ಟು ದಿನಗಳಾಗಿತ್ತೋ ಏನೋ.. ಆದ್ರೆ ಈ ಸಲ ಅವನು ದೊಡ್ಡದಾಗೇ ಸಿಗ್ನಲ್ ಕೊಟ್ಟಿದಾನೆ.. ತನ್ನ ಬೆನ್ನಿಗೆ ಅಂಟಿಕೊಂಡಿರೋ ದೇಶವನ್ನೇ ಧ್ವಂಸ ಮಾಡೋ ಸುಳಿವು ಕೊಟ್ಟಿದ್ದಾನೆ.
ಅವನೇನಾದ್ರೂ ರಕ್ತದೋಕುಳಿ ಹರಿಸೋ ಕನಸು ಕಂಡ್ರೆ, ಇಡೀ ಏಷ್ಯಾ ಖಂಡವೇ ಜ್ವಾಲಾಮುಖಿಯಂತೆ ಆಸ್ಫೋಟಗೊಳ್ಳಬೇಕಾಗುತ್ತೆ.. ಅವನ ಯುದ್ಧದಾಹಕ್ಕೆ ಅಮಾಯಕ ದೇಶಗಳು ಬಲಿಯಾಗ್ಬೇಕಾಗುತ್ತೆ.
ಉತ್ತರ ಕೊರಿಯಾದಲ್ಲಿ ಪ್ರವಾಹ ಭೂಕುಸಿತ ತಡೆಯಲು ವಿಫಲರಾದ 30 ಅಧಿಕಾರಿಗಳಿಗೆ ಗಲ್ಲು
ಮೊದಲೇ ಇಡೀ ಜಗತ್ತೇ ಯುದ್ಧ ಕಾರ್ಮೋಡ ಕವಿದು ಅಂಧಾಕಾರದಲ್ಲಿ ಮುಳುಗಿದೆ. ಹೀಗಿರುವಾಗಲೇ, ಈ ನರಕಾಸುರನೂ ಯುದ್ಧೋನ್ಮಾದಕ್ಕೆ ಬಿದ್ರೆ, ಅದರ ಪರಿಣಾಮ ಏನಾಗ್ಬೋದು? ಅಸಲಿಗೆ ಅವನಿಗೆ ಈಗ್ಯಾಕೆ ಯುದ್ಧದ ಹುಚ್ಚುಹೊತ್ತಿಕೊಳ್ತು..? ಅದರ ವಿವರ ಇಲ್ಲಿದೆ.