ನಿರ್ದೇಶಕ ಪಾ ರಂಜಿಂತ್‌ಗೆ ರಜಿನಿ ಮಗಳ ತಿರುಗೇಟು: ಮಗಳ ಐಶ್ವರ್ಯಾ ಪರ ಧ್ವನಿ ಎತ್ತಿದ ರಜನಿಕಾಂತ್!
ಮೊನ್ನೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ್ ಪಡೆದ ಮೇಲೆ ಅನೇಕರು ರಜಿನಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆ ಪೈಕಿ ರಜಿನಿಯ ಎರಡು ಚಿತ್ರಗಳನ್ನ ನಿರ್ದೇಶಿಸಿದ್ದ ಪಾ.ರಂಜಿತ್ ಕೂಡ ಒಬ್ರು. 'ರಜನಿಕಾಂತ್ ಅಯೋಧ್ಯೆಗೆ ಹೋಗಿದ್ದು, ರಾಮನ ದರ್ಶನ ಪಡೆದದ್ದು ತಪ್ಪಲ್ಲ.
ಮೊನ್ನೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ್ ಪಡೆದ ಮೇಲೆ ಅನೇಕರು ರಜಿನಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆ ಪೈಕಿ ರಜಿನಿಯ ಎರಡು ಚಿತ್ರಗಳನ್ನ ನಿರ್ದೇಶಿಸಿದ್ದ ಪಾ.ರಂಜಿತ್ ಕೂಡ ಒಬ್ರು. 'ರಜನಿಕಾಂತ್ ಅಯೋಧ್ಯೆಗೆ ಹೋಗಿದ್ದು, ರಾಮನ ದರ್ಶನ ಪಡೆದದ್ದು ತಪ್ಪಲ್ಲ. ಆದರೆ, 500 ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದ್ದನ್ನು ನಾನು ಒಪ್ಪಲಾರೆ. ಇದರ ಹಿಂದಿನ ರಾಜಕಾರಣವನ್ನು ಪ್ರಶ್ನೆ ಮಾಡಬೇಕು ಅಂತ ರಜನಿಕಾಂತ್ರನ್ನ ಒಂದು ರಾಜಕೀಯ ಪಕ್ಷಕ್ಕೆ ಬ್ರ್ಯಾಂಡ್ ಮಾಡೋ ತರದ ಹೇಳಿಕೆ ಕೊಟ್ಟಿದ್ರು. ನಟ ರಜನಿಕಾಂತ್ ಮಗಳು ಐಶ್ವರ್ಯ ರಜಿನಿಕಾಂತ್ ಪಾ.ರಂಜಿತ್ ಹೇಳಿಕೆಗೆ ಉತ್ತರ ಕೊಟ್ಟಿದ್ದಾರೆ. ನನ್ನ ತಂದೆ ಸಂಘಿಯಲ್ಲ ಎಂದು ಗುಡುಗಿದ್ದಾರೆ. ಇತ್ತೀಚೆಗೆ ಅನೇಕರು ನನ್ನ ತಂದೆಯನ್ನ ಸಂಘಿ ಎಂದು ಕರೆಯುತ್ತಿದ್ದಾರೆ. ಅದರ ಅರ್ಥ ನನಗೆ ತಿಳಿದಿರಲಿಲ್ಲ.
ನಂತರ ಸಂಘಿ ಎಂದರೆ ನಿರ್ದಿಷ್ಟ ರಾಜಕೀಯ ಪಕ್ಷವನ್ನ ಬೆಂಬಲಿಸುವವರಿಗೆ ಕರೆಯುತ್ತಾರೆ ಅಂತ ಗೊತ್ತಾಯ್ತು. ಆದ್ರೆ ರಜಿನಿಕಾಂತ್ ಒಬ್ಬ ಸಂಘಿ ಅಲ್ಲ. ಅವರು ಸಂಘಿ ಆಗಿದ್ದರೆ ನನ್ನ ಲಾಲ್ ಸಲಾಂ ಸಿನಿಮಾ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಐಶ್ವರ್ಯ ರಜಿನಿಕಾಂತ್ ಸಂಘಿ ಅನ್ನೋ ಪದ ಬಳಕೆ ಮಾಡಿದ್ದ ಇದನ್ನ ಕೆಟ್ಟ ಪದ ಎಂದು ಬಿಂಬಿಸೋ ಕೆಲಸ ನಡೆದಿತ್ತು. ಇದಕ್ಕೆ ತಮ್ಮ ಮಗಳು ಐಶ್ವರ್ಯಾರನ್ನ ಸಮರ್ಥಿಸಿಕೊಂಡಿರೋ ರಜನಿಕಾಂತ್, "ನನ್ನ ಮಗಳು ಎಂದಿಗೂ ಸಂಘಿ ಪದ ಕೆಟ್ಟ ಪದ ಎಂದು ಹೇಳಿಲ್ಲ. ತನ್ನ ತಂದೆ ಆಧ್ಯಾತ್ಮಿಕತೆಯಲ್ಲಿ ಇರುವಾಗ ಅವರನ್ನು ಸಂಘಿ ಎಂದು ಏಕೆ ಬ್ರಾಂಡ್ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ" ಇದರಲ್ಲಿ ತಪ್ಪು ಏನು ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ರಜಿನಿಕಾಂತ್ ರಾಮ ಮಂದಿರ ಉದ್ಘಾನಟನೆಗೆ ಹೋಗಿ ಬಂದ ಮೇಲೆ ಈಗ ರಜಿನಿ ಬಗ್ಗೆ ಪರ ವಿರೋಧದ ಚರ್ಚೆ ಶುರುವಾಗಿದೆ. ಆದ್ರೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಿದ್ದ 7000 ಜನ ಗೆಸ್ಟ್ಗಳಲ್ಲಿ ರಜಿನಿಕಾಂತ್ ಕೂಡ ಒಬ್ರು ಅನ್ನೋದಂತು ಹೆಮ್ಮೆಯ ವಿಷಯ.