Asianet Suvarna News Asianet Suvarna News

ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಸುದ್ದಿ ಸುಳ್ಳಾ? ಬಚ್ಚನ್ ಕುಟುಂಬ ಮತ್ತೆ ಒಟ್ಟಿಗೆ!

ಕಳೆದ ಕೆಲವು ತಿಂಗಳುಗಳಿಂದ ಅಭಿಷೇಕ್‌ ಐಶ್ವರ್ಯ ರೈ ಡಿವೋರ್ಸ್‌ ಪಡೆದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಪ್ರೊ ಕಬಡ್ಡಿ ಪಂದ್ಯ ನೋಡಲು ಅಭಿಷೇಕ್‌ ಮತ್ತು ಐಶ್ವರ್ಯ ರೈ ಒಟ್ಟಿಗೆ ಆಗಮಿಸಿದ್ದು, ಎಲ್ಲರ ಗಮನಸೆಳೆದಿದೆ. 

ಪ್ರೊ ಕಬಡ್ಡಿ ಲೀಗ್‌ನ ಯುಮುಂಬಾ vs ಜೈಪುರ ಪಿಂಕ್ ಪ್ಯಾಂಥರ್ಸ್‌ ಪಂದ್ಯದ ವೇಳೆ ಬಚ್ಚನ್‌ ಕುಟುಂಬ ಕೂಡ ಹಾಜರಿತ್ತು. ಅಭಿಷೇಕ್ ಬಚ್ಚನ್ ಅವರ ಕಬಡ್ಡಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್‌ ಪಂದ್ಯ ವೀಕ್ಷಿಸಲು ಐಶ್ವರ್ಯ ರೈ, ಅಮಿತಾಭ್ ಬಚ್ಚನ್, ಆರಾಧ್ಯ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಆಗಮಿಸಿದ್ದರು. ಶನಿವಾರ ರಾತ್ರಿ ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ಬಚ್ಚನ್‌ ಕುಟುಂಬದವರು ಪಾಲ್ಗೊಂಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅಭಿಷೇಕ್‌ ಐಶ್ವರ್ಯ ರೈ ಡಿವೋರ್ಸ್‌ ಪಡೆದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಪ್ರೊ ಕಬಡ್ಡಿ ಪಂದ್ಯ ನೋಡಲು ಅಭಿಷೇಕ್‌ ಮತ್ತು ಐಶ್ವರ್ಯ ರೈ ಒಟ್ಟಿಗೆ ಆಗಮಿಸಿದ್ದು, ಎಲ್ಲರ ಗಮನಸೆಳೆದಿದೆ. ಈ ಒಂದೇ ವಿಡಿಯೋ ಮೂಲಕ ಐಶ್‌ - ಅಭಿ ವಿಚ್ಛೇದನ ವದಂತಿಗೆ ಫುಲ್‌ ಸ್ಟಾಪ್‌ ನೀಡಿದ್ದಾರೆ. ಈ ಪಂದ್ಯ ನೋಡಲು ಅವರ ಜೊತೆ ಪುತ್ರಿ ಆರಾಧ್ಯ ಸಹ ಆಗಮಿಸಿದ್ದರು. 

Video Top Stories