Vastu Tips: ಒಂದೇ ಬಾರಿ ಪ್ಲೇಟಿಗೆ ಮೂರು ರೊಟ್ಟಿ ಹಾಕ್ಬಾರ್ದು, ಯಾಕೆ ಗೊತ್ತಾ?
ಮೂರು ಅಶುಭವೆಂದು ನಾವು ಪರಿಗಣಿಸ್ತೇವೆ. ಇದೇ ಕಾರಣಕ್ಕೆ ಮೂರನ್ನು ದೂರ ಇಡ್ತೆವೆ. ಮೂರು ರೊಟ್ಟಿಯನ್ನು ಊಟದ ಪ್ಲೇಟ್ ಗೆ ಒಂದೇ ಬಾರಿ ಹಾಕುವ ಬಗ್ಗೆ ಶಾಸ್ತ್ರದಲ್ಲಿ ಹೇಳಲಾಗಿದೆ. ಅದ್ರಿಂದ ಏನೆಲ್ಲ ನಷ್ಟವಿದೆ ಎಂಬುದನ್ನು ನಾವಿಂದು ಹೇಳ್ತೆವೆ.
ಮೂರು ಅಂದ್ರೆ ಮೂಗು ಮುರಿಯೋರೇ ಜಾಸ್ತಿ. ವಸ್ತುವಿರಲಿ, ಆಹಾರವಿರಲಿ ಇಲ್ಲ ಚಾಕೋಲೇಟ್ ಇರಲಿ ಕೈಗೆ ಮೂರು ಬಂದ್ರೆ ಜನರು ಅದನ್ನು ತೆಗೆದುಕೊಳ್ಳೋದಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರೇ ಇರಲಿ, ಅವರ ಕೈಗೆ ಒಂದೇ ಬಾರಿ ಮೂರು ಚಾಕೋಲೇಟ್ ನೀಡಿದಾಗ, ಮೂರು ಕೊಡಬೇಡಿ, ಇನ್ನೊಂದು ಜಾಸ್ತಿ ಕೊಡಿ ಎನ್ನುತ್ತಾರೆ. ಶುಭ ಕಾರ್ಯಗಳಿಗೆ ಹೋಗುವ ಸಂದರ್ಭದಲ್ಲಿ ಕೂಡ ಮೂರು ಜನರು ಹೋಗೋದು ನಿಷಿದ್ಧ. ಒಂದು ಇಬ್ಬರು ಹೋಗ್ಬೇಕು ಇಲ್ಲವೆ ನಾಲ್ಕು ಮಂದಿ ಹೋಗ್ಬೇಕು ಎಂಬ ನಂಬಿಕೆ ನಮ್ಮಲ್ಲಿದೆ.
ನಮ್ಮಲ್ಲಿ ಮೂರನ್ನು ಅಶುಭವೆಂದುಕೊಳ್ತೆವೆ. ಒಂದೇ ಬಾರಿ ಮೂರು ಮಿಠಾಯಿ (Candy) ಪ್ರಸಾದವಿರಲಿ, ಮೂರು ಅಗರಬತ್ತಿಯಿರಲಿ,ಮೂರು ರೊಟ್ಟಿ ಇರಲಿ ಒಂದೇ ಬಾರಿ ನೀಡಬಾರದು. ಜ್ಯೋತಿಷ್ಯ (Astrology) ಶಾಸ್ತ್ರ, ವಾಸ್ತು (Vastu) ಶಾಸ್ತ್ರದಲ್ಲೂ ಮೂರಂಕಿಯನ್ನು ದೂರವಿಡಲಾಗುತ್ತದೆ. ನಾವಿಂದು ಇದ್ರ ಬಗ್ಗೆ ಇನ್ನೊಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೆವೆ.
ಒಂದೇ ಬಾರಿ ಮೂರು ರೊಟ್ಟಿಯನ್ನು ಪ್ಲೇಟ್ ಗೆ ಹಾಕಿ ಏಕೆ ನೀಡಬಾರದು ಗೊತ್ತಾ? :
ಮೂರು ರೊಟ್ಟಿ ನೀಡುವುದು ಅಶುಭ : ಹಿಂದೂ ಧರ್ಮದಲ್ಲಿ ಪ್ಲೇಟ್ ಗೆ ಮೂರು ರೊಟ್ಟಿ ಹಾಕಿ ನೀಡಿದ್ರೆ ಅದನ್ನು ಅಮಂಲವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣ, ಪ್ಲೇಟ್ ನಲ್ಲಿ ಮೂರು ರೊಟ್ಟಿ ಹಾಕುವುದು ಮೃತರಿಗೆ ನೀಡುವ ಆಹಾರವೆಂದು ಪರಿಗಣಿಸಲಾಗುತ್ತದೆ. ಬದುಕಿರುವ ವ್ಯಕ್ತಿಗೆ ಅಪ್ಪಿತಪ್ಪಿಯೂ ಮೂರು ರೊಟ್ಟಿಯನ್ನು ಪ್ಲೇಟ್ ನಲ್ಲಿ ಹಾಕಿ ನೀಡಬಾರದು. ಯಾವುದೇ ವ್ಯಕ್ತಿ ಸಾವನ್ನಪ್ಪಿದ 13 ದಿನ ಮಾಡುವ ಕಾರ್ಯದಲ್ಲಿ, ಒಂದು ಅಥವಾ ಮೂರು ರೊಟ್ಟಿಯನ್ನು ಪ್ಲೇಟ್ ನಲ್ಲಿಟ್ಟು, ಮೃತರಿಗೆ ನೀಡುವ ಪದ್ಧತಿಯಿದೆ.
ಹೆಚ್ಚಾಗುತ್ತೆ ದ್ವೇಷ : ಒಂದೇ ಬಾರಿ ಮೂರು ರೊಟ್ಟಿಯನ್ನು ನೀಡಿದ್ರೆ ಅದನ್ನು ನೀಡಿದ ವ್ಯಕ್ತಿ ಹಾಗೂ ಪಡೆದ ವ್ಯಕ್ತಿ ಇಬ್ಬರಿಗೂ ಒಳ್ಳೆಯದಲ್ಲ. ಇಬ್ಬರ ಮಧ್ಯೆ ದ್ವೇಷ ಹೆಚ್ಚಾಗುತ್ತದೆ. ಬರೀ ರೊಟ್ಟಿ ಮಾತ್ರವಲ್ಲ ಒಟ್ಟಿಗೆ ಯಾವುದೇ ವಸ್ತುವನ್ನು ಮೂರು ನೀಡಬಾರದು. ಇದ್ರಿಂದ ಇಬ್ಬರ ಮಧ್ಯೆ ನಕಾರಾತ್ಮಕತೆ ಹೆಚ್ಚಾಗುತ್ತದೆ.
LOTUS ASTRO: ಸೌಂದರ್ಯ, ಸಮೃದ್ಧಿ ಫಲವತ್ತತೆಯ ಸಂಕೇತ ಕಮಲ, ಲಕ್ಷ್ಮೀಪೂಜೆಗಿದೇ ಶ್ರೇಷ್ಠ
ಕಡಿಮೆಯಾಗುತ್ತೆ ವಯಸ್ಸು : ಶಾಸ್ತ್ರಗಳ ಪ್ರಕಾರ, ಯಾರಿಗೂ ಒಂದೇ ಬಾರಿ ಮೂರು ರೊಟ್ಟಿಯನ್ನು ನೀಡಬಾರದು. ಇದ್ರಿಂದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ. ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ವ್ಯಕ್ತಿಗೆ ನೀವು ಒಂದೇ ಬಾರಿ ಮೂರು ರೊಟ್ಟಿ ನೀಡಬೇಡಿ.
ಅಶುಭ ನಂಬರ್ : ಸನಾತನ ಧರ್ಮದಲ್ಲಿ ನಂಬರ್ ಮೂರನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಭಗವಂತನಿಗೆ ಪ್ರಿಯವಾದ ಅಥವಾ ದೇವರ ಪೂಜೆಗೆ ಬಳಸುವ ಯಾವುದೇ ವಸ್ತುವಿರಲಿ, ಮೂರನ್ನು ಒಂದೇ ಬಾರಿ ಬಳಕೆ ಮಾಡುವುದಿಲ್ಲ. ಹಾಗೆಯೇ ರೊಟ್ಟಿಯನ್ನು ಕೂಡ ಮೂರು ನೀಡಬಾರದು.
Vastu Tips: ಲವಂಗ ಕರ್ಪೂರವನ್ನು ಹೀಗೆ ಬಳಸಿದ್ರೆ ಆರ್ಥಿಕ ಮುಗ್ಗಟ್ಟಿನಿಂದ ಮುಗ್ಗರಿಸೋಲ್ಲ!
ಮಾನಸಿಕ ಸಮಸ್ಯೆ : ಒಂದೇ ಬಾರಿ ಮೂರು ರೊಟ್ಟಿಯನ್ನು ಪ್ಲೇಟ್ ಗೆ ಹಾಕಿ ಸೇವನೆ ಮಾಡುವುದ್ರಿಂದ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ, ಒತ್ತಡ ಹೆಚ್ಚಾಗುತ್ತದೆ. ಮೂರು ರೊಟ್ಟಿ ಸೇವನೆ ಮಾಡೋದು ತಪ್ಪಲ್ಲ. ನೀವು ಮೊದಲು ಎರಡು ರೊಟ್ಟಿಯನ್ನು ಪ್ಲೇಟ್ ಗೆ ಹಾಕಿ ಸೇವನೆ ಮಾಡಿ. ನಂತ್ರ ಒಂದು ರೊಟ್ಟಿಯನ್ನು ಹಾಕಿಕೊಳ್ಳಿ ಎನ್ನುತ್ತಾರೆ ತಜ್ಞರು.
ವೈಜ್ಞಾನಿಕ ಕಾರಣ : ಊಟದ ತಟ್ಟೆಯಲ್ಲಿ 3 ರೊಟ್ಟಿ ಬಡಿಸಬೇಡಿ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ವಿಜ್ಞಾನದಲ್ಲಿ 3 ರೊಟ್ಟಿ ಬಡಿಸುವ ಬಗ್ಗೆ ಯಾವುದೇ ಸಮರ್ಥನೆ ಇಲ್ಲ. ಹಾಗೆ ಯಾವುದೇ ಒಂದು ಸಂಖ್ಯೆಯ ಬಗ್ಗೆ ಸಮರ್ಥನೆ ಇಲ್ಲ. ಒಂದು ಬಾರಿ ಎರಡು ರೊಟ್ಟಿ, ಸಬ್ಜಿ, ದಾಲ್, ಮೊಸರು ಮತ್ತು ಅನ್ನವನ್ನು ಸೇವನೆ ಮಾಡಿದ್ರೆ ನಮ್ಮ ಹೊಟ್ಟೆಗೆ ಸಾಕಾಗುತ್ತದೆ. ಎರಡಕ್ಕಿಂತ ಹೆಚ್ಚು ಸೇವನೆ ಮಾಡಿದ್ರೆ ಬೊಜ್ಜು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.