Asianet Suvarna News Asianet Suvarna News

Vastu For Mental Health: ಒತ್ತಡದಿಂದ ಮುಕ್ತರಾಗ್ಬೇಕಂದ್ರೆ ಈ ರೀತಿ ಮಾಡಿ..

ಇಂದಿನ ಬದುಕಿನ ಶೈಲಿಯು ಎಲ್ಲರನ್ನೂ ಬೆಳಗಿನಿಂದ ರಾತ್ರಿಯವರೆಗೂ ಬ್ಯುಸಿಯಾಗಿಟ್ಟು ಒತ್ತಡ, ಆತಂಕ, ಖಿನ್ನತೆಗೆ ದೂಡುತ್ತಿದೆ. ಇವೆಲ್ಲವೂ ನಮ್ಮ ಸುತ್ತಲಿನ ನೆಗೆಟಿವ್ ಎನರ್ಜಿಯ ಕಾರಣದಿಂದಲೇ ಆಗುತ್ತವೆ. ನೆಗೆಟಿವ್ ಎನರ್ಜಿ ದೂರವಿಟ್ಟು ಒತ್ತಡ ಮುಕ್ತರಾಗೋಕೆ ಹೀಗ್ ಮಾಡಿ..

Vastu tips to get rid of stress skr
Author
Bangalore, First Published Jan 15, 2022, 12:49 PM IST
  • Facebook
  • Twitter
  • Whatsapp

ಮನುಷ್ಯನ ದೇಹವು ಸುತ್ತಲಿನ ನೆಗೆಟಿವ್ ಹಾಗೂ ಪಾಸಿಟಿವ್ ಎನರ್ಜಿ(positive energy)ಗಳನ್ನು ಸೆಳೆದುಕೊಳ್ಳಬಲ್ಲದು. ಇದರ ಪರಿಣಾಮ(effect)ವನ್ನು ದೈನಂದಿನ ಆಗು ಹೋಗುಗಳಲ್ಲಿ ಕಾಣಬಹುದು. ಮನುಷ್ಯ ತನ್ನ ಮನೆಗೆ ಬಹಳ ಅಟ್ಯಾಚ್ ಆಗಿರುವುದರಿಂದ ಹಾಗೂ ಅಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮನೆಯ ವಾತಾವರಣ ಆತನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ, ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಿರುವಂತೆ ನೋಡಿಕೊಳ್ಳಲು ಈ ಸರಳ ಪರಿಹಾರಗಳನ್ನು ಪ್ರಯೋಗಿಸಿ. 

ಸ್ವಚ್ಛತೆ(cleanliness)
ಮನೆಯ ಪ್ರತಿ ಕೋಣೆಯ ಈಶಾನ್ಯ ಮೂಲೆಯನ್ನು ಬಹಳ ಸ್ವಚ್ಛವಾಗಿ, ಜೋಡಿಸಿಟ್ಟುಕೊಳ್ಳಬೇಕು. ಇದಲ್ಲದೆ ಗೋಡೆಯ ಎಲ್ಲ ಮೂಲೆಗಳೂ ಜೇಡ ಕಟ್ಟದಂತೆ ಸ್ವಚ್ಛವಾಗಿರಬೇಕು. ಅವು ಬಡತನ(poverty)ವನ್ನು ಸೂಚಿಸುತ್ತವಷ್ಟೇ ಅಲ್ಲ, ಮನೆ ಸದಸ್ಯರ ನಡುವೆ ಬಿಕ್ಕಟ್ಟಿನ ಪರಿಸ್ಥಿತಿ ತಂದು ಒತ್ತಡ ಹೆಚ್ಚಿಸುತ್ತವೆ. ಬೇಡವಾದ, ತುಕ್ಕು ಹಿಡಿದ, ಹರಿದ, ತುಂಡಾದ ವಸ್ತುಗಳನ್ನು ಮನೆಯಿಂದ ತಕ್ಷಣವೇ ಹೊರ ಹಾಕಬೇಕು. ಇವೆಲ್ಲವೂ ನೆಗೆಟಿವ್ ಎನರ್ಜಿಯ ಉಗಮ ಸ್ಥಾನಗಳು.

ಪೀಠೋಪಕರಣ(furniture)
ಮನೆಯ ಮಧ್ಯದ ಹಾಲ್‌ನ ಮಧ್ಯ ಭಾಗವನ್ನು ಖಾಲಿಯಿಟ್ಟುಕೊಳ್ಳಬೇಕು. ಅಂದರೆ ಅಲ್ಲಿ ಟೇಬಲ್, ಸೋಫಾ ಏನೂ ಇರಕೂಡದು. ಕೈ ಕಾಲು ಮುರಿದ ಪೀಠೋಪಕರಣಗಳನ್ನು ಬಳಸಕೂಡದು.

ನಿಮ್ಮ ರಾಶಿಯ Power Color ಯಾವುದು ತಿಳಿಯಿರಿ

ಬೆಡ್ ರೂಂ(Bed room)
ತಲೆಯನ್ನು ಉತ್ತರ ದಿಕ್ಕಿಗಿಟ್ಟು ಎಂದಿಗೂ ಮಲಗಕೂಡದು. ಪೂರ್ವ ಹಾಗೂ ದಕ್ಷಿಣ ಭಾಗಗಳು ತಲೆಯಿಡಲು ಉತ್ತಮ ದಿಕ್ಕಾಗಿದ್ದು, ಪಶ್ಚಿಮ ಕೂಡಾ ಪರವಾಗಿಲ್ಲ. ಇನ್ನು ಮಲಗುವ ಕೋಣೆಯಲ್ಲಿ ಮದ್ಯ ಸೇವನೆ ಬೇಡವೇ ಬೇಡ. ಬೆಡ್‌ರೂಂಗಳಲ್ಲಿ ಕನ್ನಡಿ(mirror)ಗಳನ್ನಿರಿಸಬಾರದು. ಹಾಗೊಂದು ವೇಳೆ ಅವು ಅನಿವಾರ್ಯವೆನಿಸಿದರೆ, ರಾತ್ರಿ ಮಲಗುವಾಗ ಅವಕ್ಕೆ ಬಟ್ಟೆಗಳಿಂದ ಮುಚ್ಚಬೇಕು. ಹಾಸಿಗೆ ಮೇಲೆ ಮಲಗಲು ಯಾವಾಗಲೂ ಸ್ವಚ್ಛವಾದ ಬಿಳಿಯ ಕಾಟನ್ ಬಟ್ಟೆ ಬಳಸಿ. ಇಂಪಾದ ಮೆಲುವಾದ ಸಂಗೀತ ಬೆಡ್‌ರೂಂನಲ್ಲಿ ಹಾಕಿಟ್ಟುಕೊಳ್ಳಬೇಕು. ಇದು ರಾತ್ರಿಯ ನಿದ್ದೆಗೆ ನೆಮ್ಮದಿ ತರುತ್ತದೆ. ಕರ್ಪೂರ ಮತ್ತಿತರೆ ಸುಗಂಧ ಬೀರುವ ವಸ್ತುವನ್ನು ಹಚ್ಚಿಟ್ಟರೆ ಒತ್ತಡ ಕಡಿಮೆಯಾಗುತ್ತದೆ. 

ಮಂಚ(cot)
ಮಂಚವು ಯಾವತ್ತೂ ಗೋಡೆ(wall)ಗೆ ತಾಕಿರಬಾರದು. ಯಾವಾಗಲೂ ನಾಲ್ಕು ಕಾಲುಗಳಿರುವ ಮಂಚವನ್ನೇ ಬಳಸಬೇಕು. ಬೆಡ್‌ಬಾಕ್ಸ್‌(bed box)ಗಳು ಇರಬಾರದು. ಒಂದು ವೇಳೆ ಬಾಕ್ಸ್ ಇರುವ ಬೆಡ್ ಬಳಸಿದರೆ, ಅದರೊಳಗೆ ನೆಗೆಟಿವ್ ಎನರ್ಜಿ ಸೂಸುವ ಯಾವ ವಸ್ತುಗಳೂ ಇರಕೂಡದು. ಇದು ಮಲಗುವವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

Sneezing : ಮಾತ್ರೆ ಸೇವಿಸುವ ವೇಳೆ ಬರುವ ಸೀನು ನೀಡುತ್ತೆ ಈ ಸಂಕೇತ

ಅಧ್ಯಯನ ಟೇಬಲ್(study table)
ಮನೆಯ ಉತ್ತರ ಭಾಗದಲ್ಲಿ ಅಧ್ಯಯನ ಕೊಠಡಿ ಇರಬೇಕು. ಸ್ಟಡಿ ಟೇಬಲ್ ಈಶಾನ್ಯ(north east) ದಿಕ್ಕಿಗಿರಬೇಕು. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳ ಏಕಾಗ್ರತೆ ಹೆಚ್ಚಿಸಲು ಅವರು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಓದಲು ಕೂರುವಂತೆ ನೋಡಿಕೊಳ್ಳಬೇಕು. ಟೇಬಲ್ ಮೇಲೆ ಒಂದು ನೀರು ತುಂಬಿದ ಗ್ಲಾಸ್ ಇರಬೇಕು. ಜೊತೆಗೆ, ಟೇಬಲ್ ಸ್ವಚ್ಛವಾಗಿಯೂ, ಹೆಚ್ಚು ಸಾಮಾನುಗಳಿಲ್ಲದಂತೆಯೂ ಇರಬೇಕು. 
ಓದುವ ಕೋಣೆಯ ಗೋಡೆಗೆ ಹಳದಿ ಬಣ್ಣ ಬಳಸಿದರೆ ಮಕ್ಕಳ ಮನಸ್ಸು ಪ್ರಶಾಂತವಾಗಿ ಒತ್ತಡಮುಕ್ತವಾಗಿರುತ್ತದೆ. 

ಅಡುಗೆಮನೆ(kitchen)
ಆಗ್ನೇಯ ದಿಕ್ಕಿನಲ್ಲೇ ಅಡುಗೆಕೋಣೆ ಇರಬೇಕು. ಅಡುಗೆ ಮಾಡುವವರು ಪೂರ್ವಕ್ಕೆ ಮುಖ ಮಾಡಿ ಅಡುಗೆ ತಯಾರಿಸಬೇಕು. ಪಾತ್ರೆಗಳನ್ನು ಯಾವಾಗಲೂ ಸಿಂಕ್‌ನಲ್ಲಿ ಹರಡದೆ ತೊಳೆದೇ ಇಡಬೇಕು. ಊಟ ಮಾಡುವಾಗ ಪುರುಷರು ಯಾವಾಗಲೂ ಉತ್ತರ(North)ಕ್ಕೆ ಮುಖ ಮಾಡಿ ಕೂತರೆ, ಮಹಿಳೆಯರು ಪೂರ್ವ(East)ಕ್ಕೆ ಮುಖ ಮಾಡಿ ಕೂರಬೇಕು.
 

Follow Us:
Download App:
  • android
  • ios