Asianet Suvarna News Asianet Suvarna News

Study roomನಲ್ಲಿ ಈ ಚಿತ್ರಗಳಿದ್ದರೆ ಓದಿನಲ್ಲೆಂದೂ ಮಕ್ಕಳು ಹಿಂದೆ ಬೀಳೋಲ್ಲ!

ಮಕ್ಕಳು ಅಧ್ಯಯನ ಮಾಡುವಾಗ ಸುತ್ತ ಪರಿಸರವು ಶಾಂತವಾಗಿರುವುದು ಮುಖ್ಯ. ಜೊತೆಜೊತೆಗೇ ಮಕ್ಕಳ ಮನಸ್ಸಿನಲ್ಲಿ ಏಕಾಗ್ರತೆ ಮೂಡುವುದು ಮುಖ್ಯ. ಇದಕ್ಕಾಗಿ ಅಧ್ಯಯನ ಕೊಠಡಿಯಲ್ಲಿ ಹಾಕಬೇಕಾದ ಚಿತ್ರಗಳೇನು ಎಂಬುದನ್ನು ವಾಸ್ತು ಶಾಸ್ತ್ರವು ಹೇಳುತ್ತದೆ.

Vastu tips these pictures inspire your child to study hard skr
Author
Bangalore, First Published Aug 21, 2022, 2:32 PM IST

ವಾಸ್ತುಶಾಸ್ತ್ರವು ಪುರಾತನ ವಿಜ್ಞಾನವಾಗಿದ್ದು ಅದು ಸಾರ್ವಕಾಲಿಕವಾಗಿದೆ. ವಾಸ್ತು ಶಾಸ್ತ್ರವನ್ನು ನಮ್ಮ ಮನೆಗೆ ಧನಾತ್ಮಕ ಕಾಸ್ಮಿಕ್ ಶಕ್ತಿಯನ್ನು ಪರಿಚಯಿಸುವ ಅಂಶವೆಂದು ಪರಿಗಣಿಸಲಾಗಿದೆ ಮತ್ತು ಅದು ನಾವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಸಲಹೆ ಅಳವಡಿಸಿಕೊಂಡರೆ ಆನಂದ, ಸಂತೋಷ, ಬೆಳವಣಿಗೆ, ಯಶಸ್ಸು ಮತ್ತು ಶಾಂತಿ ಲಭ್ಯವಾಗುತ್ತದೆ. 

ಈಗ ನಿಮ್ಮ ಮಕ್ಕಳ ಶಿಕ್ಷಣದ ವಿಷಯಕ್ಕೆ ಬಂದರೆ, ಅವರ ಓದು ಕೂಡಾ ಪ್ರಗತಿಯ ಹಾದಿಯಾಗಿದೆ. ಮಕ್ಕಳು ಚೆನ್ನಾಗಿ ಓದುವುದಿಲ್ಲ, ಮಾತು ಕೇಳುವುದಿಲ್ಲ ಎಂದರೆ ತಂದೆ ತಾಯಿಗೆ ಎಲ್ಲ ಇದ್ದರೂ ಅದೇ ಒಂದು ದೊಡ್ಡ ಕೊರತೆಯಂತೆನಿಸುತ್ತದೆ. ನಿಮ್ಮ ಮಗುವಿಗೆ ಓದಿನಲ್ಲಿ ಏಕಾಗ್ರತೆ ಸಾಧಿಸಲು ಸಮಸ್ಯೆ ಇದ್ದರೆ, ಅಥವಾ ಓದಲು ಆಸಕ್ತಿಯೇ ಇಲ್ಲದಿದ್ದರೆ, ಮಗು ಓದಿನಲ್ಲಿ ಹಿಂದೆ ಬೀಳುತ್ತದ್ದರೆ ಆಗ ನೀವು ಮಗುವಿನ  ಅಧ್ಯಯನ ಕೊಠಡಿ ವಾಸ್ತುವನ್ನು ಪರಿಶೀಲಿಸಬೇಕು. 

ಏಕೆಂದರೆ ಸ್ಟಡಿ ರೂಂನಲ್ಲಿ ಅನುಕೂಲಕರ ವಾತಾವರಣ ಇಲ್ಲವೆಂದರೆ ಮಕ್ಕಳು ಓದಲು ತಾನೇ ಹೇಗೆ ಸಾಧ್ಯ? ಇದಕ್ಕಾಗಿ ಅಧ್ಯಯನ ಕೊಠಡಿಯನ್ನು ವಾಸ್ತು ಪ್ರಕಾರವಾಗಿ ರೂಪಿಸಬೇಕು. ಕಲಿಕೆಯ ವಾತಾವರಣವು ಸರಿಿದ್ದಪೆ ಮಕ್ಕಳ ಏಕಾಗ್ರತೆ ಮಟ್ಟ ಸುಧಾರಿಸುವುದಲ್ಲದೆ, ಅವರ ಶೈಕ್ಷಣಿಕ ಕಾರ್ಯಕ್ಷಮತೆ ಹೆಚ್ಚುತ್ತದೆ. ಸಧ್ಯ ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಲು ಅಧ್ಯಯನ ಕೊಠಡಿಯಲ್ಲಿ ಯಾವ ಚಿತ್ರಗಳನ್ನು ಹಾಕಲು ವಾಸ್ತು ಹೇಳುತ್ತದೆ ಎಂಬುದನ್ನು ನೋಡೋಣ. 

ಇಂಥ ಚಿತ್ರಗಳಿರಲಿ
ಅಧ್ಯಯನ ಕೊಠಡಿಯಲ್ಲಿ ಫೋಟೋ ಆಯ್ಕೆಮಾಡುವಾಗ ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ನೀವು ಯಾವ ರೀತಿಯಲ್ಲಿ ಚಿತ್ರಗಳನ್ನು ಹಾಕುತ್ತೀರೋ, ಅದಕ್ಕೆ ತಕ್ಕಂತೆ ಮಗುವಿನ ಮನಸ್ಸು ಕೂಡ ಅಧ್ಯಯನದಲ್ಲಿ ತೊಡಗಿರುತ್ತದೆ. ಮಕ್ಕಳು ತಮ್ಮ ಸುತ್ತಲಿನ ವಸ್ತುಗಳಿಂದ ಬೇಗನೆ ಕಲಿಯುತ್ತಾರೆ ಎಂದು ನೀವು ಕೇಳಿರಬೇಕು, ಆದ್ದರಿಂದ ನೀವು ಅವರಿಗೆ ಯಾವ ರೀತಿಯ ವಾತಾವರಣವನ್ನು ನೀಡುತ್ತೀರೋ, ಅದಕ್ಕೆ ಸರಿಯಾಗಿ ಅವರು ಒಳ್ಳೆಯ, ಕೆಟ್ಟ ಅಥವಾ ಉತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ. ಹೀಗಾಗಿ ಅಧ್ಯಯನ ಕೊಠಡಿಯಲ್ಲಿ ಮಕ್ಕಳಿಗೆ ಸ್ಫೂರ್ತಿ ತುಂಬುವಂತ ಚಿತ್ರಗಳನ್ನು ಹಾಕಬೇಕು. 

ಶ್ರಾವಣದಲ್ಲೇ ಈ 6 ಗಿಡ ನೆಡಿ; ನಿಮ್ಮ ಆಸ್ತಿ ಹೆಚ್ಚುವುದು ನೋಡಿ..

ನೀವು ಅಲ್ಲಿ ಉದಯಿಸುವ ಸೂರ್ಯನ ಚಿತ್ರಗಳನ್ನು ಹಾಕಬಹುದು, ಏಳು ಕುದುರೆಗಳು ಓಡುವ ಚಿತ್ರಗಳನ್ನು ಸಹ ಹಾಕಬಹುದು. ಆಕಾಶದಲ್ಲಿ ಹಾರುವ ಪಕ್ಷಿಗಳು, ಚಿಲಿಪಿಲಿ ಚಿತ್ರಗಳು. ಇದಲ್ಲದೆ, ಕಠಿಣ ಪರಿಶ್ರಮದ ಬಲದಿಂದ ತಮ್ಮ ಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದ ಜನರ ಚಿತ್ರಗಳನ್ನು ಅಥವಾ ಪೋಸ್ಟರ್‌ಗಳನ್ನು ಸಹ ಮಗುವಿನ ಸ್ಟಡಿ ರೂಂನಲ್ಲಿ ನೀವು ಹಾಕಬಹುದು.
ಇವಲ್ಲದೆ, 
ಸರಸ್ವತಿ ದೇವಿ: ಸರಸ್ವತಿ ದೇವಿಯು ಜ್ಞಾನ, ಬುದ್ಧಿವಂತಿಕೆ ಮತ್ತು ಕಲೆಯ ದೇವತೆ. ಹಾಗಾಗಿ ಅಧ್ಯಯನ ಕೊಠಡಿಯಲ್ಲಿ ಸರಸ್ವತಿಯ ಫೋಟೋ ಇಲ್ಲವೇ ಮೂರ್ತಿ ಇರಲಿ.

ಗಣೇಶ: ಅವನು ಅಕ್ಷರಗಳು ಮತ್ತು ಕಲಿಕೆಯ ದೇವರು. ವಿದ್ಯಾರ್ಥಿಯಾಗಿ ಹೊಸ ವಿಷಯ ಕಲಿಯಲು ಅಡೆತಡೆಗಳನ್ನು ಎದುರಿಸುತ್ತಿರುವವರು ಅಧ್ಯಯನ ಕೊಠಡಿಯ ಗೋಡೆಯ ಮೇಲೆ ಗಣೇಶನ ಚಿತ್ರ ಹಾಕಿಕೊಳ್ಳಬೇಕು.

ಗರುಡ: ಭಗವಾನ್ ವಿಷ್ಣುವಿನ ವಾಹನವಾದ ಗರುಡನು, ಅವನ ತೀಕ್ಷ್ಣ ದೃಷ್ಟಿ ಮತ್ತು ಶಕ್ತಿಯುತ ಬುದ್ಧಿಶಕ್ತಿಗೆ ಹೆಸರುವಾಸಿಯಾಗಿದ್ದಾನೆ. ಹಾಗಾಗಿ ಅಧ್ಯಯನ ಕೊಠಡಿಯಲ್ಲಿ ಗರುಡನ ವಿಗ್ರಹ ಅಥವಾ ಚಿತ್ರವಿದ್ದರೆ ಮಕ್ಕಳ ಬೌದ್ಧಿಕ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ.

ಗಾಯತ್ರಿ ಮಂತ್ರ: 'ಗಾಯತ್ರಿ ಮಂತ್ರ' ಪಠಣವು ಅಪಾರ ಜ್ಞಾನ ಮತ್ತು ಒಳನೋಟವನ್ನು ನೀಡುತ್ತದೆ ಎಂಬ ಹಿಂದೂ ನಂಬಿಕೆ ಇದೆ. ಆದ್ದರಿಂದ, ನಿಮ್ಮ ಮಗುವಿನಲ್ಲಿ ಮಾಂತ್ರಿಕ ಸುಧಾರಣೆಯನ್ನು ನೀವು ನೋಡಲು ಬಯಸಿದರೆ, ಅವರ ಅಧ್ಯಯನ ಮೇಜಿನ ಮೇಲೆ 'ಗಾಯತ್ರಿ ಮಂತ್ರ'ದ ಚೌಕಟ್ಟಿನ ಚಿತ್ರವನ್ನು ಇರಿಸಿ.

Weekly Love Horoscope: ಈ ರಾಶಿಯ ಪ್ರೇಮಿಗಳಿಗೆ ಈ ವಾರವಿಡೀ ಪ್ರೇಮಮಯ

ಈ ಚಿತ್ರಗಳನ್ನು ತಪ್ಪಿಸಿ
ಇಂಥ ಚಿತ್ರಗಳನ್ನು ಅಧ್ಯಯನ ರೂಪದಲ್ಲಿ ಬಳಸಿದರೆ, ಇದರಿಂದಾಗಿ ಮಗುವಿನ ಮನಸ್ಸು ವಿಚಲಿತಗೊಳ್ಳುತ್ತದೆ. ಮಗುವಿನ ಆಲೋಚನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಫೋಟೋಗಳು ಯಾವುವು ನೋಡೋಣ. 
ಹಿಂಸೆ ಅಥವಾ ದುಃಖವನ್ನು ತೋರಿಸುವ ಯಾವುದೇ ಫೋಟೋವನ್ನು ಹಾಕಬೇಡಿ. 
ಚಲನಚಿತ್ರ ಪೋಸ್ಟರ್‌ಗಳನ್ನು ಹಾಕಬೇಡಿ. 
 

Follow Us:
Download App:
  • android
  • ios