Vastu Tips: ಈ ದಿಕ್ಕಲ್ಲಿ ತಲೆ ಇಟ್ಟು ಮಲಗಿದ್ರೆ ಹೆಚ್ಚುತ್ತವೆ ಕಾಯಿಲೆಗಳು!
ನಮ್ಮ ಜೀವನದಲ್ಲಿ ಅನೇಕ ವಿಷಯಗಳು ನಾವು ಹೇಗೆ ಮಲಗುತ್ತೇವೆ ಎಂಬುದರೊಂದಿಗೆ ಸಂಪರ್ಕ ಹೊಂದಿವೆ. ನಿಮ್ಮ ತಲೆಯನ್ನು ತಪ್ಪು ದಿಕ್ಕಿಗೆ ಇಟ್ಟು ಮಲಗುವುದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಆಹಾರ ಮತ್ತು ವ್ಯಾಯಾಮದ ಜೊತೆಗೆ, ಆರೋಗ್ಯಕರ ದೇಹಕ್ಕೆ ಸಾಕಷ್ಟು ನಿದ್ರೆಯೂ ಮುಖ್ಯ. ದಿನವಿಡೀ ಕೆಲಸ ಮಾಡಿದ ನಂತರ ಅನೇಕ ಜನರು ತುಂಬಾ ಒತ್ತಡಕ್ಕೊಳಗಾಗುತ್ತಾರೆ. ಉಸ್ಸಪ್ಪಾ ಮಲಗಿದರೆ ಸಾಕು ಎಂದು ಸಿಕ್ಕಿದ ದಿಕ್ಕಿನಲ್ಲಿ ಹಾಸಿಗೆ ಮೇಲೆ ಬಿದ್ದು ಮಲಗುವ ಅಭ್ಯಾಸ ಇರುತ್ತದೆ. ಆದರೆ, ಹೀಗೆ ಯಾವುದೋ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಹೆಚ್ಚುತ್ತದೆ. ನಮ್ಮ ಹಿಂದೂ ಶಾಸ್ತ್ರಗಳು ಹಾಗೂ ವಿಜ್ಞಾನವು ನಾವು ಪ್ರತಿದಿನ ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿವೆ. ನಮ್ಮ ಜೀವನದಲ್ಲಿ ಅನೇಕ ವಿಷಯಗಳು ನಾವು ಹೇಗೆ ಮಲಗುತ್ತೇವೆ ಎಂಬುದರೊಂದಿಗೆ ಸಂಪರ್ಕ ಹೊಂದಿವೆ. ನಿಮ್ಮ ತಲೆಯನ್ನು ತಪ್ಪು ದಿಕ್ಕಿಗೆ ಇಟ್ಟು ಮಲಗುವುದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ವಾಸ್ತು ಶಾಸ್ತ್ರವು ನಿಮ್ಮ ತಲೆಯನ್ನು ಯಾವ ದಿಕ್ಕಿಗಿಟ್ಟು ಮಲಗಬೇಕು, ಯಾವ ದಿಕ್ಕಿಗಿಟ್ಟು ಮಲಗಬಾರದು ಎಂಬುದನ್ನು ತಿಳಿಸುತ್ತದೆ. ಏಕೆಂದರೆ, ಕೆಲ ದಿಕ್ಕುಗಳಲ್ಲಿ ತಲೆಯಿಟ್ಟು ಮಲಗುವುದರಿಂದ ಅನೇಕ ಕಾಯಿಲೆಗಳು ಆವರಿಸುತ್ತವೆ. ವಾಸ್ತು ಪ್ರಕಾರ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂಬುದನ್ನು ತಿಳಿಯೋಣ.
ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ಆಗುವ ಲಾಭಗಳು
ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ,
ಪೂರ್ವ ದಿಕ್ಕನ್ನು ಧರ್ಮಗ್ರಂಥಗಳಲ್ಲಿ ದೇವರು ಮತ್ತು ದೇವತೆಗಳ ದಿಕ್ಕು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ದೇವ-ದೇವತೆಗಳ ಆಶೀರ್ವಾದ ಸಿಗುತ್ತದೆ. ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಹ ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಯಾವಾಗಲೂ ಪೂರ್ವಕ್ಕೆ ತಲೆಯಿಟ್ಟು ಮಲಗಬೇಕು, ಅದು ಅವರ ಏಕಾಗ್ರತೆಯನ್ನು ಸುಧಾರಿಸುತ್ತದೆ. ಆದರೆ ಮಲಗುವಾಗ ಪೂರ್ವದ ಕಡೆಗೆ ಕಾಲಿಡಬಾರದು. ಇದನ್ನು ಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲಾಗಿದೆ.
Chaturmas 2023ಯಲ್ಲಿ ತಪ್ಪದೇ ಈ ರೀತಿ ಮಾಡಿದರೆ, ಸಮೃದ್ಧಿಯ ಕಡಲಲ್ಲಿ ತೇಲಬಹುದು!
ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು
ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಉತ್ತಮ. ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಅಲ್ಲದೆ ನೀವು ಯಾವುದೇ ಮಾನಸಿಕ ಸಮಸ್ಯೆ ಎದುರಿಸುವುದಿಲ್ಲ. ಆದರೆ ನಿಮ್ಮ ಪಾದಗಳನ್ನು ದಕ್ಷಿಣಕ್ಕೆ ಹಾಕಿ ಮಲಗಬೇಡಿ. ಏಕೆಂದರೆ ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.
ನಿದ್ರೆ ಮತ್ತು ನಿದ್ರೆಯ ಅಸ್ವಸ್ಥತೆಗಳು
ವಾಸ್ತುವಿನಲ್ಲಿಲ್ಲಿ ಉತ್ತರವನ್ನು ಅತ್ಯಂತ ಮಂಗಳಕರವಾದ ದಿಕ್ಕು ಎಂದು ಪರಿಗಣಿಸಲಾಗಿದ್ದರೂ, ಈ ದಿಕ್ಕಿಗೆ ಮಲಗುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಈ ದಿಕ್ಕಿನ ತಲ ಇಟ್ಟು ನಿದ್ರಿಸುವುದರಿಂದ, ದೇಹದಲ್ಲಿ ರೋಗಗಳು ಉದ್ಭವಿಸುತ್ತವೆ. ಶಾಸ್ತ್ರ ಮತ್ತು ವಿಜ್ಞಾನದಲ್ಲಿ ಪೂರ್ವ ಮತ್ತು ದಕ್ಷಿಣಕ್ಕೆ ಮಾತ್ರ ತಲೆಯಿಟ್ಟು ಮಲಗಲು ಸಲಹೆ ನೀಡಲಾಗುತ್ತದೆ. ಅಪ್ಪಿತಪ್ಪಿಯೂ ಉತ್ತರ ಮತ್ತು ಪಶ್ಚಿಮಕ್ಕೆ ತಲೆ ಇಟ್ಟು ಮಲಗಬೇಡಿ. ಏಕೆಂದರೆ ಇದು ನಿಮ್ಮ ಜೀವನ ಮತ್ತು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.
International Yoga Day 2023: ಇವರೇ ನೋಡಿ ಮೊದಲ ಯೋಗ ಗುರು
ನಿದ್ರೆಗೆ ಸಂಬಂಧಿಸಿದ ಕೆಲವು ವಿಷಯಗಳು
- ಶಾಸ್ತ್ರಗಳ ಪ್ರಕಾರ, ಸಂಜೆಯ ವೇಳೆ ಮನೆಯೊಳಗೆ ಮಲಗಬಾರದು.
- ಶಾಸ್ತ್ರದ ಪ್ರಕಾರ ಮಲಗುವ ಸುಮಾರು ಎರಡು ಗಂಟೆಗಳ ಮೊದಲು ತಿನ್ನಿರಿ.
- ಮಲಗುವ ಮುನ್ನ ಕೈ ಕಾಲುಗಳನ್ನು ತೊಳೆಯಿರಿ.
- ಮಲಗುವ ಮೊದಲು, ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಮತ್ತು ದೇವರ ಧ್ಯಾನ ಮಾಡಿ.
- ತಡರಾತ್ರಿವರೆಗೆ ಎಚ್ಚರವಿರಬೇಡಿ.
- ಮುರಿದ ಹಾಸಿಗೆಗಳು, ಮುರಿದ ಮಂಚ, ಕೊಳಕು ಹಾಸಿಗೆಗಳು ಮತ್ತು ಗಬ್ಬು ಬಾಯಿಯೊಂದಿಗೆ ಮಲಗಬಾರದು.
- ಎಂದಿಗೂ ಬೆತ್ತಲೆಯಾಗಿ ಮಲಗಬೇಡಿ.
- ನಿರ್ಜನವಾದ ಮನೆ, ಸ್ಮಶಾನ, ಗರ್ಭಗುಡಿ ಮತ್ತು ದೇವಾಲಯದ ಕತ್ತಲೆಯ ಕೋಣೆಯಲ್ಲಿ ಎಂದಿಗೂ ಮಲಗಬೇಡಿ.