Vastu Tips: ಮನೆಯ ಡೋರ್ ಬೆಲ್ ವಾಸ್ತು ಹೀಗಿರಲಿ
ಬೆಳ್ಳಂಬೆಳಿಗ್ಗೆ ಮನೆ ಬಾಗಿಲು ತಟ್ಟಿದ್ರೆ ಒಳ್ಳೆಯದಲ್ಲ. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತದೆ. ಹಾಗಾಗಿಯೇ ಜನರು ಮನೆಗೊಂದು ಬೆಲ್ ಹಾಕಿರ್ತಾರೆ. ಆದ್ರೆ ಈ ಬೆಲ್ ವಾಸ್ತು ಪ್ರಕಾರ ಇಲ್ಲವೆಂದ್ರೆ ಸಮಸ್ಯೆ ಎದುರಾಗುತ್ತದೆ.
ಮನೆ (Home) ಅಂದ್ಮೇಲೆ ಡೋರ್ ಬೆಲ್ (Door Bell) ಇರ್ಲೇಬೇಕು. ಮನೆಗೆ ಬರುವ ಅತಿಥಿ (Guest) ಗಳು ಬಾಗಿಲು ತಟ್ಟೋದು ಅನೇಕ ಬಾರಿ ಒಳಗಿರುವವರಿಗೆ ಕೇಳಿಸೋದಿಲ್ಲ. ಇದ್ರಿಂದ ಮನೆಗೆ ಬಂದವರು ಗಂಟೆಗಟ್ಟಲೆ ಹೊರಗೆ ಕಾಯ್ಬೇಕಾಗಬಹುದು. ಈ ಅನಾನುಕೂಲವನ್ನು ತಪ್ಪಿಸಲು ಬಹುತೇಕ ಎಲ್ಲರ ಮನೆಯಲ್ಲೂ ಡೋರ್ ಬೆಲ್ ಅಳವಡಿಸಲಾಗಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಗೆ ಹಾಕುವ ಡೋರ್ ಬೆಲ್ ಬಗ್ಗೆಯೂ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಮನೆಗೆ ಡೋರ್ ಬೆಲ್ ಅಳವಡಿಸುವ ಮೊದಲು ವಾಸ್ತು (Vastu) ನಿಯಮಗಳನ್ನು ತಿಳಿದಿರುವುದು ಒಳ್ಳೆಯದು. ಡೋರ್ ಬೆಲ್ ವಾಸ್ತು ಸರಿಯಾಗಿದ್ದರೆ ಹಾಗೂ ಸರಿಯಾದ ದಿಕ್ಕಿ (Direction) ನಲ್ಲಿ ನೀವು ಬೆಲ್ ಹಾಕಿದ್ದರೆ ಮನೆಗೆ ಧನಾತ್ಮಕ ಶಕ್ತಿ (Positive Energy) ಯ ಪ್ರವೇಶವಾಗುತ್ತದೆ. ಡೋರ್ ಬೆಲ್ ವಾಸ್ತು ದೋಷ ಕುಟುಂಬಸ್ಥರಿಗೆ ಅನೇಕ ಸಮಸ್ಯೆಯನ್ನುಂಟು ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಧನಾತ್ಮಕ ಶಕ್ತಿ ಹರಡಬೇಕು, ಮನೆಯಲ್ಲಿ ನೆಮ್ಮದಿ ನೆಲೆಸಬೇಕೆಂದ್ರೆ ಯಾವ ರೀತಿಯಲ್ಲಿ ಡೋರ್ ಬೆಲ್ ಹಾಕ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಡೋರ್ ಬೆಲ್ ದಿಕ್ಕಿನ ಬಗ್ಗೆ ಇರಲಿ ಗಮನ :
ಈ ದಿಕ್ಕಿನಲ್ಲಿ ದೇವರ (God) ಮಂತ್ರದ ಡೋರ್‌ಬೆಲ್ ಅಳವಡಿಸಿ : ವಾಸ್ತು ಶಾಸ್ತ್ರದ ಪ್ರಕಾರ, ಮಂತ್ರ ಉಚ್ಚಾರದ ಡೋರ್‌ಬೆಲ್ ನಿಮ್ಮ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಅದರಲ್ಲಿರುವ ಧ್ವನಿ (Sound) ಯು ಮನೆಯಲ್ಲಿ ವಾಸಿಸುವ ಜನರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ನೀವು ನಿಮ್ಮ ಮನೆಗೆ ಮಂತ್ರ ಉಚ್ಚಾರದ ಡೋರ್ ಬೆಲ್ ಅಳವಡಿಸಲು ಬಯಸಿದ್ದರೆ ಅದನ್ನು ಆಗ್ನೇಯ ಗೋಡೆಗೆ ಅಥವಾ ಪೂರ್ವ (East) ದಿಕ್ಕಿಗೆ ಹಾಕಬೇಕು. ಇದ್ರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.
ಹಕ್ಕಿ (Bird) ಚಿಲಿಪಿಲಿ ಡೋರ್ ಬೆಲ್ : ನೀವು ಮನೆಗೆ ಹಕ್ಕಿ ಚಿಲಿಪಿಲಿ ಡೋರ್‌ಬೆಲ್ ಅನ್ನು ಹಾಕಲು ಬಯಸಿದರೆ, ಅದನ್ನು ವಾಯುವ್ಯ ಗೋಡೆಯ ಮೇಲೆ ಹಾಕಿ. ಈ ದಿಕ್ಕಿನಲ್ಲಿ ಇಟ್ಟಿರುವ ಡೋರ್‌ಬೆಲ್ ಅನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಡೋರ್‌ಬೆಲ್‌ನೊಂದಿಗೆ ಶುದ್ಧ ಗಾಳಿ (Pure Air) ಯು ನಿಮ್ಮ ಮನೆಗೆ ಬರುತ್ತದೆ. ಹಕ್ಕಿ ಚಿಲಪಿಲಿ ಕೇಳಿ ಮನಸ್ಸು ಉಲ್ಲಾಸಗೊಳ್ಳುತ್ತದೆ.
ದೊಡ್ಡ ಧ್ವನಿಯ ಡೋರ್‌ಬೆಲ್ ಹಾಕ್ಬೇಡಿ : ಮನಸ್ಸಿಗೆ ಹಿತವೆನಿಸುವ ಡೋರ್ ಬೆಲ್ ಆಯ್ಕೆ ಮಾಡಿಕೊಳ್ಳಬೇಕು. ಕೆಲವರು ದೊಡ್ಡದಾಗಿ ಶಬ್ಧ ಮಾಡುವ ಡೋರ್ ಬೆಲ್ ಬಳಸ್ತಾರೆ. ಈ ದೊಡ್ಡ ಶಬ್ಧದ ಡೋರ್ ಬೆಲ್ ನಮ್ಮ ಮನೆಗೆ ನಕಾರಾತ್ಮಕತೆಯನ್ನು ತರಬಹುದು. ಹಾಗೆಯೇ ಮನಸ್ಸಿನ ನೆಮ್ಮದಿಯನ್ನು ಇದು ಹಾಳ್ಮಾಡಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಕರ್ಕಶವಾಗಿರುವ ಹಾಗೂ ದೊಡ್ಡ ಧ್ವನಿಯ ಡೋರ್ ಬೆಲ್ ಅಳವಡಿಸಬೇಡಿ. ಸುಮಧುರ ಡೋರ್ ಬೆಲ್ ಹಾಕುವ ಮೂಲಕ, ಧನಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವಂತೆ ಮಾಡಿ.
Numerology Today: ಈ ದಿನ ಯಾರೆಗೆಲ್ಲ ಶುಭ, ಯಾರಿಗೆ ಅಶುಭ ತಿಳಿಯಿರಿ
ಪೂಜಾ ಸ್ಥಳದಲ್ಲಿ ಕರೆಗಂಟೆ ಹಾಕ್ಬೇಡಿ : ದೇವಸ್ಥಾನದಲ್ಲಿ ಅಥವಾ ಪೂಜಾ ಸ್ಥಳದ ಬಾಗಿಲಿಗೆ ಡೋರ್ ಬೆಲನ್ನು ಮರೆತು ಕೂಡ ಹಾಕಬೇಡಿ. ಇದರಿಂದಾಗಿ ನಿಮ್ಮ ಮನಸ್ಸು ಚಂಚಲಗೊಳ್ಳುತ್ತದೆ. ಪೂಜೆ ಮಾಡುವ ವೇಳೆ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವಾಗುತ್ತದೆ. ಇದ್ರಿಂದ ಪೂಜೆ ಫಲ ನಿಮಗೆ ಸಂಪೂರ್ಣವಾಗಿ ಸಿಗುವುದಿಲ್ಲ.
ನಾಮಫಲಕದ ಮೇಲೆ ಡೋರ್ ಬೆಲ್ ಹಾಕಿ : ವಾಸ್ತು ಶಾಸ್ತ್ರದ ಪ್ರಕಾರ, ಯಾವಾಗಲೂ ಡೋರ್‌ಬೆಲ್ ಅನ್ನು ನಿಮ್ಮ ನಾಮಫಲಕದ ಮೇಲೆ ಹಾಕಬೇಕು. ಇದ್ರಿಂದಾಗಿ ನಿಮ್ಮ ಸಂಬಂಧಿಕರು ಮತ್ತು ಅತಿಥಿಗಳೊಂದಿಗಿನ ಸಂಬಂಧಗಳು ಮಧುರವಾಗಿರುತ್ತವೆ. ಮನೆಯ ಮುಖ್ಯಸ್ಥರಿಗೂ ಇದರಿಂದ ಬಡ್ತಿ ಸಿಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಪದೆ ಪದೇ ಉಪ್ಪು ಚೆಲ್ಲುತ್ತಿದ್ದೀರಾ? ಅಪಶಕುನದ ಸೂಚನೆ ಇರಬಹುದು ಇದು!