Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಉಚಿತವಾಗಿ ಅಥವಾ ದಾನವಾಗಿ ಪಡೆಯುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವಸ್ತುಗಳನ್ನು ಬೇರೆಯವರಿಂದ ಉಚಿತವಾಗಿ ಪಡೆಯುವುದರಿಂದ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆಯಿದೆ. ಹಾಗಾದರೆ ಯಾವ 4 ವಸ್ತುಗಳನ್ನು ಉಚಿತವಾಗಿ ಪಡೆಯಬಾರದು? ಇಲ್ಲಿದೆ ಮಾಹಿತಿ.

ಈ ವಸ್ತುಗಳನ್ನು ಉಚಿತವಾಗಿ ಪಡೆಯಬಾರದು

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮತ್ತು ವಸ್ತುಗಳ ಸ್ಥಿತಿಗೆ ವಿಶೇಷ ಮಹತ್ವ ನೀಡಲಾಗಿದೆ. ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿನ ಶಕ್ತಿಯ ಸಮತೋಲನ ಕಾಪಾಡಿ, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಬಹುದು ಎಂಬ ನಂಬಿಕೆಯಿದೆ. ಅದೇ ರೀತಿ ವಸ್ತುಗಳನ್ನು ದಾನವಾಗಿ ನೀಡುವುದು ಮತ್ತು ಸ್ವೀಕರಿಸುವುದಕ್ಕೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ. ಆ ಪ್ರಕಾರ ನಾಲ್ಕು ವಸ್ತುಗಳನ್ನು ಬೇರೆಯವರಿಂದ ಉಚಿತವಾಗಿ ಪಡೆಯುವುದನ್ನು ತಪ್ಪಿಸಬೇಕು. ಹಾಗಾದರೆ ಆ ವಸ್ತುಗಳು ಯಾವುವು? ಅವುಗಳನ್ನು ಉಚಿತವಾಗಿ ಯಾಕೆ ಪಡೆಯಬಾರದು ನೋಡೋಣ.

1. ಉಪ್ಪನ್ನು ಉಚಿತವಾಗಿ ಪಡೆಯಬೇಡಿ

ಯಾರಿಂದಲೂ ಉಪ್ಪನ್ನು ಉಚಿತವಾಗಿ ಪಡೆಯಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉಪ್ಪಿಗೂ ಶನಿ ಗ್ರಹಕ್ಕೂ ಸಂಬಂಧವಿದೆ. ಉಚಿತವಾಗಿ ಉಪ್ಪು ಪಡೆಯುವುದು ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು. ಒಂದು ವೇಳೆ ಅನಿವಾರ್ಯವಾಗಿ ಬೇರೆಯವರಿಂದ ಉಪ್ಪು ಪಡೆಯಬೇಕಾದ ಪರಿಸ್ಥಿತಿ ಎದುರಾದರೆ, ಅದಕ್ಕೆ ಪ್ರತಿಯಾಗಿ ಸ್ವಲ್ಪ ಹಣವನ್ನಾದರೂ ನೀಡಬೇಕು. ಉಚಿತವಾಗಿ ಉಪ್ಪು ಪಡೆಯುವುದರಿಂದ ಸಮಸ್ಯೆಗಳು ಎದುರಾಗಬಹುದು.

2. ಬೇರೆಯವರಿಂದ ಕರವಸ್ತ್ರ ಪಡೆಯಬೇಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರವಸ್ತ್ರವನ್ನು ವೈಯಕ್ತಿಕ ಬಳಕೆಯ ವಸ್ತು. ಹಾಗಾಗಿ ಬೇರೆಯವರ ಕರವಸ್ತ್ರವನ್ನು ಬಳಸುವುದು ಅಥವಾ ನಿಮ್ಮ ಕರವಸ್ತ್ರವನ್ನು ಬೇರೆಯವರಿಗೆ ನೀಡುವುದನ್ನು ತಪ್ಪಿಸಬೇಕು. ಕರವಸ್ತ್ರವನ್ನು ಉಡುಗೊರೆಯಾಗಿ ನೀಡುವುದರಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು ಎಂಬ ನಂಬಿಕೆಯೂ ಇದೆ. ಜ್ಯೋತಿಷ್ಯ ನಂಬಿಕೆಗಳ ಹೊರತಾಗಿಯೂ ಇದಕ್ಕೆ ಪ್ರಾಯೋಗಿಕ ಕಾರಣವಿದೆ. ಬೇರೆಯವರ ಕರವಸ್ತ್ರ ಬಳಸುವುದರಿಂದ ಸೋಂಕು ಹರಡುವ ಅಪಾಯವಿರುತ್ತದೆ. ಆದ್ದರಿಂದ ವೈಯಕ್ತಿಕ ಸ್ವಚ್ಛತೆಯ ದೃಷ್ಟಿಯಿಂದಲೂ ನಿಮ್ಮದೇ ಕರವಸ್ತ್ರ ಬಳಸುವುದು ಉತ್ತಮ.

3. ಸಾಸಿವೆ ಎಣ್ಣೆಯನ್ನು ಉಚಿತವಾಗಿ ಪಡೆಯಬೇಡಿ

ಸಾಸಿವೆ ಎಣ್ಣೆಯನ್ನು ಶನಿದೇವನಿಗೆ ಸಂಬಂಧಿಸಿದ ವಸ್ತುವೆಂದು ಪರಿಗಣಿಸಲಾಗುತ್ತದೆ. ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ, ಸಾಸಿವೆ ಎಣ್ಣೆಯನ್ನು ಬೇರೆಯವರಿಂದ ಉಚಿತವಾಗಿ ಪಡೆಯುವುದು ಶುಭವಲ್ಲ. ವಿಶೇಷವಾಗಿ ಶನಿವಾರದಂದು ಸಾಸಿವೆ ಎಣ್ಣೆಯ ವಹಿವಾಟು ಮಾಡುವುದನ್ನು ತಪ್ಪಿಸಬೇಕು. ಬದಲಾಗಿ ಶನಿವಾರದಂದು ದೇವಸ್ಥಾನದಲ್ಲಿ ಶನಿದೇವನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವುದು ಶುಭಕರ.

4. ಕಬ್ಬಿಣವನ್ನು ಉಚಿತವಾಗಿ ತೆಗೆದುಕೊಳ್ಳಬೇಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಬ್ಬಿಣಕ್ಕೂ ಶನಿ ಗ್ರಹಕ್ಕೂ ಸಂಬಂಧವಿದೆ. ಹಾಗಾಗಿ ಕಬ್ಬಿಣದ ವಸ್ತುಗಳನ್ನು ಉಚಿತವಾಗಿ ಪಡೆಯುವುದು ಅಶುಭ. ವಿಶೇಷವಾಗಿ ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಕೊಳ್ಳುವುದು ಅಥವಾ ಬೇರೆಯವರಿಂದ ಪಡೆಯುವುದನ್ನು ತಪ್ಪಿಸಬೇಕು. ಇದರಿಂದ ಶನಿದೇವನ ಅಶುಭ ಪ್ರಭಾವ ಎದುರಾಗಬಹುದು. ಜೀವನದಲ್ಲಿ ಕೆಲಸಕಾರ್ಯಗಳಿಗೆ ಅಡೆತಡೆಗಳು ಉಂಟಾಗಬಹುದು ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.